Shivaganga Yoga Center ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ೪೨೧ನೇ ರ್ಯಾಂಕ್ ಗಳಿಸಿದ ಬಿ.ಎಂ.ಮೇಘನಾ ಗೆ ಶಿವಮೊಗ್ಗ ವಿವೇಕ್ ಹಾಗೂ ಶಿವಗಂಗಾ ಯೋಗ ಕೇಂದ್ರ ಅಶ್ವತ್ಥನಗರ ನಿವಾಸಿಗಳ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ರಾಜ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯರು ಮಾತನಾಡಿ, ಸಾಧನೆ ಸಾಧಕ ಸ್ವತ್ತೆ ಹೊರತು, ಸೋಮಾರಿಯ ಸ್ವತ್ತಲ್ಲ. ಮೀಘನಾರವರು ಪ್ರತಿ ದಿನ 10 ರಿಂದ 12 ಗಂಟೆಗಳ ಕಾಲ ಅಭ್ಯಾಸ ಮಾಡಿ ಏಕಾಗ್ರತೆ ಹಾಗೂ ಛಲದಿಂದ ಮತ್ತು ಆತ್ಮ ವಿಶ್ವಾಸದಿಂದ ಈ ಸಾಧನೆ ಮಾಡಿದ್ದಾರೆ. ಇವರ ಸಾಧನೆ ಇಂದಿನವರಿಗೆ ಮಾರ್ಗದರ್ಶನವಾಗಿದೆ. ಮೇಗನಾರವರಿಗೆ ತಂದೆ ತಾಯಿ ಆಶೀರ್ವಾದ ಮತ್ತು ಸಂಸ್ಕಾರ ಹಾಗೂ ಇವರ ವಿದ್ಯಾಭ್ಯಾಸದಲ್ಲಿ ಯೋಗವನ್ನು 1 ವಿಷಯವನ್ನಾಗಿ ತೆಗೆದುಕೊಂಡು ಅಭ್ಯಾಸ ಮಾಡಿದ್ದಾರೆ. ಆದ್ದರಿಂದ ಈ ರೀತಿಯ ಯಶಸ್ಸು ಸಿಕ್ಕಿದೆ ಎಂದು ನುಡಿದರು.
ಜೆಸಿಐನ ಅಧ್ಯಕ್ಷರಾದ ಮಂಜುಳಾ ಕೇಶವ್ ರವರು ಮಾತನಾಡಿ, ನಮ್ಮ ಜೆಸಿಐ ಸಂಸ್ಥೆ ಸಮಾಜದಲ್ಲಿ ಉತ್ತಮವಾದ ರೀತಿಯಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಗೆ ಕೀರ್ತಿ ತಂದಿದ ಮೇಘನಾರವರನ್ನು ಸನ್ಮಾನಿಸಿ ಗೌರವಿಸಿದ್ದೇವೆ. ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ. ಮೇಘನಾರವರು ಭರತನಾಟ್ಯ, ಸಂಗೀತ, ಗಮಕ ಸೇರಿದಂತೆ ಇನ್ನೂ ಹಲವಾರು ಕಲೆಗಳಲ್ಲಿ ಕರಗತವಾಗಿದೆ. ಇಂತಹ ಪ್ರತಿಭೆಯನ್ನು ಗೌರವಿಸಲು ನಮಗೆ ಸಂತೋಷವಾಗಿದೆ ಎಂದು ನುಡಿದರು.
Shivaganga Yoga Center ವೇದಿಕೆಯಲ್ಲಿ ಮಾಜಿ ಎಂ ಎಲ್ ಸಿ ರುದ್ರೇಗೌಡರು, ಈ.ವಿಶ್ವಾಸ್, ಇಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ.ವಿಜಯ್ ಕುಮಾರ್, ಕಾಟನ್ ಜಗದೀಶ್, ರಂಗಪ್ಪ, ಚಂದ್ರಶೇಖರಯ್ಯ, ವತ್ಸಲ ಮೋಹನ್, ಜೆಸಿ ಬಾಲರಾಜ್, ಪರಿಸರ ನಾಗರಾಜ್, ನೀಲಕಂಠ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.