Monday, March 30, 2026
Monday, March 30, 2026

The District Child Labour Planning Society ಜಿಲ್ಲಾ ಕಾರ್ಮಿಕ ಇಲಾಖೆಯಿಂದ ಶಿರಾಳಕೊಪ್ಪದಲ್ಲಿ‌ ಇಬ್ಬರು ಬಾಲಕರು ಮತ್ತು‌ ಓರ್ವ‌ ಕಿಶೋರ ಕಾರ್ಮಿಕರ ಪತ್ತೆ

Date:

The District Child Labour Planning Society ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆಯನ್ವಯ ಏ.28 ರಂದು ಶಿಕಾರಿಪುರ ತಾಲ್ಲೂಕಿನಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ ಇವರ ಸಂಯುಕ್ತಾಶ್ರಯದಲ್ಲಿ ಶಿರಾಳಕೊಪ್ಪದಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿದಾಗ ಉಪ್ಪಿನಕಾಯಿ ತಯಾರಿಕಾ ಘಟಕದಲ್ಲಿ 02 ಬಾಲಕಾರ್ಮಿಕರು ಹಾಗೂ 01 ಕಿಶೋರ ಕಾರ್ಮಿಕ ಪತ್ತೆಯಾಗಿರುತ್ತಾರೆ.

ಈ ಬಾಲಕರನ್ನು ರಕ್ಷಿಸಿ ಪುನರ್ವಸತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ.
ಘಟಕದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದು ಅಥವಾ ಕೆಲಸ ಮಾಡಲು ಅವಕಾಶ ಮಾಡಿಕೊಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ನೇಮಿಸಿಕೊಂಡ ಮಾಲೀಕರ ವಿರುದ್ಧ ರೂ.20,000/- ರಿಂದ ರೂ.50,000/-ಗಳವರೆಗೆ ದಂಡವನ್ನು ಅಥವಾ 6 ತಿಂಗಳಿನಿಂದ 2 ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಅರಿವು ಮೂಡಿಸಲಾಯಿತು.
The District Child Labour Planning Society ಈ ತಪಾಸಣೆಯಲ್ಲಿ ಫಕೀರಪ್ಪ ಗೋಡಿ ಕಾರ್ಮಿಕ ನಿರೀಕ್ಷಕರು ಶಿಕಾರಿಪುರ, ರಘುನಾಥ ಎ.ಎಸ್ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆಯ ಮೂರ್ತಿ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳಾದ ಅರ್ಪಿತ, ದೀಪ್ತಿ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಎಲ್ಲರೂ ಸಹಬಾಳ್ವೆ,ಸಹಕಾರ ಸೇವಾ ಮನೋಭಾವನೆಯಿಂದ ಬಾಳಬೇಕೆಂಬುದೇ ಮಹಾವೀರರ ಸಂದೇಶ- ಕೆ. ರಂಗನಾಥ್

ನಮ್ಮೂರ ಬಳಗದ ವತಿಯಿಂದ ಭಾರತೀಯ ಧಾರ್ಮಿಕ ಸುಧಾರಕರು ಮತ್ತು ಆಧ್ಯಾತ್ಮಿಕ ನಾಯಕರು...

Adichunchabagiri Education Trust ದೇಹ ಆರೋಗ್ಯವಾಗಿದ್ದರೆ, ದೇಶವೂ ಆರೋಗ್ಯ- ಶ್ರೀನಾದಮಾಯಾನಂದನಾಥಶ್ರೀ

ದೇಹದ ಆರೋಗ್ಯ ಉತ್ತಮವಾಗಿದ್ದರೆ, ದೇಶದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಶ್ರೀ ಆದಿ...

Klive Special Article ಮರೆಯಲಾಗದ ಮಾನವೀಯ ಸಂದೇಶ ಸಾರಿದ ಶ್ರೀಮಹಾವೀರ. ...

Klive Special Article ಜನ ಸಂಸ್ಕೃತಿಗಳು ನಿಂತ ನೀರಾದಾಗಲೆಲ್ಲಾ ಅದನ್ನು...