Karnataka State Commission for Protection of Child Rights ಎಲ್ಲ ಇಲಾಖೆಗಳು ಕಡ್ಡಾಯವಾಗಿ ಮಕ್ಕಳ ರಕ್ಷಣಾ ನೀತಿಯನ್ನು ಅನುಸರಿಸಿ ಕಾರ್ಯ ನಿರ್ವಹಿಸಬೇಕು ಹಾಗೂ ನಾವೆಲ್ಲ ಸೇರಿ ಮಕ್ಕಳಿಗೆ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ.ನಾಗಣ್ಣ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಜಿ.ಪಂ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ಅಂಗನವಾಡಿಯ ಮಕ್ಕಳನ್ನು ನಿಯಮಿತವಾಗಿ ಆರೋಗ್ಯ ತಪಾಸಣೆಗೊಳಪಡಿಸಿ, ಗಂಭೀರ ಮತ್ತು ಮಧ್ಯಮ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಎನ್‌ಆರ್‌ಸಿ ಗೆ ದಾಖಲು ಮಾಡಬೇಕು. ಜಿಲ್ಲೆಯಲ್ಲಿ ಅಂಗನವಾಡಿಯಿAದ ಮಕ್ಕಳನ್ನು ಗುರುತಿಸಿ ಎನ್‌ಆರ್‌ಸಿ ಗೆ ದಾಖಲಿಸುವ ಸಂಖ್ಯೆ ಕಡಿಮೆ ಇದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರು, ಸಿಡಿಪಿಓ ಗಳು ಗಮನ ಹರಿಸಿ ಸೂಕ್ತ ಕ್ರಮ ಜರುಗಿಸಬೇಕು. ತಾಲ್ಲೂಕುಗಳಲ್ಲಿ ಸಂಬAಧಿಸಿದ ಅಧಿಕಾರಿಗಳ ಸಮನ್ವಯ ಸಭೆ ನಡೆಸಿ ಈ ಯೋಜನೆ ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳಬೇಕು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. 2024-25 ರಲ್ಲಿ 79 ಬಾಲ್ಯ ವಿವಾಹ ಪ್ರಕರಣ ದಾಖಲಾಗಿದೆ. ಇಷ್ಟೂ ಪ್ರಕರಣಗಳಿಗೆ ಎಫ್‌ಐಆರ್ ದಾಖಲಿಸಿ, ಅನುಸರಣೆ ಕೈಗೊಳ್ಳಬೇಕು. ಬಾಲ ಗರ್ಭಿಣಿಯರಿಗೆ ಪರಿಹಾರ, ಪುನರ್ವಸತಿ ನೀಡಬೇಕು. ಹೆಣ್ಣು ಮಕ್ಕಳ ರಕ್ಷಣಾ ನೀತಿ ಪ್ರಕಾರ ಎಲ್ಲರೂ ಕೆಲಸ ಮಾಡಬೇಕು.
ಮುಖ್ಯವಾಗಿ ಬಾಲ್ಯ ವಿವಾಹಗಳು ಆಗದಂತೆ ಕ್ರಮಗಳನ್ನು ಕೈಗೊಳ್ಳಬೇಕು. ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಅಧಿಕಾರಿಗಳು ಮಾತ್ರವಲ್ಲ, ತಹಶೀಲ್ದಾರ್, ಇಓ, ಡಿಸಿಎಂ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಅಧಿಕಾರಿ, ಶಾಲಾ ಮುಖ್ಯೋಪಾಧ್ಯಯರು, ಪೊಲೀಸ್ ಇಲಾಖೆ ಇತರೆ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ಸಹ ಎಫ್‌ಐಆರ್ ಮಾಡಲು ಅವಕಾಶ ಇದ್ದು ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕು.
ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರಿಗೆ ಮೊದಲ ಹಂತದಲ್ಲಿ ಬಾಲ್ಯ ವಿವಾಹದ ಬಗ್ಗೆ ತಿಳಿಯುವ ಸಂಭವ ಹೆಚ್ಚು ಇರುತ್ತದೆ. ಬಾಲ್ಯ ವಿವಾಹದ ಕುರಿತು ವಿವೇಕ ಹೇಳುವುದಕ್ಕಿಂತ ಶಿಕ್ಷೆಯ ತೀವ್ರತೆ, ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸಬೇಕು. ಬಾಲ್ಯ ವಿವಾಹ ಕುರಿತು ಮೊದಲೇ ಮಾಹಿತಿ ನೀಡುವವರಿಗೆ ಪ್ರೋತ್ಸಾಹ ಧನ ಸಹ ನೀಡಲಾಗುವುದು. ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು ಎಂದರು.
Karnataka State Commission for Protection of Child Rights ಆರೋಗ್ಯ ಇಲಾಖೆಯಲ್ಲಿ ಮಕ್ಕಳ ಸುರಕ್ಷತಾ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು. ಎನ್‌ಆರ್‌ಸಿ ಕೇಂದ್ರಕ್ಕೆ ಹೆಚ್ಚಿನ ಮಕ್ಕಳು ದಾಖಲಾಗಿರುವುದಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು. ಏಪ್ರಿಲ್ ಅಂತ್ಯದವರೆಗೆ 96 ಮಕ್ಕಳು ದಾಖಲಾಗಿರುತ್ತಾರೆ. ಎನ್‌ಆರ್‌ಸಿ ಗೆ ದಾಖಲಾದ ಮಕ್ಕಳ ತಾಯಂದಿರಿಗೆ ನೀಡಬೇಕಾದ ವೇತನ ಬಾಕಿ ಇದೆ. ಸುಮಾರು ರೂ.38,46,000 ಹಣ ಪಾವತಿ ಬಾಕಿ ಇದ್ದು, ಜಿಲ್ಲಾಧಿಕಾರಿಗಳು ಈ ಕುರಿತು ಕ್ರಮ ವಹಿಸಬೇಕೆಂದರು.
ಜಿಲ್ಲಾಸ್ಪತ್ರೆಯ ಎನ್‌ಐಸಿಯು ಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳನ್ನು ದಾಖಲಿಸಲಾಗಿದೆ. ಎನ್‌ಐಸಿಯು ಸಾಮರ್ಥ್ಯವನ್ನು ಮಕ್ಕಳ ಸಂಖ್ಯೆಗನುಗುಣವಾಗಿ ಹೆಚ್ಚಿಸಬೇಕಿದೆ. ಎನ್‌ಐಸಿಯು ಸೇರಿದಂತೆ ಯಾವುದೇ ವಿಭಾಗದಲ್ಲಿ ಮಕ್ಕಳ ವಿಷಯದಲ್ಲಿ ನಿರ್ಲಕ್ಷö್ಯ ತೋರಿದರೆ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಧ್ಯಕ್ಷರು ಹಾಗೂ ಸದಸ್ಯರು ಎಚ್ಚರಿಕೆ ನೀಡಿದರು.
ಹಾಗೂ 10 ರಿಂದ 15 ವರ್ಷದೊಳಗಿನ ಮಕ್ಕಳ ಲಸಿಕಾರಣ ಕಡಿಮೆ ಪ್ರಮಾಣದಲ್ಲಿ ಆಗಿದೆ ಎಂದು ಆಯೋಗದ ಸದಸ್ಯರು ಸಭೆಯ ಗಮನಕ್ಕೆ ತಂದು, ಆರೋಗ್ಯ ಇಲಾಖೆ ಮಕ್ಕಳ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷö್ಯ ತೋರದೇ ಸರ್ಕಾರ ನೀಡುತ್ತಿರುವ ಯೋಜನೆಗಳು, ಹಣವನ್ನು ಸದುಪಯೋಗಪಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 104 ಅಲ್ಟಾçö್ಯಸೌಂಡ್ ಸ್ಕಾö್ಯನಿಂಗ್ ಮಷೀನ್‌ಗಳಿದ್ದು, ಪಿಸಿಪಿಎನ್‌ಡಿಟಿ ಕಾಯ್ದೆ ಪ್ರಕಾರ ನಿಯಮಿತವಾಗಿ ಕ್ರಮ ವಹಿಸಬೇಕು. ತಂಡ ರಚಿಸಿ, ಸ್ಕಾö್ಯನಿಂಗ್ ಸೆಂಟರ್‌ಗಳಿಗೆ ದಿಢೀರ್ ಭೇಟಿ, ತಪಾಸಣೆ ಕೈಗೊಳ್ಳಬೇಕು. ಭ್ರೂಣ ಪತ್ತೆ ಮತ್ತು ಭ್ರೂಣ ಹತ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಡಿಡಿಪಿಐ, ಡಿಡಿಪಿಯು ಮತ್ತು ಬಿಇಓ ಗಳು ಸೇರಿ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಆರ್‌ಟಿಇ ಕಾಯ್ದೆ ಅನುಷ್ಟಾನಗೊಳಿಸಬೇಕು. ಈ ಕಾಯ್ದೆ ಕುರಿತು ಅಧ್ಯಯನ ಮಾಡಿ, ಈ ಕುರಿತು ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಕಾರ್ಯಾಗಾರ ಮಾಡಬೇಕು. ಯಾವುದೇ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದAತೆ ಕ್ರಮ ಕೈಗೊಳ್ಳಬೇಕು. ಆಯೋಗಕ್ಕೆ ಬರುವ ದೂರುಗಳ ಪೈಕಿ ಶೇ.30 ರಷ್ಟು ಆರ್‌ಟಿಇ ಗೆ ಸಂಬAಧಿಸಿದ್ದಾಗಿದ್ದು ಇನ್ನು ಮುಂದೆ ಈ ಕುರಿತು ದೂರು ಬಾರದಂತೆ ಈ ಕಾಯ್ದೆ ಅನುಷ್ಟಾನವಾಗಬೇಕು. ಖಾಸಗಿ ಶಾಲೆಗಳ ವೆಬ್‌ಸೈಟ್‌ನಲ್ಲಿ ಶಾಲಾ ಶುಲ್ಕದ ಕುರಿತು ಮಾಹಿತಿ ಹಾಕಬೇಕು. ಶಾಲೆಗಳ ಮಾನ್ಯತೆ ನವೀಕರಣ ವೇಳೆ ಎಲ್ಲ ಮಾರ್ಗಸೂಚಿಗಳನ್ನು ಪರಿಶೀಲಿಸಬೇಕು ಎಂದರು.
ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಆರ್‌ಡಿಪಿಆರ್ ಮತ್ತು ಶಾಲಾ ಶಿಕ್ಷಣ ಇಲಾಖೆಗಳ ಅಂಕಿ ಅಂಶಗಳು ತಾಳೆಯಾಗುತ್ತಿಲ್ಲ. ಸಾಕಷ್ಟು ವ್ಯತ್ಯಾಸ ಇದೆ. ಇದನ್ನು ಸರಿಪಡಿಸಿಕೊಳ್ಳಬೇಕು. ಶಾಲೆಯಿಂದ ಮಕ್ಕಳು ಹೊರಗುಳಿದ ಕಾರಣ ಗುರುತಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು. ಶಾಲೆಗೆ ಮರಳಿ ಬರಲು ಕೇವಲ ಮನವೊಲಿಸಿದರೆ ಸಾಲದು, ಮಕ್ಕಳು ಅನಾರೋಗ್ಯದಿಂದ ಇದ್ದಾರಾ, ವಿಕಲಚೇತನರಾ, ಏಕ ಪೋಷಕ, ಅಥವಾ ಅನಾಥರು ಹೀಗೆ ಗುರುತಿಸಿ ವರದಿ ನೀಡಿದಲ್ಲಿ ಸೂಕ್ತ ಪರಿಹಾರ ಸಾಧ್ಯವಾಗುತ್ತದೆ ಎಂದು ಸದಸ್ಯರು ತಿಳಿಸಿದರು.
ಅಧ್ಯಕ್ಷರು ಮಾತನಾಡಿ, ಶಾಲೆಗಳು ಮುಚ್ಚಲು ಮುಖ್ಯ ಕಾರಣ ಅಂಗನವಾಡಿಯೊAದಿಗೆ ಉತ್ತಮ ಸಂಬAಧ ಸಾಧಿಸದೇ ಇರುವುದು. ಅಂಗನವಾಡಿಗೆ ಶಾಲೆಯಿಂದ ಭೇಟಿ ನೀಡಿ, ಪೋಷಕರು, ಮಕ್ಕಳಿಗೆ ಸರ್ಕಾರಿ ಶಾಲೆಗೆ ಬರುವಂತೆ ಮನವೊಲಿಸಬೇಕು. ಅಂಗನವಾಡಿಗಳೊAದಿಗೆ ಶಾಲೆಗಳು ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕೆಂದರು.
ಸದಸ್ಯರು, ಡಿಡಿಪಿಐ ಮತ್ತು ಡಿಡಿಪಿಯು ಶಾಲಾ, ಕಾಲೇಜುಗಳಲ್ಲಿ ಮಕ್ಕಳ ರಕ್ಷಣಾ ನೀತಿಯನ್ನು ಖಾತ್ರಿಪಡಿಸಬೇಕು. ಮಾರ್ಗಸೂಚಿಯನ್ವಯ ಕೋಚಿಂಗ್ ಸೆಂಟರ್‌ಗೆ ಅನುಮತಿ ನೀಡಬೇಕು. ಅನಧಿಕೃತ ಕೋಚಿಂಗ್ ಸೆಂಟರ್ ಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಬಿಸಿಎA, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ತಮ್ಮ ವ್ಯಾಪ್ತಿಯ ವಸತಿನಿಲಯಗಳಲ್ಲಿ ಮುಖ್ಯವಾಗಿ ಹೆಣ್ಣು ಮಕ್ಕಳು ಸೇರಿದಂತೆ ಮಕ್ಕಳ ರಕ್ಷಣಾ ನೀತಿಯನ್ನು ಖಾತ್ರಿಪಡಿಸಬೇಕು. ಹೆಣ್ಣು ಮಕ್ಕಳ ಹಾಸ್ಟೆಲ್‌ನಲ್ಲಿ ಮಹಿಳಾ ಅಧೀಕ್ಷಕರು ಮತ್ತು ಸಿಬ್ಬಂದಿಯನ್ನು ನೇಮಿಸಬೇಕು. ಭದ್ರತಾ ಸಿಬ್ಬಂದಿ ನಿಯೋಜನೆ, ಚಲನವಲನ ವಹಿ ನಿರ್ವಹಣೆ ಸೇರಿದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಲಭಿಸಬೇಕಾದ ಎಲ್ಲ ಮೂಲಭೂತ ಸೌಕರ್ಯ, ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಬೇಕು. ದೌರ್ಜನ್ಯ, ಪೋಕ್ಸೋ ಪ್ರಕರಣಗಳು ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಆರ್‌ಡಿಪಿಆರ್ ಇಲಾಖೆಯಿಂದ ಪ್ರತಿ ಗ್ರಾ.ಪಂ ಯಲ್ಲಿ ಮಕ್ಕಳ ಸ್ನೇಹಿ ಅಭಿಯಾನ, ಚಟುವಟಿಕೆಗಳನ್ನು ಕೈಗೊಳ್ಳಬೇಕು. ಕಾರ್ಮಿಕ ಇಲಾಖೆ ವತಿಯಿಂದ ನಿಯಮಿತವಾಗಿ ದಾಳಿ ನಡೆಸಿ ಕಿಶೋರ ಮತ್ತು ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ, ಪರಿಹಾರ, ಪುನರ್ವಸತಿ, ಸೂಕ್ತ ಕ್ರಮ ವಹಿಸಬೇಕು. ಬಾಲಕಾರ್ಮಿಕತೆಯನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ ಸಿಇಓ ಎನ್.ಹೇಮಂತ್, ಆಯೋಗದ ಸದಸ್ಯರಾದ ವೆಂಕಟೇಶ್, ಡಾ.ಕೆ.ಟಿ.ತಿಪ್ಪೇಸ್ವಾಮಿ, ಶಶಿಧರ್ ಕೋಸಂಬೆ, ಶ್ರೀಮತಿ ಮಂಜು, ಅಪರ್ಣಾ ಎಂ ಕೊಳ್ಳ, ಶೇಖರೇಗೌಡ ಜಿ ರಾಮತ್ನಾಳ, ಜಿಲ್ಲಾ ಮಟ್ಟದ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಬಾಲ ನ್ಯಾಯ ಮಂಡಳಿ ಸದಸ್ಯರು, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
Karnataka State Commission for Protection of Child Rights ಮಕ್ಕಳಿಗಾಗುತ್ತಿರುವ ಅನಾಹುತಗಳನ್ನ ನಾವೆಲ್ಲಾ ಸೇರಿ ತಪ್ಪಿಸಬೇಕು- ಕೆ.ನಾಗಣ್ಣಗೌಡ
Date: