Monday, December 15, 2025
Monday, December 15, 2025

Klive Special Article ಈ ಶತಮಾನದಲ್ಲಿ ಯೋಗವು ಜಗತ್ತನ್ನು ಒಂದುಗೂಡಿಸಿದೆ

Date:

Klive Special Article ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆಯಾದ ಯೋಗವು ದೈಹಿಕ ಮತ್ತು ಮಾನಸಿಕ ಯೋಗ ಕ್ಷೇಮವನ್ನು ಹೆಚ್ಚಿಸುವ ಅತ್ಯಂತ ವಿಶ್ವಾಸಾರ್ಹ ಸಾಧನಗಳಲ್ಲಿ ಒಂದಾಗಿದೆ. ಯೋಗ ಎಂಬ ಪದವು ಸಂಸ್ಕೃತ ಮೂಲ “ಯುಜ್” ನಿಂದ ಬಂದಿದೆ. ಇದರರ್ಥ ಸೇರುವುದು ಒಗ್ಗೂಡುವುದು. ಇದು ಮನಸ್ಸು ಮತ್ತು ಕ್ರಿಯೆಯ ಸಂಯಮ ಮತ್ತು ನೆರವೇರಿಕೆ. ಮಾನವ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ವಿಧಾನ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಿರಂತರ ಪ್ರಯತ್ನಗಳಿಂದಾಗಿ ಜೂನ್ 21 ದಿನಾಂಕವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು “ಅಂತರಾಷ್ಟ್ರೀಯ ಯೋಗ ದಿನ” ವೆಂದು ಘೋಷಿಸಿತು. ತನ್ನ ನಿರ್ಣಯದಲ್ಲಿ ಯುಎನ್‌ಜಿಎ (UNGA) “ಯೋಗವು ಜೀವನದ ಎಲ್ಲಾ ಅಂಶಗಳ ನಡುವೆ ಸಮತೋಲನವನ್ನು ಸಾಧಿಸುವುದರ ಜೊತೆಗೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ವದಗಿಸುತ್ತದೆ” ಮತ್ತು ಯೋಗಭ್ಯಾಸದ ಪ್ರಯೋಜನಗಳ ಬಗ್ಗೆ ಮಾಹಿತಿಯ ವ್ಯಾಪಕ ಪ್ರಸಾರವು ವಿಶ್ವ ಜನಸಂಖ್ಯೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಅನುಮೋದಿಸಿತು. Klive Special Article 2014ರಲ್ಲಿ ವಿಶ್ವಸಂಸ್ಥೆಯು ಯೋಗವನ್ನು ಅಳವಡಿಸಿಕೊಂಡ ನಂತರ ಜೂನ್ 21ರಂದು ವಿಶ್ವದಾದ್ಯಂತ ಆಚರಿಸಲಾಗುವ ಯೋಗವನ್ನು ಗುರುತಿಸುವ ದಿನವೇ “ಅಂತರಾಷ್ಟ್ರೀಯ ಯೋಗ ದಿನ”
ಪ್ರತಿವರ್ಷದಂತೆ ಯೋಗ ದಿನದಂದು ಒಂದು ಥೀಮ್ ನೊಂದಿಗೆ ಆಚರಿಸಲಾಗುತ್ತದೆ. 2025ರ ಥೀಮ್ “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ” ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ.
ಯೋಗವು ದೈಹಿಕ ಭಂಗಿಗಳು ಉಸಿರಾಟದ ವ್ಯಾಯಾಮಗಳು, ಧ್ಯಾನ ಮತ್ತು ನೈತಿಕ ತತ್ವಗಳನ್ನು ಸಂಯೋಜಿಸುವ ಒಂದು ಶಿಸ್ತು. ಯೋಗದ ಮೂಲತತ್ವವು ಮನಸ್ಸು, ದೇಹ ಮತ್ತು ಆತ್ಮದ ನಡುವೆ ಸಾಮರಸ್ಯವನ್ನು ಸಾಧಿಸುವುದರಲ್ಲಿದೆ.
ಸಾಂಪ್ರದಾಯಿಕವಾಗಿ ನಾಲ್ಕು ವಿಭಿನ್ನ ರೀತಿಯ ಯೋಗಗಳಿವೆ ಕರ್ಮ ಯೋಗ, ಜ್ಞಾನ ಯೋಗ ,ಭಕ್ತಿ ಯೋಗ, ಮತ್ತು ಹಠ ಯೋಗ. ಆಧುನಿಕ ಮಾನವ ಜನಾಂಗದಲ್ಲಿ ಯೋಗ ಮೌಲ್ಯಗಳು ಹಾಗೂ ಆಸನಗಳು, ಪ್ರಾಣಾಯಾಮಗಳು, ಕ್ರಿಯೆಗಳು ಮತ್ತು ಧ್ಯಾನಗಳಂತಹ ಅಭ್ಯಾಸಗಳನ್ನು ಅಳವಡಿಸುವ ಮೂಲಕ ನಾವು ಎಲ್ಲಾ ರೋಗಗಳನ್ನು ತಡೆಗಟ್ಟಬಹುದು. ಯೋಗದ ಮೂಲಕ ಹಿರಿಯ ನಾಗರಿಕರು ತಮ್ಮ ಮಾನಸಿಕ ಸಾಮರ್ಥ್ಯವನ್ನು ಉಳಿಸಿಕೊಳ್ಳಬಹುದು. ದೇಹದ ಆರೋಗ್ಯ ಕಾಪಾಡಿಕೊಳ್ಳಲು ಔಷಧಗಳಿಗಿಂತ ಯೋಗಾಸನಗಳು ಹೆಚ್ಚು ಉಪಯುಕ್ತವಾಗಿದೆ.

ಮಹಿಳೆಯರ ಆರೋಗ್ಯಕ್ಕೆ ಯೋಗಾಸನಗಳೇಕೆ ಮುಖ್ಯ?
ನಿಯಮಿತ ಯೋಗಭ್ಯಾಸದಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಹೀಗಾಗಿ ಯೋಗ ಎಲ್ಲರಿಗೂ ಮುಖ್ಯ ಅದರಲ್ಲೂ ಹೆಣ್ಣು ಮಕ್ಕಳಿಗೆ ಯೋಗ ಕೊಂಚ ಹೆಚ್ಚಿನ ಉಪಯೋಗವನ್ನು ನೀಡುತ್ತದೆ. ಪುರುಷರಿಗಿಂತ ಒಂದು ಕೈ ಹೆಚ್ಚಿನ ಒತ್ತಡ ದೇಹದ ಸೂಕ್ಷ್ಮತೆ ಹೊಂದಿರುವ ಹೆಣ್ಣು ಮಕ್ಕಳಿಗೆ ಯೋಗ ತುಂಬಾ ಮುಖ್ಯ. ಬಹುತೇಕ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಎಂದರೆ ಅದು ಪಿಸಿಓಡಿ (PCOD) ಅಥವಾ ಪಿಸಿಒಎಸ್(PCOS )ಸಮಸ್ಯೆ.
ಅನಿಯಮಿತ ಮುಟ್ಟಿನ ದಿನಗಳು ಗರ್ಭಾವಸ್ಥೆ ಸಮಸ್ಯೆ, ತಲೆನೋವು, ಅತಿಯಾದ ದೇಹದ ತೂಕ ಪಿಸಿಒಡಿಯಿಂದ ಕಾಣಿಸಿಕೊಳ್ಳುತ್ತದೆ. ಇದರ ನಿವಾರಣೆಗೆ ಯೋಗಾಸನಗಳು ಅತ್ಯುತ್ತಮ ಪರಿಹಾರವಾಗಿದೆ. ಭುಜಂಗಾಸನ, ಬಾಲಾಸನ, ವಜ್ರಾಸನ ಸೇರಿದಂತೆ ಅನೇಕ ವ್ಯಾಯಾಮಗಳು ಹಾಗೂ ಪ್ರಾಣಾಯಾಮ ಮುದ್ರೆಗಳು ಕೂಡ ಪಿಸಿಒಎಸ್ ಸಮಸ್ಯೆಗೆ ಪರಿಹಾರ ನೀಡುತ್ತದೆ. ಆದರೆ ನಿಯಮಿತ ಅಭ್ಯಾಸ ಮುಖ್ಯವಾಗಿರುತ್ತದೆ. ಪ್ರತಿ ಹೆಣ್ಣು ಮನೆ ಮಕ್ಕಳು ಉದ್ಯೋಗ ಎಲ್ಲವನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಮಾನಸಿಕ ಸ್ಥಿತಿಯನ್ನು ಸೀಮಿತದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ತಾಳ್ಮೆ ಏಕಾಗ್ರತೆ ಮಹಿಳೆಯರಲ್ಲಿ ಅಗತ್ಯವಾಗಿ ಇರಬೇಕು. ಹೀಗಾಗಿ ಯೋಗ ಪ್ರಾಣಾಯಾಮ ಹೆಚ್ಚು ಉಪಯುಕ್ತವಾಗಿದೆ. ಇದರಿಂದ ಮಾನಸಿಕವಾಗಿ ಒತ್ತಡ ಮುಕ್ತವಾಗಿರಬಹುದು.
ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಯೋಗಾಸನ ಎಷ್ಟು ಮುಖ್ಯವೊ ನಾವು ಸೇವನೆ ಮಾಡುವ ಆಹಾರ ಕೂಡ ಅಷ್ಟೇ ಮುಖ್ಯವಾಗಿರುತ್ತದೆ .ಯೋಗಾಸನದಿಂದ ರೋಗಗಳು ಕಡಿಮೆಯಾಗುವುದಿಲ್ಲ ಬದಲಾಗಿ ನಿಯಂತ್ರಣದಲ್ಲಿರುತ್ತದೆ .ಹೀಗಾಗಿ ರೋಗವನ್ನು ಬರೆದಂತೆ ತಡೆಯಲು ಯೋಗಾಸನಗಳು ಹೆಚ್ಚು ಉಪಯುಕ್ತವಾಗಿದೆ. ಜೊತೆಗೆ ಹಸಿರು ತರಕಾರಿಗಳ ಸೇವನೆ, ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು. ಜಂಕ್ ಫುಡ್ ಗಳಿಂದಲೂ ದೂರ ಇರುವುದು ಒಳ್ಳೆಯದು . ಇಂತಹ ಅಭ್ಯಾಸಗಳಿಂದ ಯೋಗದ ಪೂರ್ಣ ಪ್ರಯೋಜನವನ್ನು ಪಡೆಯಬಹುದು. ನಿಯಮಿತ ಯೋಗದ ಅಭ್ಯಾಸವಿದ್ದರೆ 40 ರಿಂದ 45 ನಿಮಿಷಗಳ ಕಾಲ ಯೋಗ ಮಾಡಿದ ಮೇಲೆ ಐದು ನಿಮಿಷವಾದರೂ ಶವಾಸನವನ್ನು ಮಾಡಲೇಬೇಕು. ಶವಾಸನದಿಂದ ಇಡೀ ದೇಹಕ್ಕೆ ರಿಲ್ಯಾಕ್ಸ್ ನೀಡುತ್ತದೆ. ಜೊತೆಗೆ ಶರೀರದ ಎಲ್ಲಾ ಭಾಗಗಳಿಗೆ ರಕ್ತ ಸಂಚಾರ ಸರಿಯಾಗಿ ಆಗುವಂತೆ ಮಾಡುತ್ತದೆ. ಹೀಗಾಗಿ ಯೋಗಾಭ್ಯಾಸ ಮಾಡಿದ ನಂತರ ಶವಾಸನ ಮಾಡುವುದು ಮಹತ್ವವಾಗಿದೆ. ಮುಖ್ಯವಾಗಿ ಮಹಿಳೆಯರಿಗೆ ಯೋಗಭ್ಯಾಸ ದೇಹದಲ್ಲಿ ಹೆಚ್ಚು ಕ್ಯಾಲೋರಿಗಳನ್ನು ಸುಡಬಹುದು. ಹೀಗಾಗಿ ಶವಾಸನ ದೇಹವನ್ನು ಆರಾಮದಾಯಕ ಸ್ಥಿತಿಗೆ ತರುವಲ್ಲಿ ಸಹಾಯ ಮಾಡುತ್ತದೆ.

ಯೋಗವನ್ನು ನೀ ಮಾಡುತ್ತಿದ್ದರೆ,
ರೋಗವನ್ನು ನೀ ತಡೆಯಬಹುದು,
ಯೋಗ ಮಾಡಿ ಆರೋಗ್ಯವಾಗಿರಿ.

ವಿಶ್ವ ಯೋಗ ದಿನದ ಶುಭಾಶಯಗಳು.

ವೀಣಾ ಚನ್ನವೀರಪ್ಪ,
ಪೂರ್ಣ ಪ್ರಜ್ಞಾ ಯೋಗ ಕೇಂದ್ರ,
ತೇವರಚಟ್ನಹಳ್ಳಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...