Chamber of Commerce Shivamogga ಜೀವನದಲ್ಲಿ ಯಶಸ್ಸು ಸಾಧಿಸಲು ಛಲ, ನಿರಂತರ ಪರಿಶ್ರಮದ ಜತೆಯಲ್ಲಿ ಕುಟುಂಬದ ಸಹಕಾರ ಅತ್ಯಂತ ಮುಖ್ಯ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 421ನೇ ರ‍್ಯಾಂಕ್ ಪಡೆದಿರುವ ಬಿ.ಎಂ.ಮೇಘನಾ ಬೆಳವಾಡಿ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ನಮ್ಮ ಟಿವಿ ಕಚೇರಿಯಲ್ಲಿ ಆಯೋಜಿಸಿದ್ದ ಸಂದರ್ಶನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಆತ್ಮವಿಶ್ವಾಸ ತುಂಬಾ ಮುಖ್ಯ. ಸಾಧನೆಗೆ ಪೂರಕವಾದ ವಾತಾವರಣವನ್ನು ರೂಪಿಸಿಕೊಳ್ಳಬೇಕು. ನನ್ನ ಸಾಧನೆಗೆ ಎಲ್ಲರ ಸಹಕಾರವು ತುಂಬಾ ನೆರವಾಗಿದೆ ಎಂದು ತಿಳಿಸಿದರು.
ನನಗೆ ಭರತನಾಟ್ಯ, ಸಂಗೀತ, ಗಮಕ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದು, ನನ್ನ ಬೆಳವಣಿಗೆಯಲ್ಲಿ ಪ್ರಮುಖವಾದ ಪಾತ್ರ ವಹಿಸಿವೆ. ಪ್ರತಿ ದಿನ 10-12 ಗಂಟೆಗಳ ಕಾಲ ಅಭ್ಯಾಸ ಮಾಡಿ ಏಕಾಗ್ರತೆಯಿಂದ ಪ್ರಯತ್ನಪಟ್ಟ ಪರಿಣಾಮ ರ‍್ಯಾಂಕ್ ಗಳಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಮೇಘನಾ ಅವರ ಸಾಧನೆಗೆ ಯೋಗ, ಪ್ರಾಣಾಯಾಮ, ಧ್ಯಾನವೂ ಸಹಕಾರಿಯಾಗಿದೆ. ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮೇಘನಾ ಸಾಧನೆ ನಿಜಕ್ಕೂ ತುಂಬಾ ಸಂತೋಷ ತಂದಿದೆ ಎಂದು ತಿಳಿಸಿದರು.
Chamber of Commerce Shivamogga ನಂತರ ನಮ್ಮ ಟಿವಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಮೇಘನಾ ಅವರು ದೆಹಲಿಯಲ್ಲಿ ಯುಪಿಎಸ್‌ಸಿ ಪರೀಕ್ಷೆ ಬಗ್ಗೆ ನಡೆಸಿದ ಪ್ರಯತ್ನಗಳ ಬಗ್ಗ ವಿವರಣೆ ನೀಡಿದರು. ಮೇಘನಾ ಅವರ ತಾಯಿ ವಾತ್ಸಲ್ಯ ಮಗಳ ಪರಿಶ್ರಮದ ಬಗ್ಗೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಬಿ.ಜಿ.ಮೋಹನಕುಮಾರ್, ಡಾ. ಎ.ಎಸ್.ವತ್ಸಲಾ, ಕೆ.ವಿ.ಕೌಶಿಕ್, ನಮ್ಮ ಟಿವಿಯ ಶ್ರೀಕಾಂತ್, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್ ಉಪಸ್ಥಿತರಿದ್ದರು.
Chamber of Commerce Shivamogga ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಆತ್ಮವಿಶ್ವಾಸ ತುಂಬಾ ಮುಖ್ಯ : ಬಿ.ಎಂ.ಮೇಘನಾ ಬೆಳವಾಡಿ
Date:
