Rotary Club ರೋಟರಿ ಕ್ಲಬ್ ರಿವರ್ ಸೈಡ್, ಇನ್ನರ್‌ವೀಲ್ ಕ್ಲಬ್ ಹಾಗೂ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಘದ ಸಹಯೋಗದಲ್ಲಿ ನೂತನ ಸೇವಾ ಅವಧಿಯ ಸೇವಾ ಚಟುವಟಿಕೆಗಳ ಕಾರ್ಯಕ್ರಮಕ್ಕೆ ತುಂಗಾ ತೀರದಲ್ಲಿ ಚಾಲನೆ ನೀಡಲಾಯಿತು.
ಹಿಂದು ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರಕಾರ ಪವಿತ್ರತೆಯ ಪ್ರತೀಕವಾದ ಗಂಗಾ ಮಾತೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸುವ ಮೂಲಕ ನೂತನ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿ ಮಂಡಳಿ ಅವರು ತಮ್ಮ ಸೇವೆಯ ಅವಧಿಯನ್ನು ಪ್ರಾರಂಭಿಸಿದರು. ಮೂರು ಸಂಘಗಳ ಅಧ್ಯಕ್ಷರು ತಮ್ಮ ತಮ್ಮ ಅವಧಿಯ ದೃಷ್ಟಿಕೋನ ಹಂಚಿಕೊಂಡರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಅಧ್ಯಕ್ಷ ಕೆ.ಎಸ್. ವಿಶ್ವನಾಥ ನಾಯಕ ಮಾತನಾಡಿ, ನಮ್ಮ ಅವಧಿಯಲ್ಲಿ ಮಾನವೀಯ ಸೇವೆಯನ್ನು ಮುಖ್ಯ ಗುರಿಯನ್ನಾಗಿ ಇಟ್ಟು, ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಸೇವೆ ಮಾಡುತ್ತೇವೆ ಎಂದು ಹೇಳಿದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಶೀಲಾ ಸುರೇಶ್ ಮಾತನಾಡಿ, ಮಹಿಳಾ ಶಕ್ತಿ, ಶಿಕ್ಷಣ ಹಾಗೂ ಆರೋಗ್ಯದತ್ತ ನಮ್ಮ ಗಮನವಿದ್ದು, ಸೇವೆಯ ಹಾದಿಯನ್ನು ವಿಸ್ತರಿಸುತ್ತೇವೆ ಎಂದು ಭರವಸೆ ನೀಡಿದರು.
Rotary Club ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಘದ ಅಧ್ಯಕ್ಷ ಆದಿತ್ಯ ಅರುಣ್‌ಕುಮಾರ್ ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಸಂಕಲ್ಪ ವ್ಯಕ್ತಪಡಿಸಿದರು.
ಶಿವಮೊಗ್ಗದ ಕೊರ್ಪಳಯ್ಯ ಛತ್ರದ ತುಂಗಾ ಮಂಟಪದ ಬಳಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ನಿತಿನ್ ಯಾದವ್, ವಲಯ ಸೇನಾನಿ ಎಸ್.ಪಿ. ಶಂಕರ್, ಎಂ.ಆರ್.ಬಸವರಾಜ್, ದೇವೇಂದ್ರಪ್ಪ ಎನ್., ರಾಜೇಂದ್ರ ಕುಮಾರ್, ಕಾರ್ಯದರ್ಶಿ ರೂಪಾ ರವಿ, ರೇಣುಕಮ್ಮ ಕಗ್ಗಲಿ ಮತ್ತು ಅನೇಕರು ಭಾಗವಹಿಸಿದ್ದರು.
Rotary Club ರೋಟರಿ ರಿವರ್ ಸೈಡ್ ಕ್ಲಬ್ಬಿನ ಸೇವಾ ಚಟುವಟಿಕೆಗಳಿಗೆ ಚಾಲನೆ
Date:
