Rotary Club Shimoga ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಸಮಾಜದ ಇತರರಿಗೂ ಪ್ರೇರಣೆ ದೊರಕುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್ ದೇವ್ ಆನಂದ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಿಂದ ಆಯೋಜಿಸಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಧಕರನ್ನು ಗುರುತಸಿ ಸನ್ಮಾನ ಮಾಡುವುದು ನಿಜವಾಗಿಯೂ ಅನನ್ಯ ಮತ್ತು ಅರ್ಥಪೂರ್ಣ. ನಾವು ಯಾವುದೇ ಒಂದು ಕಾರ್ಯಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ನಿರಂತರ ಪರಿಶ್ರಮ ಮತ್ತು ಪ್ರಯತ್ನ ಬಹಳ ಮುಖ್ಯ. ಈ ಸಾಧಕರನ್ನು ನಾವು ಸಮಾಜಕ್ಕೆ ಪರಿಚಯಿಸುವುದರ ಮೂಲಕ ಲಕ್ಷಾಂತರ ಜನಕ್ಕೆ ಪ್ರೇರಣೆ ಸಿಗುತ್ತದೆ. ಒಳ್ಳೆಯ ಸಮಾಜಮುಖಿ ಕಾರ್ಯಕ್ರಮ. ಸಾಧಕರನ್ನು ಗುರುತಿಸಿ ಗೌರವಿಸಿ ಮೂಲಕ ಅವರ ಸೇವೆ ಹೆಚ್ಚಾಗುವಂತೆ ಮಾಡುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನಲ್ಲಿ ಜಿಲ್ಲಾ ಗವರ್ನರ್ ಅವರ ಸಾರ್ವಜನಿಕ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಶಿಮೊಗ್ಗ ಸೆಂಟ್ರಲ್ ಹೆಮ್ಮೆಯ ಸದಸ್ಯೆ, ಮಾಜಿ ಉಪಮೇಯರ್ ಸುರೇಖಾ ಮುರುಳಿಧರ್ ಅವರು ಸೀನಿಯರ್ ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವುದು ಮತ್ತು ಅವರ ಸಾಮಾಜಿಕ ಸೇವೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
Rotary Club Shimoga ಸಾಧಕ ಅಂತರರಾಷ್ಟ್ರೀಯ ಈಜುಗಾರ ಮೋತಿನಾಯಕ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಅನೇಕ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡಿದ್ದಾರೆ. ಇನ್ನೋರ್ವ ಸಾಧಕಿ ಕವಿನಾ ಅವರು ರಾಷ್ಟ್ರೀಯ ಕುಸ್ತಿ ಪಟು, ರಾಜ್ಯ ಮಟ್ಟದಲ್ಲಿ ಚಿನ್ನ ಗೆದ್ದ ಸಾಧನೆ ಹಾಗೂ ನಮ್ಮ ಶಿವಮೊಗ್ಗದ ಹೆಮ್ಮೆಯ ಮಗಳು ಅವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ವಹಿಸಿದ್ದರು. ವಲಯ ಸಹಾಯಕ ಗವರ್ನರ್ ಸುರೇಶ್ ಎಚ್.ಎಂ. ಮತ್ತು ಕಾರ್ಯದರ್ಶಿ ಈಶ್ವರ್ ಉಪಸ್ಥಿತರಿದ್ದರು. ಮಾಜಿ ಜಿಲ್ಲಾ ಗವರ್ನರ್ ಜೆ ಎನ್ ಪ್ರಕಾಶ್ ಮತ್ತು ಚಂದ್ರಶೇಖರ್, ಮಾಜಿ ಸಹಾಯಕ ಗವರ್ನರ್ ರವಿ ಕೊಟೋಜಿ, ಚೂಡಾಮಣಿ ಪವಾರ್, ಆನಂದ್ ಎಸ್ ಜಿ , ವಿಜಯಕುಮಾರ್ ಜಿ, ವಲಯ ಮತ್ತು ಜಿಲ್ಲಾ ಎಲ್ಲಾ ನಾಯಕರು, ಎಲ್ಲಾ ಕ್ಲಬ್ಬಿನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರಿದ್ದರು.
Rotary Club Shimoga ಸಾಧಕರನ್ನ ಗುರುತಿಸಿ ಸನ್ಮಾನಿಸುವುದು ಅನನ್ಯ ಮತ್ತು ಅರ್ಥಪೂರ್ಣ- ದೇವ್ ಆನಂದ್
Date: