The Bharat Scouts and Guides Karnataka ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಸಂಸ್ಥೆ ಹಾಗೂ ಶಿವಮೊಗ್ಗ ಜಿಲ್ಲಾ ಸಂಸ್ಥೆ ಸಹಯೋಗದಲ್ಲಿ ಮೂರು ದಿನಗಳ ರಾಜ್ಯಮಟ್ಟದ ಕಬ್ಸ್, ಬುಲ್ ಬುಲ್ಸ್, ಸ್ಕೌಟ್ಸ್, ರೋವರ‍್ಸ್, ರೇಂಜರ್ಸ್ ಮುಕ್ತದಳಗಳ ರ‍್ಯಾಲಿಯನ್ನು ನಗರದ ಬಿಎಚ್ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಆವರಣದಲ್ಲಿ ಮೇ 27, 28 ಮತ್ತು 29ರಂದು ಹಮ್ಮಿಕೊಳ್ಳಲಾಗಿದೆ.
ರಾಜ್ಯಮಟ್ಟದ ರ‍್ಯಾಲಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಭಾಗವಹಿಸುವರು. ಮೂರು ದಿನಗಳ ರ‍್ಯಾಲಿಯ ನೇತೃತ್ವವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ಪ್ರಧಾನ ಆಯುಕ್ತ ಪಿಜಿಆರ್ ಸಿಂಧ್ಯಾ ವಹಿಸುವರು. ಜಿಲ್ಲಾ ಸಂಸ್ಥೆಯ ಅಧ್ಯಕ್ಷ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ನೇರವೇರಲಿದೆ.
The Bharat Scouts and Guides Karnataka ಮೂರು ದಿನಗಳ ರ‍್ಯಾಲಿಯಲ್ಲಿ ಆಕರ್ಷಕ ಚಟುವಟಿಕೆಗಳಾದ ಚಾರಣ, ಪರಿಸರ ಪ್ರಜ್ಞೆ, ಸಾಹಸ ಹಾಗೂ ವಿನೋದ ಚಟುವಟಿಕೆಗಳು, ಅಡುಗೆ ತಯಾರಿಸುವುದು, ಕರಕುಶಲತೆ, ವಸ್ತು ಪ್ರದರ್ಶನ, ಪಥ ಸಂಚಲನ, ಗ್ರಾಮೀಣ ಕ್ರೀಡೆಗಳು, ಯುವಧ್ವನಿ, ಜಾನಪದ ನೃತ್ಯ ಪ್ರದರ್ಶನ, ರಸಪ್ರಶ್ನೆ, ಧ್ವಜಸ್ತಂಭ, ರಚನೆ, ಚಿತ್ರಕಲೆ, ದೇಶಭಕ್ತಿ ಗೀತೆ, ಭಾವೈಕ್ಯತೆ ಗೀತೆಗಳು, ಮುಕ್ತದಳಗಳ ಯಶೋಗಾಥೆ ನೆರವೇರಲಿದೆ ಎಂದು ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ತಿಳಿಸಿದ್ದಾರೆ.