Monday, May 4, 2026
Monday, May 4, 2026

All India Radio Bhadravati ಭದ್ರಾವತಿ ಬಾನುಲಿಯಲ್ಲಿ ಯುವಜನರಿಗಾಗಿ “ಗೆಲುವಿನ ಗುಟ್ಟು” ಕಾರ್ಯಕ್ರಮ ಸರಣಿ

Date:

All India Radio Bhadravati ಯುವಜನರಲ್ಲಿ ಆತ್ಮಸ್ಥೈರ್ಯ ಕುಂದುತ್ತಿರುವ ಹಿನ್ನಲೆಯಲ್ಲಿ ಅವರಿಗೆ ಆತ್ಮಸ್ಥೈರ್ಯ ತುಂಬಲು ಹಾಗು ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುವ ವಿಶೇಷ ಕಾರ್ಯಕ್ರಮ ಸರಣಿ “ಗೆಲುವಿನ ಗುಟ್ಟು” ಆಕಾಶವಾಣಿ ಭದ್ರಾವತಿ ಕೇಂದ್ರದಿಂದ ಪ್ರತಿ ಶುಕ್ರವಾರ ಬೆಳಿಗ್ಗೆ 09:05ರಿಂದ 09:20ರವರೆಗೆ ಪ್ರಸಾರವಾಗಲಿದೆ.

ಈ ಸರಣಿಯಲ್ಲಿ ವಿವಿಧ ವಿಭಾಗದಲ್ಲಿ ನೈಪುಣ್ಯತೆ ಪಡೆಯುವ ವಿಧಾನ, ಕೌಶಲ್ಯದ ಅವಶ್ಯಕತೆ ಹಾಗೂ ಪಡೆಯುವ ವಿಧಾನ ಮತ್ತು ಜೀವನದಲ್ಲಿ ಯಶಸ್ಸನ್ನು ಪಡೆದ ಹಲವು ಗಣ್ಯರ ಯಶೋಗಾಥೆ ಪ್ರಸಾರವಾಗಲಿದ್ದು ಶಿವಮೊಗ್ಗದ ಪಿ.ಇ.ಎಸ್ ಸಂಸ್ಥೆಯ 52 ವಿಷಯ ಪರಿಣಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.

All India Radio Bhadravati ಪಿ.ಇ.ಎಸ್ ಸಹಯೋಗದಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ಸರಣಿಯನ್ನು ಸಾರ್ವಜನಿಕರು ಉಪಯೋಗ ಪಡೆಯಬೇಕೆಂದು ಭದ್ರಾವತಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ಹಾಗು ಪಿ.ಇ.ಎಸ್ ಸಂಸ್ಥೆಯ ಮುಖ್ಯ ಆಡಳಿತ ಸಂಯೋಜಕರಾದ ಡಾ. ನಾಗರಾಜ್ ಆರ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...