Saturday, December 6, 2025
Saturday, December 6, 2025

Karnataka Janapada Academy ಜಾನಪದ ಅಕಾಡೆಮಿಯಿಂದ 2024 ನೇ ಸಾಲಿನ ಪ್ರಥಮ‌ ಆವೃತ್ತಿ‌ಯುಳ್ಳ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

Date:

Karnataka Janapada Academy ಕರ್ನಾಟಕ ಜಾನಪದ ಅಕಾಡೆಮಿಯು 2024 ನೇ ಸಾಲಿನಲ್ಲಿ ದಿನಾಂಕ:01.01.2024 ರಿಂದ 31.12.2024ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ (ತಾಂತ್ರಿಕ ಹಾಗೂ ಪೂರ್ವಭಾವಿ ಪುಟಗಳನ್ನು ಹೊರತುಪಡಿಸಿ) ಕನಿಷ್ಟ 150 ಪುಟಗಳಿಗೂ ಮೇಲ್ಪಟ್ಟಿರುವಂತೆ, ಜನಪದ ಗದ್ಯ, ಜನಪದ ವಿಚಾರ-ವಿಮರ್ಶೆ- ಸಂಶೋಧನೆ, ಜನಪದ ಪದ್ಯ ಹಾಗೂ ಜನಪದ ಸಂಕೀರ್ಣ ಎಂಬ ನಾಲ್ಕು ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿಯಲ್ಲಿ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಲೇಖಕರು/ ಪ್ರಕಾಶಕರು/ ಸಂಪಾದಕರುಗಳು ತಮ್ಮ 1 ಕೃತಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 ಇವರಿಗೆ ಮೇ 20 ರೊಳಗೆ ತಲುಪುವಂತೆ ಖುದ್ದಾಗಿ, ಕೊರಿಯರ್ ಅಥವಾ ಅಂಚೆ ಮೂಲಕ ಕಳುಹಿಸಿಕೊಡಲು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್‌ರವರು ತಿಳಿಸಿದ್ದಾರೆ.

Karnataka Janapada Academy ಈ ಪುಸ್ತಕವು ತಜ್ಞರಿಂದ ಪ್ರಕಾರವಾರು ಆಯ್ಕೆಯಾದಲ್ಲಿ, ನಂತರ ಪುಸ್ತಕ ಬಹುಮಾನಕ್ಕೆ ಲೇಖಕರಿಂದ ಉಳಿದಂತೆ 03 ಪ್ರತಿಗಳನ್ನು ಮೌಲ್ಯಮಾಪಕರ ಪರಿಶೀಲನೆಗೆ ತರಿಸಿಕೊಳ್ಳಲಾಗುವುದು.

ವಿ.ಸೂ – ಈಗಾಗಲೇ ಪುಸ್ತಕ ಬಹುಮಾನ ಪಡೆದ ಸಂಪಾದಕರು / ಲೇಖಕರು ಮತ್ತೆ ಪುಸ್ತಕ ಬಹುಮಾನ ಯೋಜನೆಗೆ ಕೃತಿಗಳನ್ನು ಕಳುಹಿಸಬಾರದಾಗಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 080-22215509 ನ್ನು ಸಂಪರ್ಕಿಸುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...