Royal English Medium School ಶಿವಮೊಗ್ಗದ ವಿನೋಭನಗರದ ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆ ಹಾಗೂ ಪರಿಸರ (ರಿ) ಶಿವಮೊಗ್ಗ ಸಂಸ್ಥೆಯ ಸಹಯೋಗದಲ್ಲಿ ಸೈಬರ್ ಅಪರಾಧಗಳ ಕುರಿತು ಮಕ್ಕಳಿಗೆ ಮತ್ತು ಪೋಷಕರಿಗೆ ಜಾಗೃತಿ ಮೂಡಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಅರಿವನ್ನ ಮೂಡಿಸುವ ಸಲುವಾಗಿ ಶಿವಮೊಗ್ಗ ಜಯನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಶ್ರೀಯುತ ವಿರೂಪಾಕ್ಷಪ್ಪ ಎಎಸ್ ಐ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇವರು ಮೊಬೈಲ್ಗಳಿಂದ ಪ್ರತಿನಿತ್ಯ ಕರೆಮಾಡಿ ಜನಸಾಮಾನ್ಯರ ಹಣವನ್ನು ಬ್ಯಾಂಕ್ ಖಾತೆಯಿಂದ ತೆಗೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಿಗೆ ಬ್ಯಾಂಕುಗಳಿಂದ ಎಂದು ಹೇಳಿ ಯಾವ ಯಾವ ರೀತಿ ಯಾಮಾರಿಸುತ್ತಿರುವರು ಎಂಬುದನ್ನು ತಿಳಿಸಿಕೊಟ್ಟರು.
ಅಲ್ಲದೆ ವಿದ್ಯಾರ್ಥಿಗಳ ಫೇಸ್ಬುಕ್, ವಾಟ್ಸಾಪ್, ಹಾಗೂ ಇನ್ಸ್ಟಾಗ್ರಾಮ್ ಗಳ ಬಳಕೆ ಹೆಚ್ಚಾಗುತ್ತಿದ್ದು ಅವರುಗಳ ಅಕೌಂಟನ್ನು ಮತ್ತೊಬ್ಬರು ಬಳಸಿಕೊಂಡು ಸಮಸ್ಯೆಯನ್ನು ಉಂಟು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಪೋಷಕರು ತಲೆತಗ್ಗಿಸಬೇಕಾದ ಕೆಲಸವನ್ನು ಮಾಡುತ್ತಿದ್ದಾರೆ. ಆದ ಕಾರಣ ಈ ಜಾಲ ತಾಣದಿಂದ ಹಲವು ಸುರಕ್ಷತಾ ತಂತ್ರಾಂಶಗಳನ್ನು ಉಪಯೋಗಿಸಿಕೊಂಡು ವಂಚನೆಗಳಿಂದ ಎಚ್ಚೆತ್ತು ಕೊಳ್ಳಬಹುದು ಎಂದು ತಿಳಿಸಿದರು.
ಅಲ್ಲದೆ ಎಟಿಎಂ ಗಳಿಂದ, ಕೊರಿಯರ್ ಗಳಿಂದ, ಆಗುವ ಮೋಸಗಳನ್ನು ವಿಡಿಯೋ ತುಣುಕುಗಳನ್ನು ತೋರಿಸುವುದರ ಮೂಲಕ ಎಚ್ಚರಿಸಿದರು. ಈ ಕಾರ್ಯಕ್ರಮದ ಪೂರ್ಣ ವಿವರದ ನಂತರ ವಿದ್ಯಾರ್ಥಿಗಳಿಂದ ಮತ್ತು ಪೋಷಕರುಗಳಿಂದ ಹಲವು ಪ್ರಶ್ನೆಗಳು ಉದ್ಭವಿಸಿದವು. ಈ ಪ್ರಶ್ನೆಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರು. ಶಾಲೆಯ ಕಾರ್ಯದರ್ಶಿಗಳಾದ ಶ್ರೀಮತಿ ಪೂಜಾ ನಾಗರಾಜ್ ಪರಿಸರ ಪ್ರಸ್ತಾವಿಕವಾಗಿ ಮಾತನಾಡಿ ನಮ್ಮ ಶಾಲೆಯ ಹಲವು ಪೋಷಕರು ಈ ಒಂದು ಕಾರ್ಯಕ್ರಮವನ್ನು ನಮಗೆ ಮಾಡಿಸಿಕೊಡಿ ಮಕ್ಕಳು ಮೊಬೈಲ್ ಗಳಿಂದ ಹೇಗೆ ಸುರಕ್ಷಿತವಾಗಿರಬಹುದು ಎಂಬುದನ್ನು ತಿಳಿಸಿದ ಕಾರಣ ನಾವು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,ಇದರ ಸದುಪಯೋಗವನ್ನು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.
Royal English Medium School ಕಾರ್ಯಕ್ರಮದಲ್ಲಿ ಪರಿಸರ ಸಂಸ್ಥೆಯ ನಿರ್ದೇಶಕರಾದ ಡಾ. ನಾಗರಾಜ್ ಪರಿಸರ ಮಾತನಾಡಿ ಈ ಒಂದು ಕಾರ್ಯಕ್ರಮದ ಪ್ರಯೋಜನವನ್ನು ನೀವು ಪಡೆಯುವುದಲ್ಲದೆ ನಿಮ್ಮ ಸ್ನೇಹಿತರಿಗೆ ಕುಟುಂಬಸ್ಥರಿಗೆ ತಿಳಿಸಿ ವಂಚಕರಿಂದ ರಕ್ಷಿಸಿ ಎಂದು ಸಲಹೆ ನೀಡಿದರು. ಪೋಷಕರು ತಮ್ಮ ಮಕ್ಕಳು ಮೊಬೈಲ್ ಬಳಸುವಾಗ ಅವರೆಡೆ ನಿಮ್ಮ ಗಮನವಿರಬೇಕು ಅವರ ಸ್ನೇಹಿತರು ಯಾರು ಮತ್ತು ಮೊಬೈಲ್ ನಲ್ಲಿ ಏನು ನೋಡುತ್ತಿರುವರು ಎಂಬುದನ್ನು ತಾವು ಗಮನಿಸುತ್ತಾ ಇದ್ದರೆ ಅಪಾಯಗಳಿಂದ ಪಾರಾಗಬಹುದು ಎಂದು ತಿಳಿಸಿದರು.
ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಶ್ರೀದೇವಿ, ಮುಖ್ಯೋಪಾಧ್ಯಾಯರಾದ ಶ್ರೀ ವಿನಯ್ , ಶಿಕ್ಷಕ ವೃಂದದವರು, ಪೋಷಕರು, ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು. ಶಿಕ್ಷಕರಾದ ಅರುಣ್ ನಿರೂಪಿಸಿ, ಸೋನಿಕ ಸ್ವಾಗತಿಸಿ, ಶ್ರೀಮತಿ ಸುನಿತಾ ವಂದಿಸಿದರು.