MESCOM ಶಿವಮೊಗ್ಗ ನಗರದ ಹೊಸಮನೆ ಬಡಾವಣೆ ನಿವಾಸಿ ಅಶೋಕ್ ಕುಮಾರ್ (59) ಅವರು ದೊಡ್ಡಮ್ಮ ದೇವಸ್ಥಾನದ ಹತ್ತಿರ ವಾಸವಾಗಿದ್ದು ಕಳೆದ ನಾಲ್ಕು ದಿವಸದಿಂದ ಕಾಣೆಯಾಗಿದ್ದಾರೆ, ಇವರು ಪ್ರತಿನಿತ್ಯ ಸುತ್ತಮುತ್ತಲಿನ ದೇವಸ್ಥಾನಕ್ಕೆ ಹೋಗಿ ಬರುವ ಅಭ್ಯಾಸವಿದ್ದು, ಕಾಣಿಯಾದ ದಿವಸ ಕೂಡ ದೇವಸ್ಥಾನ ಹೋಗಿ ಬರುವುದಾಗಿ ಹೇಳಿ ಹೋದವರು ಇಲ್ಲಿಯ ತನಕ ಬಂದಿರುವುದಿಲ್ಲ, ಇವರ ಚಹರೆ ವರ್ಷ 59, ಸುಮಾರು 5.5 ಅಡಿ ಎತ್ತರ, ತೆಳವಾದ ಮೈಕಟ್ಟುವ ಕೋಲು ಮುಖ, ಗೋದಿ ಮೈಬಣ್ಣ ಮರಾಠಿ ಹಾಗೂ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ.
MESCOM ಹೋಗುವಾಗ ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್‌ನ್ನು ಧರಿಸಿದ್ದರು. ಇವರ ಸುಳಿವು ದೊರೆತಲ್ಲಿ, ಹತ್ತಿರದ ಪೊಲೀಸ್ ಠಾಣೆ ಅಥವಾ ಮೊ : 9019952800 ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದ್ದಾರೆ.
