Shivamogga City Karate Association ಸಪ್ಟೆಂಬರ್ ಮೊದಲ ವಾರದಲ್ಲಿ ಜಮ್ಮುವಿನಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಪೊಲೀಸ್ ಗೇಮ್ಸ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ಶಿವಮೊಗ್ಗದ ಮಾಚೇನಹಳ್ಳಿಯ ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆಯ 8ನೇ ಬೆಟಾಲಿಯನ್ ನ ಹೆಡ್ ಕಾನ್ಸ್ಟೇಬಲ್ ಹಾಗೂ ಶೋಟೋಖಾನ್ ವರ್ಲ್ಡ್ ಕರಾಟೆ ಕರ್ನಾಟಕದ ಕರಾಟೆ ತರಬೇತಿದರಾದ ಗೋವಿಂದಸ್ವಾಮಿ ರವರಿಗೆ ವಿನೋಬನಗರದ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ತರಬೇತಿ ಕೇಂದ್ರದಲ್ಲಿ ಸನ್ಮಾನಿಸಲಾಯಿತು.
ಗೋವಿಂದಸ್ವಾಮಿ ರವರು ಮಾಚೇನಹಳ್ಳಿ ಯಲ್ಲಿ ಇರುವ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ಕರಾಟೆ ತರಬೇತಿ ನೀಡುತ್ತಿದ್ದು ಕರಾಟೆ ಬ್ಲಾಕ್ ಬೆಲ್ಟ್ ಸಹ ಆಗಿದ್ದು ಈ ಸಂದರ್ಭದಲ್ಲಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಮತ್ತು ಪ್ರಮುಖರಾದ ಸಚಿನ್ ಅನೂಪ್ ಪ್ರೀತಿ ಶ್ರೀ ಗಣಪತಿ ರುಚಿತಾ ಕಲೀಮ್ ಉಪಸ್ಥಿತರಿದ್ದರು.
