S.N.Chennabasappa ಶಿವಮೊಗ್ಗದ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶ್ರೀ ವಿಶ್ವಮಧ್ವ ಮಹಾಪರಿಷತ್ (ಶಿವಮೊಗ್ಗ ಶಾಖೆ) ಹಾಗೂ ಶಿವಮೊಗ್ಗ ಜಿಲ್ಲಾ ಸರ್ವ ವಿಪ್ರವೃಂದದ ನೇತೃತ್ವದಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಭಾಗವಹಿಸಿದ್ದರು.
ಸಿಇಟಿ ಪರೀಕ್ಷೆಯ ವೇಳೆ, ಶಿವಮೊಗ್ಗ, ಬೀದರ್ ಹಾಗೂ ಇತರ ಕೆಲವೊಂದು ಸ್ಥಳಗಳಲ್ಲಿ ಜನಿವಾರವನ್ನು ಬಿಚ್ಚುವ ಘಟನೆಗಳನ್ನು ಗಂಭೀರವಾಗಿ ಖಂಡಿಸಿ, ಹಿಂದೂ ಸಂಸ್ಕೃತಿಗೆ ಹಾಗೂ ವೈದಿಕ ಪರಂಪರೆಗೆ ಅಪಮಾನವಾಗಿರುವುದರಿಂದ, ಇಂತಹ ಘಟನೆಯನ್ನು ತಕ್ಷಣ ನಿಲ್ಲಿಸಿ, ಸಂಬಂಧಿತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶ್ರೀ ವಿಶ್ವಮಧ್ವ ಮಹಾಪರಿಷತ್ (ಶಿವಮೊಗ್ಗ ಶಾಖೆ) ಹಾಗೂ ಶಿವಮೊಗ್ಗ ಜಿಲ್ಲಾ ಸರ್ವ ವಿಪ್ರವೃಂದದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
S.N.Chennabasappa ಈ ಸಂದರ್ಭದಲ್ಲಿ ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಶ್ರೀ ದತ್ತಾತ್ರಿ, ಮಾಜಿ ಶಾಸಕರಾದ ಶ್ರೀ ಪ್ರಸನ್ನ ಕುಮಾರ್, ಶ್ರೀ ವಿಶ್ವಮಧ್ವ ಮಹಾಪರಿಷತ್ ಶಿವಮೊಗ್ಗ ಶಾಖೆಯ ಪ್ರಮುಖರು, ಜಿಲ್ಲಾ ಸರ್ವ ವಿಪ್ರವೃಂದದ ಪದಾಧಿಕಾರಿಗಳು ಹಾಗೂ ಭಕ್ತ ವೃಂದಗಳು ಉಪಸ್ಥಿತರಿದ್ದರು.