Klive Special Article ನಮ್ಮೆಲ್ಲರ ಪ್ರೀತಿಯ ನಂದನ್ ಇನ್ನಿಲ್ಲ.
ಬರೆಯಲು ಬಹಳ ದುಃಖವಾಗಿದೆ.
ನಂದನ್ …
“ಶಿವಮೊಗ್ಗ ನಂದನ್” ಆಗುವ ಮುಂಚಿನಿಂದಲೂ
ನನಗೆ ಪರಿಚಿತರು. ಆತ್ಮೀಯರು.
ಶಿವಮೊಗ್ಗದ ಗಿಡಮರಗಳ ಉಳಿವಿನ ಬಗ್ಗೆ
ಹೋರಾಟ ಮಾಡಿದವರಲ್ಲಿ
ನಂದನ್ ಮುಂಚೂಣಿಗ.
ನಗರದಲ್ಲಿ ರಸ್ತೆ ಅಗಲೀಕರಣದ ಬಗ್ಗೆ ಸಾಲುಮರಕ್ಕೆ ಆಡಳಿತವು ಕೊಡಲಿ ಬೀಸಿ, ಜೆಸಿಬಿ ತಂದಾಗ ಆತ್ಮಹತ್ಯೆ ಅಂತಹ
ಪ್ರತಿಭಟನೆಗೆ ನಿಂತವರು.
ಪರಿಸರ ಪ್ರೀತಯ ಮುಂದೆ ಸರ್ಕಾರಿ ಸಿಬ್ಬಂದಿ ಸೋತು ಹಿಂದಡಿಯಿಟ್ಟ ಪ್ರಸಂಗಗಳಿವೆ.
ಶಿವಮೊಗ್ಗದಲ್ಲಿ ಮರಕಡಿತಲೆ ಅಂದರೆ
ನಂದನ್ ಮಬ ಮನುಷ್ಯ ಬಂದಾನು ಜೋಪಾನ ಎಂಬ
ಒಳದನಿ ಸರ್ಕಾರಿ ಸಿಬ್ಬಂದಿಗೆ ಹೇಳುತ್ತಿತ್ತು.
ನಂದನ್, ತುಂಬಾ ಚಂದದ ಚಿತ್ರಗಳನ್ನ ಅದರಲ್ಲೂ ಸುದ್ದಿ ಹಿನ್ನೆಲೆಯ ಫೋಟೋಗಳನ್ನ ಅಷ್ಟೇ ತಾಜಾತನದಿಂದ ತೆಗೆಯುವ ನಿಷ್ಣಾತ.
ಮಾತುಕತೆ ಮೃದು.
Klive Special Article ಭೇಟಿಯಾದರೆ ಸಾಕು ಮಾಧ್ಯಮ ,ಸುದ್ದಿ ಫೋಟೋಜನಿಕ್ ಎಲ್ಲದರ ಬಗ್ಗೆ ಮಾತಾಡುತ್ತಿದ್ದರು.
ತಮ್ಮ ಅಮೂಲ್ಯ ಅನುಭವಗಳನ್ನ ಹಂಚಿಕೊಳ್ಳುತ್ತಿದ್ದರು.
ನನಗೆ ಭೇಟಿಯಾದಾಗಲೆಲ್ಲಾ ಹೊಸ ಅನುಭವಗಳ ನೆನಪಿನ ಬುತ್ತಿ ಹಂಚಿಕೊಳ್ಳುತ್ತಿದ್ದರು.
ಕೆ ಲೈವ್ ಗೆ ಅವರ ವಿಶೇಷ ಮಾತುಕತೆಗೆ ಬನ್ನಿ ಎಂದು ಹೇಳೀಹೇಲಿ ಸೋತಿದ್ದೆ.
ಯಾಕೋ ಅವರು ಮನಸ್ಸು ಮಾಡಲಿಲ್ಲ.
ಇತ್ತೀಚೆಗೆ ಅಂತರ್ಮುಖಿಯಾಗಿ ಕಾಣುತ್ತಿದ್ದರು .
ಸ್ನೇಹಜೀವಿ.
ನಾನು ಭದ್ರಾವತಿ ಆಕಾಶವಾಣಿಯಲ್ಲಿ ಸೇವೆಯಲ್ಲಿದ್ದಾಗ ಯುವವಾಣಿ ಕಾರ್ಯಕ್ರಮದಲ್ಲಿ
ಯುವ ಛಾಯಾಚಿತ್ರಗ್ರಾಹಕ ಎಂದು ಸಂದರ್ಶಿಸಿದ್ದೆ.
ಅಂದಿನಿಂದ ಅವರು ನನಗೆ ಆತ್ಮೀಯರೇ ಆಗಿಬಿಟ್ಟಿದ್ದರು.
ಸುದ್ದಿ ಫೋಟೋ ಬೇಕೆಂದರೆ ತಕ್ಷಣ ಕಳಿಸುತ್ತಿದ್ದರು.
ನಂದನ್…ನೀವೀಗ ಇಲ್ಲ. ಒಂದು ಶೂನ್ಯ ಸ್ಪಷ್ಟಿಯಾಗಿದೆ.
ಆದರೆ ನೀವು ತೆಗೆದ ಸುದ್ದಿ ಫೋಟೋಗಳು ನಿಮ್ಮ ಬಗ್ಗೆ ಇನ್ನುಮುಂದೆ ಮಾತಾಡುತ್ತವೆ.
ನಿಮ್ಮ ಆತ್ಮಕ್ಕೆ
ಚಿರಶಾಂತಿ ಲಭಿಸಲಿ.
ನಮನ.
ಡಾ. ಸುಧೀಂದ್ರ ಚನ್ನಗಿರಿ
ಪ್ರಧಾನ ಸಂಪಾದಕರು ಕೆ ಲೈವ್ ನ್ಯೂಸ್ ಶಿವಮೊಗ್ಗ