Nehru Youth Center ನೆಹರು ಯುವ ಕೇಂದ್ರ, ಶಿವಮೊಗ್ಗ ಹಾಗೂ ಸಿರಿಶ್ರೀ ಮಹಿಳಾ ಸಂಘ, ಕದಂಬ ಯುವಕ ಸಂಘ, ಸೊರಬ ಇವರ ಸಹಯೋಗದೊಂದಿಗೆ ಸೊರಬ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉಳವಿಯ ಸರ್ಕಾರಿ ಪಿ.ಯು ಕಾಲೇಜು,ಪ್ರೌಢಶಾಲಾ ಆವರಣದಲ್ಲಿ ದಿನಾಂಕ 08.03.2025 ರ ಶನಿವಾರ ಆಯೋಜಿಸಲಾಗಿದೆ.
ಈ ಕ್ರೀಡಾಕೂಟದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಿದ್ದು 15 ರಿಂದ 29 ವರ್ಷದ ಒಳಗಿನವರು ಭಾಗವಹಿಸಬಹುದಾಗಿದೆ. Nehru Youth Center ಗುಂಪು ವಿಭಾಗದಲ್ಲಿ ವಾಲಿಬಾಲ್ ಸ್ಪರ್ಧೆ (ಪುರುಷರಿಗೆ) ಹಾಗೂ ಹಗ್ಗ ಜಗ್ಗಾಟ(ಮಹಿಳೆಯರಿಗೆ), ವೈಯಕ್ತಿಕ ವಿಭಾಗದಲ್ಲಿ ಮಹಿಳೆಯರಿಗಾಗಿ 100 ಮೀ. ಓಟ ಮತ್ತು ನಿಧಾನಗತಿಯ ಸೈಕಲ್ ಸ್ಪರ್ಧೆ, ಬ್ಯಾಟ್ ಮಿಟನ್(ಪುರುಷರಿಗಾಗಿ) ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಸಕ್ತ ಸ್ಪರ್ಧಿಗಳು ದಿನಾಂಕ 08.03.2025 ರಂದು ಬೆಳಿಗ್ಗೆ 9 ಗಂಟೆಯ ಒಳಗೆ ಸ್ಥಳದಲ್ಲಿ ಹಾಜರಿರಬೇಕೆಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಶ್ರೀ. ಉಲ್ಲಾಸ್ ಕೆ.ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9591934848, 9961332968 ನ್ನು ಸಂಪರ್ಕಿಸಬಹು.
Nehru Youth Center ಮಾರ್ಚ್ 8. ಸೊರಬ ತಾಲ್ಲೂಕು ಮಟ್ಟದ ಕ್ರೀಡಾಕೂಟ
Date: