Thursday, June 18, 2026
Thursday, June 18, 2026

Rotary Club ರೋಟರಿ ರಿವರ್ ಸೈಡ್ ಕ್ಲಬ್ಬಿನ ಸೇವಾ ಚಟುವಟಿಕೆಗಳಿಗೆ ಚಾಲನೆ

Date:

Rotary Club ರೋಟರಿ ಕ್ಲಬ್ ರಿವರ್ ಸೈಡ್, ಇನ್ನರ್‌ವೀಲ್ ಕ್ಲಬ್ ಹಾಗೂ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಘದ ಸಹಯೋಗದಲ್ಲಿ ನೂತನ ಸೇವಾ ಅವಧಿಯ ಸೇವಾ ಚಟುವಟಿಕೆಗಳ ಕಾರ್ಯಕ್ರಮಕ್ಕೆ ತುಂಗಾ ತೀರದಲ್ಲಿ ಚಾಲನೆ ನೀಡಲಾಯಿತು.
ಹಿಂದು ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರಕಾರ ಪವಿತ್ರತೆಯ ಪ್ರತೀಕವಾದ ಗಂಗಾ ಮಾತೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸುವ ಮೂಲಕ ನೂತನ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿ ಮಂಡಳಿ ಅವರು ತಮ್ಮ ಸೇವೆಯ ಅವಧಿಯನ್ನು ಪ್ರಾರಂಭಿಸಿದರು. ಮೂರು ಸಂಘಗಳ ಅಧ್ಯಕ್ಷರು ತಮ್ಮ ತಮ್ಮ ಅವಧಿಯ ದೃಷ್ಟಿಕೋನ ಹಂಚಿಕೊಂಡರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಅಧ್ಯಕ್ಷ ಕೆ.ಎಸ್. ವಿಶ್ವನಾಥ ನಾಯಕ ಮಾತನಾಡಿ, ನಮ್ಮ ಅವಧಿಯಲ್ಲಿ ಮಾನವೀಯ ಸೇವೆಯನ್ನು ಮುಖ್ಯ ಗುರಿಯನ್ನಾಗಿ ಇಟ್ಟು, ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಸೇವೆ ಮಾಡುತ್ತೇವೆ ಎಂದು ಹೇಳಿದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಶೀಲಾ ಸುರೇಶ್ ಮಾತನಾಡಿ, ಮಹಿಳಾ ಶಕ್ತಿ, ಶಿಕ್ಷಣ ಹಾಗೂ ಆರೋಗ್ಯದತ್ತ ನಮ್ಮ ಗಮನವಿದ್ದು, ಸೇವೆಯ ಹಾದಿಯನ್ನು ವಿಸ್ತರಿಸುತ್ತೇವೆ ಎಂದು ಭರವಸೆ ನೀಡಿದರು.
Rotary Club ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಘದ ಅಧ್ಯಕ್ಷ ಆದಿತ್ಯ ಅರುಣ್‌ಕುಮಾರ್ ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಸಂಕಲ್ಪ ವ್ಯಕ್ತಪಡಿಸಿದರು.
ಶಿವಮೊಗ್ಗದ ಕೊರ್ಪಳಯ್ಯ ಛತ್ರದ ತುಂಗಾ ಮಂಟಪದ ಬಳಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ನಿತಿನ್ ಯಾದವ್, ವಲಯ ಸೇನಾನಿ ಎಸ್.ಪಿ. ಶಂಕರ್, ಎಂ.ಆರ್.ಬಸವರಾಜ್, ದೇವೇಂದ್ರಪ್ಪ ಎನ್., ರಾಜೇಂದ್ರ ಕುಮಾರ್, ಕಾರ್ಯದರ್ಶಿ ರೂಪಾ ರವಿ, ರೇಣುಕಮ್ಮ ಕಗ್ಗಲಿ ಮತ್ತು ಅನೇಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...