Saturday, December 6, 2025
Saturday, December 6, 2025

Rotary Pre-Educational & Charitable Trust ರೋಟರಿ ಪೂರ್ವ ಶಾಲೆಯ ಸರ್ವತೋಮುಖ ಪ್ರಗತಿಗೆ ತಮ್ಮೊಂದಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು- ಎಂ.ಚಂದ್ರಶೇಖರಯ್ಯ

Date:

Rotary Pre-Educational & Charitable Trust ರೋಟರಿ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ನಲ್ಲಿ ೩ ವರ್ಷಗಳಿಗೊಮ್ಮೆ ಬದಲಾಗುವ ಮ್ಯಾನೇಜಿಂಗ್ ಟ್ರಸ್ಟಿ ಹುದ್ದೆಯಲ್ಲಿ ರೋಟರಿ ಪೂರ್ವ ಆಂಗ್ಲ ಶಾಲೆ ಹಾಗೂ ರೋಟರಿ ಪೂರ್ವ ಚಿತಾಗಾರದಲ್ಲಿ ಸರ್ವತೋಮುಖವಾಗಿ ಸೇವೆ ಸಲ್ಲಿಸಿದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ನಿವೃತ್ತ ಡಿ.ಪಿ.ಐ. ರೊ. ಚಂದ್ರಶೇಖರಯ್ಯ ಎಂ., ಹಾಗೂ ನೂತನ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಅಧಿಕಾರ ವಹಿಸಿಕೊಂಡ ರೊ. ಕೆ.ಬಿ. ರವಿಶಂಕರ್ ಇವರಿಗೆ ರೋಟರಿ ಪೂರ್ವ ಟ್ರಸ್ಟ್ ಹಾಗೂ ರೋಟರಿ ಶಾಲಾ ವತಿಯಿಂದ ಹೃದಯಪೂರ್ವಕ ಬೀಳ್ಕೊಡಿಗೆ ಹಾಗೂ ಸ್ವಾಗತ ಕಾರ್ಯಕ್ರಮವನ್ನು ಇಂದು ರೋಟರಿ ಪೂರ್ವ ಶಾಲಾ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಟ್ರಸ್ಟ್ನ ಉಪಾಧ್ಯಕ್ಷರಾಗಿ(ಶಾಲಾ ಶಿಕ್ಷಣ) ಕಳೆದ ಮೂರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್ ಹಾಗೂ ರೋಟರಿ ಶಾಲಾ ಕಛೇರಿ ಹಾಗೂ ಟ್ರಸ್ಟ್ನಲ್ಲಿ ಕಳೆದ ೭ ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಹೊರ ಹೋಗುತ್ತಿರುವ ಕು. ಆಶ್ರಯ ಎಂ.ಕೆ. ಇವರುಗಳಿಗೆ ಆತ್ಮೀಯ ಬೀಳ್ಕೊಡಿಗೆ ನೀಡಲಾಯಿತು.
ಸಮಾರಂಭದಲ್ಲಿ ಟ್ರಸ್ಟ್ನ ಪದಾಧಿಕಾರಿಗಳಾದ ಉಪಾಧ್ಯಕ್ಷ (ಚಿತಾಗಾರ ನಿರ್ವಹಣೆ) ರೊ. ಸುರೇಶ್ ಕುಮಾರ್, ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಸಹ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಆಂತರಿಕ ಲೆಕ್ಕ ಪರಿಶೋಧಕ ರೊ. ಚಂದ್ರಹಾಸ್ ಪಿ. ರಾಯ್ಕರ್, ಪೇಟ್ರನ್ ಟ್ರಸ್ಟಿ ರೊ. ಕಡಿದಾಳ್ ಗೋಪಾಲ್, ಬೋರ್ಡ್ ಆಫ್ ಟ್ರಸ್ಟಿ ರೊ. ಮಧು ಹೆಚ್.ಎಂ., ಟ್ರಸ್ಟಿ ರೊ. ಸೂರ್ಯನಾರಾಯಣ್ ಹೆಚ್.ಎಸ್., ರೊ. ಹೇಮಂತ್ ಎಂ.ಸಿ. ಹಾಗೂ ಸಮಾರಂಭದ ಮುಖ್ಯ ಅತಿಥಿಗಳಾದ ರೋಟರಿ ಪೂರ್ವದ ಅಧ್ಯಕ್ಷ ರೊ. ಅರುಣ್ ಎಸ್. ದೀಕ್ಷಿತ್ ಇವರುಗಳು ಬೀಳ್ಕೊಡಿಗೆ ಸ್ವೀಕರಿಸಿದ ಅತಿಥಿಗಳ ಸೇವೆಯನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿ ಮಾತನಾಡಿದರು.
Rotary Pre-Educational & Charitable Trust ಅದೇ ರೀತಿ ರೋಟರಿ ಶಾಲೆ ಪ್ರಾಂಶುಪಾಲರಾದ ಸೂರ್ಯನಾರಾಯಣ್, ಶಿಕ್ಷಕಿಯರಾದ ಸುಷ್ಮಾ ಬಿ.ಎಲ್., ದೀಪಿಕಾ ಪಿ., ಇವರುಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಮ್ಯಾನೇಜಿಂಗ್ ಟ್ರಸ್ಟಿಯ ಅಧಿಕಾರ ಹಸ್ತಾಂತರಿಸಿ, ಬೀಳ್ಕೊಡಿಗೆ ಸ್ವೀಕರಿಸಿದ ರೊ. ಚಂದ್ರಶೇಖರಯ್ಯ ಎಂ., ಇವರು ತಮ್ಮ ಅವಧಿಯಲ್ಲಿ ಎಲ್ಲಾ ಪದಾಧಿಕಾರಿಗಳ, ಬೋರ್ಡ್ ಆಫ್ ಟ್ರಸ್ಟಿಗಳ, ಟ್ರಸ್ಟಿಗಳ ಹಾಗೂ ಬೋಧಕ ವರ್ಗದ ಸಹಕಾರ ಹಾಗೂ ಬೆಂಬಲದಿಂದ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮ ಪಡಿಸುವುದರ ಜೊತೆಗೆ ಕಳೆದ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.೧೦೦ ಫಲಿತಾಂಶ ಪಡೆಯಲು ಸಾಧ್ಯವಾಯಿತು ಎನ್ನುತ್ತಾ, ಹೊಸ ಮ್ಯಾನೇಜಿಂಗ್ ಟ್ರಸ್ಟಿ ರೊ. ಕೆ.ಬಿ. ರವಿಶಂಕರ್ ಹಾಗೂ ಬೋರ್ಡ್ ಆಫ್ ಟ್ರಸ್ಟಿಗಳಿಗೆ ಸ್ವಾಗತ ಕೋರಿ, ಮುಂದಿನ ೩ ವರ್ಷಗಳ ಅವಧಿಯಲ್ಲಿ ಟ್ರಸ್ಟ್ನ ಅಡಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ಮೂಡಿಬಂದು ರೋಟರಿ ಪೂರ್ವದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಲಿ ಎಂದು ಆಶಿಸಿದರು. ಅದೇ ರೀತಿ ಬೀಳ್ಕೊಡಿಗೆ ಸ್ವೀಕರಿಸಿದ ರೊ. ಪರಮೇಶ್ವರ್ ಡಿ. ಶಿಗ್ಗಾಂವ್ ಹಾಗೂ ಕಛೇರಿ ಅಧೀಕ್ಷಕಿ ಕು. ಆಶ್ರಯ ಇವರು ತಮಗೆ ಉತ್ತಮ ಸೇವೆ ಸಲ್ಲಿಸಲು ಅವಕಾಶ ದೊರೆತ್ತಿದ್ದಕ್ಕಾಗಿ ಹಾಗೂ ಬೀಳ್ಕೊಡಿಗೆ ನೀಡಿದ್ದಕ್ಕಾಗಿ ಟ್ರಸ್ಟ್ಗೆ ಕೃತಜ್ಞತೆ ಸಲ್ಲಿಸಿದರು.
ಮ್ಯಾನೇಜಿಂಗ್ ಟ್ರಸ್ಟಿಯಾಗಿ ಅಧಿಕಾರ ಸ್ವೀಕರಿಸಿದ ರೊ. ರವಿಶಂಕರ್ ಇವರು ಮುಂದಿನ ೩ ವರ್ಷಗಳಲ್ಲಿ ಟ್ರಸ್ಟ್ನ ಅಡಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದು ಕನಸು ಕಂಡಿದ್ದು, ಅದನ್ನು ಸಾಕಾರಗೊಳಿಸಲು ಎಲ್ಲಾ ಬೋರ್ಡ್ ಆಫ್ ಟ್ರಸ್ಟಿಗಳ ಹಾಗೂ ಶಿಕ್ಷಕ ವೃಂದದವರ ಸಹಕಾರ ಕೋರಿದರು.
ಇದೇ ವೇದಿಕೆಯಲ್ಲಿ 202ರ ಅಂತರಾಷ್ಟ್ರೀಯ ರೋಟರಿ ಜಿಲ್ಲೆ ೩೧೮೨ ಇದರ ಗವರ್ನರ್ ಆಗಲಿರುವ ರೋಟರಿ ಶಿವಮೊಗ್ಗ ಪೂರ್ವ ರೊ. ವಸಂತ್ ಹೋಬಳಿದ್ದಾರ್ ಇವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತರು ರೋಟರಿ ಶಾಲೆ ಹಾಗೂ ಚಿತಾಗಾರದಲ್ಲಿ ಇತ್ತಿಚಿನ ವರ್ಷಗಳಲ್ಲಿ ಸಾಧಿಸಿದ ಅಭಿವೃದ್ಧಿ ಶ್ಲಾಘನೀಯ ಎನ್ನುತ್ತಾ, ಅದಕ್ಕೆ ಕಾರಣೀಭೂತರಾದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಎಲ್ಲಾ ಪದಾಧಿಕಾರಿಗಳ ಸೇವೆಯನ್ನು ಸ್ಮರಿಸುವುದರ ಜೊತೆಗೆ ಶಾಲೆಯ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸ್ಮಾರ್ಟ್ ಕ್ಲಾಸ್‌ಗಳನ್ನು ಪರಿಣಾಮಕಾರಿಯಾಗಿ ಬಳಸಬೇಕೆಂದು ಸಲಹೆ ನೀಡಿದರು. ಈ ಸಮಾರಂಭದಲ್ಲಿ ಅನೇಕ ಟ್ರಸ್ಟಿಗಳು ಹಾಗೂ ರೋಟರಿ ಸದಸ್ಯರುಗಳು ಉಪಸ್ಥಿತರಿದ್ದರು.
ಪ್ರಾಸ್ತವಿಕ ಹಾಗೂ ಸ್ವಾಗತ ಭಾಷಣವನ್ನು ಟ್ರಸ್ಟ್ನ ಖಜಾಂಚಿ ರೊ. ವಿಜಯ್ ಕುಮಾರ್ ಇವರು ನಿರ್ವಹಿಸಿದರೆ, ನೂತನ ಉಪಾಧ್ಯಕ್ಷೆ ರೊ. ಎಸ್.ಆರ್. ನಾಗವೇಣಿ ಇವರು ವಂದನಾರ್ಪಣೆ ಮಾಡಿದರು. ಸಹ ಶಿಕ್ಷಕಿ ಶ್ರೀಮತಿ ಕಾವ್ಯ ಬಿ.ಎಸ್. ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...