ಅಂದಿನ ಅನುಭವ ಮಂಟಪ ಇಂದಿಗೂ ಪ್ರಸ್ತುತ, ಸಂಸತ್ ಭವನ ಅಂದಿನ ರೀತಿಯಲ್ಲೆ ನಡೆದು ಬರುತ್ತಿದ್ದು, ವಿಶ್ವಸಾಹಿತ್ಯಕ್ಕೆ ವಚನ ಸಾಹಿತ್ಯ ಅತ್ಯುತ್ತಮ ಕೊಡುಗೆ ಎಂದು ಪ್ರೊ. ಡಾ. ಭೀಮಶಂಕರ ಜೋಶಿರವರು ಹೇಳಿದರು.
ಲಿಂಗಾಯತ ಧರ್ಮ ಮಹಾಸಭಾದಲ್ಲಿ ಜರುಗಿದ ದೇವೀರಪ್ಪ ಟ್ರಸ್ಟ್ ಪ್ರಾಯೋಜಿತ ರಾಗವಾಂಕ ರಚಿತ ಸಿದ್ದರಾಮ ಚರಿತೆಯ ಬಗ್ಗೆ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭು. ಆದರೆ ನಾಯಕ ಬಸವಣ್ಣ ಇವರು ವಚನ ಸಾಹಿತ್ಯವನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಬರೆದರಲ್ಲದೆ, ತಮ್ಮಂತೆ ಇತರರ ವಚನಗಳಿಗೂ ಗೌರವ ನೀಡಿದರು. ಆಸ್ಥಾನಕ್ಕೆ ಕರೆತಂದ ಸಿದ್ದರಾಮರ ಚರಿತ್ರೆಯನ್ನು ರಾಘವಾಂಕ ಒಂಬತ್ತು ಅಧ್ಯಯದಲ್ಲಿ, ಐದುನೂರ ಒಂಬತ್ತು ಕವಿತೆಗಳನ್ನು ಅತ್ಯುತ್ತಮವಾಗಿ ಬರೆದಿದ್ದಾರೆ ಓದಿ ಎಂದರು.
ಸುಗ್ಗವೆ-ಮುದ್ದರ ಮಗು ಗರ್ಭದಲ್ಲಿ ಇದ್ದಾಗಲೇ ರೇವಣಸಿದ್ದರು ಅತ್ಯಂತ ದೈವಭಕ್ತ ತಮಗೆ ಹುಟ್ಟುತ್ತಾನೆ. ಆದರೆ ಅವರನ್ನು ಬೇಟಿಮಾಡಲು ನನಗೆ ಸಾಧ್ಯವಿಲ್ಲ. ಆದ್ದರಿಂದ ಆತನ ಹೆರಲಿರುವ ತಮ್ಮ ಗರ್ಭಕ್ಕೆ ಈಗಲೇ ವಂದಿಸುತ್ತೇನೆ ಎಂದು ಭವಿಷ್ಯ ನುಡಿದಿದ್ದರಂತೆ. ಹಾಗೆಯೆ ದೂಳಿಮಾಃಕಾಳ ಎಂದು ಹೆಸರಿಡಲು ಸೂಚಿಸಿದ್ದರಂತೆ. ಅಂತೆಯೆ ಮಗು ಎಲ್ಲ ಮಕ್ಕಳಂತೆ ಇರದೆ, ಧನ ಕಾಯುವನಾದರು ದೈವಭಕ್ತನಾಗಿ ಪ್ರತಿದಿನ ಶಿವನ ಪೂಜೆ ಮಾಡಿ, ತಾಯಿ ಕೊಟ್ಟ ಗಂಜಿಯನ್ನೆ ನೈವೇದ್ಯ ಮಾಡುತ್ತಿದ್ದರಂತೆ. ಒಮ್ಮೆ ಶಿವ ಪರೀಕ್ಷೆ ಮಾಡಲು ಹುಡುಗನ ಬಳಿ ಬಂದು ನಾನು ಮಲ್ಲಪ್ಪ, ಶ್ರೀಶೈಲದಿಂದ ಬಂದಿದ್ದೇನೆ ಹಸಿವಾಗುತ್ತಿದೆ, ಊಟಕ್ಕೆ ಅವನ ಬಳಿಯಿದ್ದ ಗಂಜಿಯನ್ನು ಕೇಳಿದರಂತೆ, ಅದನ್ನು ಕುಡಿದು, ಇನ್ನೂ ಬೇಕು ಎಂದಾಗ ಅವರನ್ನು ಕುಳ್ಳರಿಸಿ ಮನೆಯಿಂದ ತರುವ ತನಕ ಎಲ್ಲಿಗೂ ಹೋಗ ಬಾರದೆಂದು ಹೇಳಿ, ಮನೆಗೆ ಹೋಗಿ ತರುವಾಗ ಇರದೇ ಇದ್ದಾಗ, ಮಲ್ಲಪ್ಪನನ್ನು ಹುಡುಕಿಕೊಂಡು ಶ್ರೀಶೈಲಕ್ಕೆ ಹೊರಟರಂತೆ ಎಂದು ಸಿದ್ದರಾಮರ ಚರಿತೆಯನ್ನು ವಿವರಿಸಿದರು.
ಕತ್ತಿಗೆ ಚನ್ನಪ್ಪರವರ ಗುಜರಾತ್ ನೋಟ ಪುಸ್ತಕ ಬಿಡುಗಡೆ ಮಾಡಿದ ಡಾ. ಅಶೋಕ್ ಪಾಳೇದ್ ಮಾತನಾಡಿ, ಅಭಿವೃದ್ಧಿ ಹೊಂದಿದ ರಾಷ್ಟ್ರದ ಪರಿಚಯ ಮಾಡಿಕೊಡುವಂತಿದೆ ಆ ಪ್ರೇಕ್ಷಣೀಯ ಸ್ಥಳಗಳು. ಎರಡು ಜೋತಿರ್ಲಿಂಗ, ವಲ್ಲಭ ಬಾಯ್ ಪ್ರತಿಮೆ ಹೀಗೆ ಅಲ್ಲಿ ನೋಡಬಹುದಾದ ಪ್ರೇಕ್ಷಣೀಯ ಸ್ಥಳಗಳ ಸ್ತೂಲ ಪರಿಚಯ ಅತ್ಯಂತ ಸೊಗಸಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾಲಪ್ಪನವರು ಪ್ರತಿ ತಿಂಗಳು ರಾಷ್ಟ್ರೀಯ ಬಸವದಳ ಟ್ರಸ್ಟ್, ಕಲ್ಲಹಳ್ಳಿಯಲ್ಲಿ ಸಭೆ ಸೇರಲಾಗುತ್ತದೆ ಅಲ್ಲಿ ಮಹಾಮಹಿಮರ ಬಗ್ಗೆ ಉಪನ್ಯಾಸ ಏರ್ಪಡಿಸಲಾಗುತ್ತದೆ. ಇಂದು ಭೀಮಶಂಕರ್ ರವರು ಬಹಳ ಸವಿಸ್ತಾರವಾಗಿ ಸಿದ್ದರಾಮ ಚರಿತ್ರೆ ತಿಳಿಸಿದ್ದಾರೆ. ಹಿರಿಯ ನಾಗರೀಕರು ಅಂಜಿಕೊಂಡು ಕೂರಬಾರದು. ಇಂದಿನ ಯುವಕರಿಗೆ ಮಾದರಿಯಾಗಿ, ಅನುಭವ ಹಂಚಿಕೊಂಡಾಗ, ಮನಃಶಾಂತಿ ದೊರಕಿ ಜೀವನ ಸುಖಮಯವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಂತಮ್ಮ ಪ್ರಾರ್ಥಿಸಿದರು, ತೀರ್ಥಲಿಂಗಪ್ಪ ಸ್ವಾಗತಿಸಿ, ಚಂದ್ರಶೇಖರ್ ವಂದಿಸಿದರು.