Mathura Paradise ಶಿವಮೊಗ್ಗ ನಗರದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಶಿವಮೊಗ್ಗ ಹೋಟೆಲ್ ಓನರಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರು ಕೆಎಸ್‌ಎಚ್‌ಎ ಸಹಕಾರದೊಂದಿಗೆ ಏ.22ರಂದು ಬೆಳಗ್ಗೆ 10.30ಕ್ಕೆ “ಹೋಟೆಲ್ ಉದ್ಯಮದಲ್ಲಿ ಹೊಸ ಪ್ರವೃತ್ತಿಗಳು” ವಿಷಯ ಕುರಿತು ವಿಶೇಷ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Mathura Paradise ಕಾರ್ಯಕ್ರಮದಲ್ಲಿ ಕೆಎಸ್‌ಎಚ್‌ಎ ಅಧ್ಯಕ್ಷ ಜಿ.ಕೆ.ಶೆಟ್ಟಿ, ಆಹಾರೋದ್ಯಮಿ ಗೋಪಾಡಿ ಶ್ರೀನಿವಾಸರಾವ್, ಶಿವಮೊಗ್ಗ ಹೋಟೆಲ್ ಓನರಸ್ ಅಸೋಸಿಯೇಷನ್ ಅಧ್ಯಕ್ಷ ಶಂಕರ ನಾರಾಯಣ ಹೊಳ್ಳ, ಕಾರ್ಯದರ್ಶಿ ಎನ್.ಗೋಪಿನಾಥ್, ಬಿಬಿಎಚ್‌ಎ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಕಾರ್ಯದರ್ಶಿ ವಿರೇಂದ್ರ ಕಾಮತ್, ಕುವೆಂಪು ವಿವಿ ಅಸಿಸ್ಟೆಂಟ್ ಪ್ರೋಫೆಸರ್ ಶ್ರೀಕಾಂತ್ ಭಾಗವಹಿಸುವರು. ಹೋಟೆಲ್ ಉದ್ಯಮದಾರರು ಸಂವಾದದಲ್ಲಿ ಪಾಲ್ಗೊಳ್ಳುವಂತೆ ಶಿವಮೊಗ್ಗ ಹೋಟೆಲ್ ಓನರಸ್ ಅಸೋಸಿಯೇಷನ್ ಕಾರ್ಯದರ್ಶಿ ಎನ್.ಗೋಪಿನಾಥ್ ತಿಳಿಸಿದ್ದಾರೆ.