Shankara Eye Hospital “ದೃಷ್ಟಿ ರಥ ಯಾತ್ರೆ” ಯನ್ನು ಶಂಕರ ಕಣ್ಣಿನ ಆಸ್ಪತ್ರೆ ಮತ್ತು ACOIN (ಅಸೋಸಿಯೇಶನ್ ಆಫ್ ಕಮ್ಯೂನಿಟಿ ಆಪ್ತಲ್ ಮೋಲೋಜಿಸ್ಟ್ಸ್ ಆಫ್ ಇಂಡಿಯಾ) ನ ಸಹಯೋಗದೊಂದಿಗೆ ಕೈಗೊಂಡಿದ್ದು, ಡಾ.ಸ್ವಪನ್ ಕುಮಾರ್ ಸಮಂತ ರವರು ದೇಶಾದ್ಯಂತ ನೇತ್ರ ಜಾಗೃತಿ ಜಾಥಾವನ್ನು ಭಾರತದಾದ್ಯಂತ ಕೈಗೊಂಡು, ಪ್ರತಿ ಜಿಲ್ಲೆಯಲ್ಲಿ ನೇತ್ರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಶಿವಮೊಗ್ಗದಲ್ಲಿ 101 ನೇ ಜಾಥಾವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ಮೊದಲನೇಯದಾಗಿ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ACOIN ಸಂಸ್ಥೆಯ ಕಾರ್ಯ ವೈಕರಿಯನ್ನು ಹಾಗೂ ಇಂದಿನ ಕಾರ್ಯಯೋಜನೆಯನ್ನು ರೂಪಿಸಲಾಯಿತು. ಶ್ರೀಯುತರು ತಮ್ಮ ಕಾರ್ಯವಿಧಾನವನ್ನು ಹಾಗೂ ಗುರಿಗಳನ್ನು ಸಂಸ್ಥೆಯೊಂದಿಗೆ ಹಂಚಿಕೊಂಡರು.
Shankara Eye Hospital ಡಾ.ಸ್ವಪನ್ ಕುಮಾರ್ ಸಮಂತ, ಡಾ|| ಮಲ್ಲಿಕಾರ್ಜುನ್ ಹಾಗೂ ಡಾ|| ಮಹೇಶ್ ಅವರು ಜಾಥಾಗೆ ಚಾಲನೆ ನೀಡಿದರು, ಜಾಥಾ ಶಂಕರ ಕಣ್ಣಿನ ಆಸ್ಪತ್ರೆಯಿಂದ ಆರಂಭವಾಗಿ ನಗರದ ಖಾಸಗಿ ಬಸ್ ನಿಲ್ದಾಣ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ನೇತ್ರ ಜಾಗೃತಿಯ ಅರಿವನ್ನು ಧ್ವನಿವರ್ಧಕಗಳ ಮೂಲಕ ಸಂದೇಶವನ್ನು ಶ್ರೀಯುತರು ತಿಳಿಸುತ್ತಾ ಸಾಗಿದರು. ನಂತರ ಸಂಸ್ಕೃತ ಹಳ್ಳಿ ಮತ್ತೂರಿಗೆ ತಲುಪಿ ಶಾರದಾ ವಿಲಾಸ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕಣ್ಣಿನ ಆರೈಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನೇತ್ರದಾನದ ಮಹತ್ವ, ಮಕ್ಕಳ ಕಣ್ಣಿನ ಆರೈಕೆ, ಉತ್ತಮ ಆಹಾರ ಪದ್ದತಿ, ಸಕ್ಕರೆ ಕಾಯಿಲೆಯಿಂದಾಗುವ ತೊಂದರೆಗಳು, ಕಣ್ಣಿನ ಪೊರೆ ಹಾಗೂ ನರ ಪರೀಕ್ಷೆ ಮಹತ್ವ, ಸುರಕ್ಷಿತ ಕಣ್ಣಿನ ಆರೈಕೆಯ ಸೂತ್ರಗಳು, ದೃಷ್ಟಿ ದೋಷ ಪರಿಹಾರ ಮುಂತಾದ ಮಹತ್ವದ ವಿಷಯಗಳ ಬಗ್ಗೆ ಡಾ.ಸ್ವಪನ್ ಕುಮಾರ್ ಸಮಂತರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ACOIN ಸಂಸ್ಥೆಯ ಮುಖ್ಯಸ್ಥರಾದ ಡಾ.ಸ್ವಪನ್ ಕುಮಾರ್ ಸಮಂತ, ಶಂಕರ ಕಣ್ಣಿನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ||ಮಹೇಶ್ ಎಸ್, ಹಿರಿಯ ವೈದ್ಯರಾದ ಡಾ||ಮಲ್ಲಿಕಾರ್ಜುನ, ಡಾ||ರವಿಶಂಕರ್, ಡಾ||ಕವಿತಾ ಹಾಗೂ ಮುಖ್ಯ ಆಡಳಿತಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಶಾಂತರಾಂ & ಶ್ರೀಮತಿ ಅನಿತಾ ಹಾಗೂ ವೈದ್ಯರು ಮತ್ತು ಸಿಬ್ಬಂದಿಗಳು ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
Shankara Eye Hospital ಕಣ್ಣಿನ ಕ್ಷೇಮದ ಬಗ್ಗೆ ಜನಜಾಗೃತಿ ಮೂಡಿಸಿದ ಶಂಕರ್ ಕಣ್ಣಿನ ಆಸ್ಪತ್ರೆಯ”ದೃಷ್ಟಿರಥಯಾತ್ರೆ”
Date: