Shikaripura Horticulture Department ಶಿಕಾರಿಪುರ ತೋಟಗಾರಿಕೆ ಇಲಾಖೆಯು 2024-25ನೇ ಸಾಲಿನಲ್ಲಿ ತರಕಾರಿ ಬೆಳೆಯಲು ಉತ್ತೇಜನ ನೀಡುವ ಉದ್ದೇಶದಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ರೈತರಿಗೆ ರೂ. 2000/- ಮೊತ್ತದ ತರಕಾರಿ ಬೀಜಗಳ ಕಿಟ್‌ನ್ನು ವಿತರಣೆ ಮಾಡಲಾಗುತ್ತಿದ್ದು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿ ಸಣ್ಣ ಹಾಗೂ ಇತರೆ ರೈತರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ರೈತರು ನಿಗದಿತ ನಮೂನೆ ಅರ್ಜಿಯನ್ನು ಶಿಕಾರಿಪುರ ತೋಟಗಾರಿಕೆ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಪಹಣಿ, ಆಧಾರ್‌ಕಾರ್ಡ್ ಜೇರಾಕ್ಸ್, ಬ್ಯಾಂಕ್ ಪಾಸ್ ಬುಕ್ ಜೇರಾಕ್ಸ್, ಜಾತಿ ಪ್ರಮಾಣ ಪತ್ರ(ಪ.ಜಾ/ಪ.ಪಂ.ದವರಿಗೆ ಮಾತ್ರ) ಗಳನ್ನು ಸಲ್ಲಿಸಿ ಫೆ. 11 ರಿಂದ ತರಕಾರಿ ಬೀಜಗಳ ಕಿಟ್‌ನ್ನು ಪಡೆಯುವಂತೆ ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿರುತ್ತಾರೆ.
Shikaripura Horticulture Department ಹೆಚ್ಚಿನ ಮಾಹಿತಿಗಾಗಿ ಶಿಕಾರಿಪುರ ತೋಟಗಾರಿಕೆ ಇಲಾಖೆ ಕಚೇರಿಯನ್ನು ಹಾಗೂ ಮೊ.ಸಂ. : ಕಸಬಾ-7019808174, ಅಂಜನಾಪುರ-8151810552, ಹೊಸೂರು-6363095898, ಉಡುಗಣೆ-9108548454, ತಾಳಗುಂದ-7975515575 ಗಳನ್ನು ಸಂಪರ್ಕಿಸುವುದು
Shikaripura Horticulture Department ತರಕಾರಿ ಬೀಜಗಳ ಕಿಟ್ ವಿತರಣೆಗೆ ಅರ್ಜಿ ಆಹ್ವಾನ
Date: