Sringeri Maha Samsthanam ಕೂಡಲಿಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾಸಂಸ್ಥಾನಮ್ ದಕ್ಷಿಣಾಮ್ನಾಯ ಮೂಲ ಶ್ರೀಶಾರದಾ ಪೀಠಮ್ ನ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಉತ್ತರಪ್ರದೇಶದ ತ್ರಿವೇಣಿ ಸಂಗಮ ಪ್ರಯಾಗ್ ರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಂಡು ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಿದರು.
ಶನಿವಾರ ಪ್ರಯಾಗ್ ರಾಜ್‍ನ ತ್ರಿವೇಣಿ ಸಂಗಮದಲ್ಲಿ ಮಡಿಸ್ನಾನವನ್ನು ಮಾಡಿ, ಪೂಜಾ ವಿಧಿಗಳನ್ನು ನೆರವೇರಿಸಿದರು.
ಭಾನುವಾರ ಧರ್ಮಸಭೆಯಲ್ಲಿ ಪಾಲ್ಗೊಂಡರು. ಶ್ರೀ ಕಂಚಿ ಕಾಮಕೋಟಿ ಜಗದ್ಗುರು ಶ್ರೀ ಶಂಕರ ವಿಜೇಂದ್ರ ಸರಸ್ವತಿ ಸ್ವಾಮಿಗಳು ಮತ್ತು ಶ್ರೀ ಶಕಟಪುರಂನ ಶ್ರೀ ಮದ್ ಜಗದ್ಗುರು ಕೃಷ್ಣಾನಂದತೀರ್ಥ ಮಹಾಸ್ವಾಮಿಗಳವರೊಂದಿಗೆ ವೇದಿಕೆ ಹಂಚಿಕೊಂಡು ಭಕ್ತರಿಗೆ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀ ಕಂಚಿ ಕಾಮಕೋಟಿ ಜಗದ್ಗುರು ಶ್ರೀ ಶಂಕರ ವಿಜೇಂದ್ರ ಸರಸ್ವತಿ ಸ್ವಾಮಿಗಳಿಂದ ರಚಿತವಾದ ಮಹಾಕುಂಭಮೇಳ ಕುರಿತ ಕೃತಿಯನ್ನು ಲೋಕಾರ್ಪಣೆ ಮಾಡಿದರು.
