Klive Special Article ಸಂಕ್ರಾಂತಿ ಹಬ್ಬ ಮುಖ್ಯವಾಗಿ ದಕ್ಷಿಣಭಾರತದಲ್ಲಿ
ಆಚರಿಸಲಾಗುವ ಒಂದು ಹಬ್ಬ.
ಭೂಮಿಯಲ್ಲಿ(ಹೊಲಗದ್ದೆಗಳಲ್ಲಿ) ಬೆಳೆದ ಪೈರು
ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ
ಹಬ್ಬ. ಸಮೃದ್ಧಿಯ ಸಂಕೇತ ಸಂಕ್ರಾಂತಿಯನ್ನು
ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ
ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂಧರ್ಮದವರಿಂದ ಆಚರಿಸಲ್ಪಡುತ್ತದೆ.
ಕರ್ನಾಟಕ,ಆಂಧ್ರಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.
ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ.
ಮಕರ ಸಂಕ್ರಾಂತಿ ಪ್ರಸಿದ್ಧವಾಗಿರುವ ಸುಗ್ಗಿಯಕಾಲದ ಹಬ್ಬ.
Klive Special Article ಇದನ್ನು ಪೊಂಗಲ್ ಹಬ್ಬ ಎಂದೂ ಕರೆಯುತ್ತಾರೆ. ಪೊಂಗಲ್ ಎಂದರೆ ಅಕ್ಕಿ ತುಪ್ಪಹಾಲು, ಸಕ್ಕರೆ ಅಥವಾ ಬೆಲ್ಲದಿಂದ ಮಾಡಿದ ಸಿಹಿ ಖಾದ್ಯ.ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯ ಮಾಡ
ಲಾಗುವುದು. ಕರ್ನಾಟಕದಲ್ಲಿ ಎಳ್ಳು,ಬೆಲ್ಲ-ಸಕ್ಕರೆ ಅಚ್ಚುಗಳನ್ನು ನೆರೆಯವರಿಗೆ ,ಬಂಧು-ಮಿತ್ರರಿಗೆ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಈ ಹಬ್ಬದ ವಿಶೇಷ.
ದನಕರುಗಳ ಮೈ ತೊಳೆದು ಅವುಗಳಿಗೆ ಅಲಂಕಾರ ಮಾಡಿ ಪೂಜಿಸುವ ಸಂಪ್ರದಾಯ ರೂಢಿಯಲ್ಲಿದೆ.
ಉತ್ತರಾಯಣ ಪುಣ್ಯ ಕಾಲ
ಸಾಮಾನ್ಯವಾಗಿ ಪುಷ್ಯಮಾಸದಲ್ಲಿ ಬರುವ
ಮಕರ ಸಂಕ್ರಾಂತಿಯನ್ನು ಉತ್ತರಾಯಣ
ಪುಣ್ಯಕಾಲವೆಂದು ಕರೆಯುತ್ತಾರೆ.ಉತ್ತರಾಯಣ ಪುಣ್ಯಕಾಲ,ಶ್ರೇಷ್ಠಕಾಲವೆಂದು ಹೇಳುತ್ತಾರೆ.
ಭೀಷ್ಮಾಚಾರ್ಯರೂ ಸಹ ಅವರ ದೇಹತ್ಯಾಗಮಾಡಲು ಉತ್ತರಾಯಣ ಪುಣ್ಯಕಾಲ ಬರುವವರೆಗೂ ಶರಶಯ್ಯೆಯಲ್ಲಿಹರಿಸ್ಮರಣೆ ಮಾಡುತ್ತಾ ಕಾದಿದ್ದರು.
ಉತ್ತರಾಯಣ ಪುಣ್ಯಕಾಲದಂದು ಮಾಡಿದ ದಾನ ಧರ್ಮಗಳು ಜನ್ಮ ಜನ್ಮದಲ್ಲೂ ಸದಾ ನಮಗೆ ಸಿಗುವಂತೆ ಸೂರ್ಯಪರಮಾತ್ಮನುಅನುಗ್ರಹಿಸುತ್ತಾನೆ.
ಯುಗಾದಿಯಂದು ಬೇವುಬೆಲ್ಲ ವನ್ನು ಸ್ವೀಕರಿಸಿ
ಜೀವನದಸಿಹಿಕಹಿಗಳನ್ನುಸಮರಸದಿಂದನೋಡುವಂತೆ,ಈ ಹಬ್ಬದಲ್ಲಿ ಎಳ್ಳು ಬೆಲ್ಲಹಂಚುವುದರ ಮೂಲಕ ಮನಸ್ಸಿನ ಕಹಿ ಭಾವನೆ ಮರೆತು ಸಿಹಿ ಭಾವ ತುಂಬಿ ,ಸುಖಸಂತೋಷ ,ನೆಮ್ಮದಿ ಎಲ್ಲರ ಬಾಳಿನಲ್ಲೂ ಬರಲಿ ಎಂಬುದು ಹಬ್ಬದ ದ್ಯೋತಕವಾಗಿದೆ.
ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತಾಡುಎನ್ನುವುದೇ ಮಕರಸಂಕ್ರಾತಿಯ ಸಂದೇಶವಾಗಿದೆ.
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬ ಮತ್ತು ಉತ್ತರಾಯಣ ಪುಣ್ಯಕಾಲದ ಶುಭಾಶಯಗಳು.