Tuesday, March 11, 2025
Tuesday, March 11, 2025

Karnataka State Press Distributors Union ಸರ್ಕಾರದ ಸೌಲಭ್ಯಗಳ ಬಗ್ಗೆ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸ್ಪಂದನ

Date:

Karnataka State Press Distributors Union ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಕಳೆದ ಐದು ವರ್ಷಗಳಿಂದ ಅನೇಕ ರೀತಿಯಲ್ಲಿ ಸರ್ಕಾರದ ಗಮನ ಸೆಳೆದು ಪತ್ರಿಕಾ ವಿತರಕರಿಗಾಗಿ ಅಸಂಘಟಿತ ಕಾರ್ಮಿಕ ವಲಯದಲ್ಲಿ ಪತ್ರಿಕಾ ವಿತರಕರಿಗಾಗಿ ೫ ಲಕ್ಷದ ಅಪಘಾತ ವಿಮಾ ಯೋಜನೆಯನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದು. ೧೬ ರಿಂದ ೫೯ ವರ್ಷದವರೆಗೂ ಇದ್ದ ವಯೋಮಿತಿ ಯೋಜನೆಯನ್ನು ಈಗ ೧೬ ರಿಂದ ೭೦ ವರ್ಷದವರೆಗೂ ಸರ್ಕಾರದ ಗಮನ ಸೆಳೆದು ಕೊಡಿಸುವಲ್ಲಿ ಯಶಸ್ವಿಯಾಗಿದ್ದು. ಪ್ರಧಾನಮಂತ್ರಿಯ ಸ್ವಾ ನಿಧಿ ಯೋಜನೆ ರಾಜ್ಯದ ಹಲವು ವಿತರಕರಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದು. ಒಂದು ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ. ವಿಶೇಷ ಗಮನಕ್ಕೆ :ಸಾಗರದ ಗಣೇಶ್ ಎಂಬ ಪತ್ರಿಕೆ ಹಂಚುವ ಹುಡುಗ ಅಪಘಾತದಲ್ಲಿ ಮೃತಪಟ್ಟಾಗ ದೇಶದ ಇತಿಹಾಸದಲ್ಲಿ ಒಬ್ಬ ಪತ್ರಿಕಾ ವಿತರಕನ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದು. ೨೦೨೩ ಕಾರ್ಮಿಕ ಇಲಾಖೆಯ ಸಚಿವರ ಮುಖಾಂತರ ಹಾಗೂ ರಾಜ್ಯದಲ್ಲಿರುವ ಅನೇಕ ವಿತರಕರು ಸಂಕಷ್ಟದಲ್ಲಿ ಇದ್ದಾಗ ನಮಗೆ ನಾವೇ ಆಗಬೇಕೆಂಬ ಘೋಷವಾಕ್ಯದಲ್ಲಿ ೬೦ಕ್ಕೂ ಹೆಚ್ಚು ವಿತರಕರಿಗೆ ಸಹಾಯ ಮಾಡಿದ್ದು ಕೆಲವು ಬಾರಿ ಪತ್ರಿಕಾ ವಿತರಕರಿಂದ ನಮ್ಮ ರಾಜ್ಯದ ಎಲ್ಲಾ ವಿತರಕರುಗಳಿಂದ ದೇಣಿಗೆ ಸಂಗ್ರಹಿಸಿ ನೆರವು ನೀಡಿದ್ದು. ನೇರವಾಗಿ ಒಕ್ಕೂಟದ ವತಿಯಿಂದ ಪರಿಹಾರಗಳನ್ನು ನೀಡಿದ್ದು. ರಾಜ್ಯದ ವಿತರಕರ ಕನಸಿನ ಈ ಪಯಣಕ್ಕೆ ಸಹಕಾರಿಯಾದ ಕಾ ನಿ ಪಾ ಸಂಘದ ರಾಜ್ಯಾಧ್ಯಕ್ಷರು ಮುಖ್ಯಮಂತ್ರಿಗಳು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗರಾರು ಕಾರ್ಮಿಕ ಸಚಿವರು ನಮ್ಮ ಎಲ್ಲಾ ಜಿಲ್ಲಾ ಸಂಘಟನೆಗಳು ಸಹಕಾರಿಯಾಗಿವೆ.
Karnataka State Press Distributors Union ಈ ಬಾರಿಯಾದರೂ ರಾಜ್ಯ ಸರ್ಕಾರ ಸಮಸ್ತ ರಾಜ್ಯ ಪತ್ರಿಕಾ ವಿತರಕರ ಕನಸಿಗೆ ಸಹಕಾರಿಯಾಗಬಲ್ಲದೆ. ಹಾಗೂ ನಮಗೆ ಇನ್ನು ತಲುಪದೇ ಇರುವ ಬಹು ದಿನಗಳ ಬೇಡಿಕೆಯ ಒಂದು ಕನಸಿನ ಬುತ್ತಿಯನ್ನು ಈಗ ರಾಜ್ಯ ಸರ್ಕಾರದ ಮುಂದೆ ರಾಜ್ಯದ ವಿತರಕರ ಕನಸನು ತೆರೆದಿಡುತ್ತಿದ್ದೇವೆ ಪ್ರತಿನಿತ್ಯ ಚಳಿ ಮಳೆ ಎನ್ನದೆ ಮನೆ ಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ವಿತರಕರಿಗಾಗಿ ಸರ್ಕಾರ ಘೋಷಣೆ ಮಾಡಿದ್ದ ಕ್ಷೇಮನಿಧಿ ೬ ವರ್ಷ ಕಳೆದರೂ ಜಾರಿಗೆ ಬಂದಿಲ್ಲ. ಸಿದ್ದರಾಮಯ್ಯ ಸಿಎಂ ಆಗಿ ೨೦೧೮ರ ಫೆಬ್ರವರಿಯಲ್ಲಿ ಮಂಡಿಸಿದ ಕೊನೆಯ ಬಜೆಟ್ ನಲ್ಲಿ ಪತ್ರಿಕೆಗಳನ್ನು ಹೊತ್ತು ಹಂಚುತ್ತ ಅನಿಶ್ಚಿತತೆಯ ಬದುಕು ಸಾಗಿಸುವವರ ಕ್ಷೇಮಾಭಿವೃದ್ಧಿಗಾಗಿ ೨ ಕೋಟಿ ರೂ. ಮೀಸಲಿಟ್ಟು ಕ್ಷೇಮ ನಿಧಿ ಯೋಜನೆ ಘೋಷಣೆ ಮಾಡಿದ್ದರು.
ಬಹುತೇಕ ಯೋಜನೆಗಳಂತೆ ಇದು ಸಹ ಕೇವಲ ಬಜೆಟ್ ಘೋಷಣೆ ಆಗಿರಲಿಲ್ಲ ೨ ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ ಯೋಜನೆಯ ರೂಪರೇಷೆ ಸಿದ್ದವಾಗುವಲ್ಲಿ ವಾರ್ತಾ ಇಲಾಖೆ ಅನಿಸರಿಸುತ್ತಿರುವ ನಿಧಾಗತಿ ಧೋರಣೆಯಿಂದಾಗಿ ಅನುಷ್ಠಾನ ವಿಳಂಬವಾಗಿದೆ. ಪತ್ರಿಕಾ ವಿತರಕರ ಯೋಜನೆಗೆ ರೂಪುರೇಷೆ ಸಿದ್ದಪಡಿಸುವ ಹೊಣೆಯನ್ನು ಆಗ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ವಹಿಸಲಾಗಿತ್ತು. ಬಹುತೇಕ ಮಾಧ್ಯಮ ಕಚೇರಿಗಳು ಅಕಾಡೆಮಿಯು ಮನವಿಗೆ ಸ್ಪಂದಿಸಲಿಲ್ಲ ಆ ವೇಳೆಗೆ ಅಕಾಡೆಮಿಯು ಅವಧಿ ಮುಕ್ತಾಯವಾಯಿತು. ವಾರ್ತಾ ಇಲಾಖೆ ಈ ಕೆಲಸವನ್ನು ಮುಂದುವರಿಸಬೇಕಾಗಿತ್ತು ಆದರೆ ಆ ಪ್ರಯತ್ನ ಇಲಾಖೆಯ ಕಡೆಯಿಂದ ಆಗಲಿಲ್ಲ.
ಸರ್ಕಾರ ಘೋಷಣೆ ಮಾಡಿದ್ದ ೨ ಕೋಟಿ ರೂ.ಆರಂಭಿಕ ಮೊತ್ತವಾಗಿದೆ ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆಯೋ, ಗುಂಪು ವಿಮೆಯೋ ಯಾವ ರೀತಿಯಲ್ಲಿ ಜಾರಿಗೆ ತರಬೇಕೆಂದು ನಿಯಮಾವಳಿಯನ್ನು ರೂಪಗೊಂಡಿದ್ದರೆ ಸರ್ಕಾರದಿಂದ ಹೆಚ್ಚಿನ ಆರ್ಥಿಕ ನೆರವು ಪಡೆಯಲು ಸಾಧ್ಯತೆಗಳಿದ್ದವು ೨೦೧೮ರ ಸೆಪ್ಟೆಂಬರ್ ೫ ರಂದು ಸರ್ಕಾರ ಅನುಷ್ಠಾನ ಸಮಿತಿ ರಚನೆ ಮಾಡಿರುವುದಾಗಿ ಆದೇಶ ಹೊರಡಿಸಿರುವುದು ಬಿಟ್ಟರೆ ಮತ್ತೆ ಯಾವುದೇ ಪ್ರಕ್ರಿಯೆ ನಡೆದಿಲ್ಲ.
ಮಳೆ ಚಳಿ ಗಾಳಿ ಎನ್ನದೆ ಆರೋಗ್ಯವನ್ನು ಲೆಕ್ಕಿಸದೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸಿದ ವಿತರಕರು ಅಪಘಾತಗಳಿಂದ ಸಾವಿಗೆ ಗುರಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಉದ್ಯೋಗದ ಭದ್ರತೆಯೇ ಇಲ್ಲದಿರುವುದರಿಂದ ಯಾವ ಆರ್ಥಿಕ ನೆರವು ಅವರ ಕುಟುಂಬಕ್ಕೆ ಸಿಕ್ಕಿಲ್ಲ.
ಸರ್ಕಾರದಿಂದಲೂ ಸ್ಪಂದನೆಯಾಗಿಲ್ಲ ಕ್ಷೇಮ ನಿಧಿ ಯೋಜನೆ ಜಾರಿಗೆ ಬಂದಿದ್ದರೆ ಒಂದಷ್ಟು ನೆರವು ಅವರಿಗೂ ದೊರಕುತ್ತಿತ್ತು ಸರ್ಕಾರ, ವಾರ್ತಾ ಇಲಾಖೆ,ಮಾಧ್ಯಮ ಅಕಾಡೆಮಿ ಇನ್ನಾದರೂ ಆರು ವರ್ಷದಿಂದ ಕಪಾಟಿನಲ್ಲಿ ಕೊಳೆಯುತ್ತಿರುವ ಯೋಜನೆ ಈ ಯೋಜನೆಯನ್ನು ಮರು ಜಾರಿಗೆ ತರಲು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಜಾರಿಗೆ ತರಲು ಪ್ರಯತ್ನ ಮಾಡುತ್ತಿದೆ ಎಂದು ಶಿವಮೊಗ್ಗ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಎನ್. ಮಾಲತೇಶ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಜೆಸಿಐ ನಲ್ಲಿ ತೊಡಗಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆ- ಸೂರ್ಯ ನಾರಾಯಣ ವರ್ಮ

JCI Shivamogga ಸಮಾಜಮುಖಿ ಚಟುವಟಿಕೆಗಳ ಜತೆಯಲ್ಲಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ...

Karnataka Lokayukta ಮಾರ್ಚ್ 18 ರಿಂದ 21 ವರೆಗೆ ರಾಜ್ಯ ಉಪಲೋಕಾಯುಕ್ತ ನ್ಯಾ.ಕೆ.ಫಣೀಂದ್ರ ಅವರ ಜಿಲ್ಲಾ ಕಾರ್ಯಕ್ರಮಗಳ ಮಾಹಿತಿ

Karnataka Lokayukta ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18...

CM Siddharamaih ಕುರ್ಚಿ ಉಳಿಸಿಕೊಳ್ಳುವ ಯತ್ನದಲ್ಲಿ ಸಿದ್ಧರಾಮಯ್ಯನವರ ಬಜೆಟ್…!

CM Siddharamaih ಕರ್ನಾಟಕದ ಅಭಿವೃದ್ಧಿಗೆ ಪೂರಕವೇ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ...

Guarantee Scheme ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ.‌ ಊಹಾಪೋಹಗಳಿಗೆ ಬೆಲೆಕೊಡಬೇಡಿ- ಸಿ.ಎಸ್.ಚಂದ್ರಭೂಪಾಲ್

Guarantee Scheme ಕರ್ನಾಟಕ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ,...