Department of Health 2024-25 ನೇ ಸಾಲಿನಲ್ಲಿ ಆರೋಗ್ಯ ಇಲಾಖೆ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಜಾನಪದ ಕಲಾ ಪ್ರಕಾರದಲ್ಲಿ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರಾಷ್ಟ್ರೀಯ ಆರೋಗ್ಯ ಮತ್ತು ಮಾಹಿತಿ ಶಿಕ್ಷಣ ಸಂವಹನ(ಐಇಸಿ) ಕಾರ್ಯಕ್ರಮದಡಿ ಉತ್ತಮ ಕಲಾ ಪ್ರದರ್ಶನ ನೀಡುವಂತಹ ಕಲಾ ತಂಡಗಳನ್ನು ಅಯ್ಕೆ ಮಾಡಲು ಅರ್ಹ ಜಾನಪದ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಕಲಾ ತಂಡಗಳು ದಿನಾಂಕ: 10-01-2025 ರ ಸಂಜೆ 5 ಗಂಟೆಯೊಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣಾಧಿಕಾರಿಗಳ ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು.
ಕಲಾ ತಂಡಂಗಳು ಅಥವಾ ಕಲಾವಿದರು ಶಿವಮೊಗ್ಗ ಜಿಲ್ಲೆಯವರಾಗಿರಬೇಕು. ಕಲಾ ತಂಡ/ಕಲಾ ಸಂಘ/ ಯಾವುದೇ ಜಾನಪದ ಕಲಾ ಪ್ರಕಾರ ಹೆಸರಿನಲ್ಲಿ ನೊಂದಣಿಯಾಗಿರಬೇಕು. ಕಲಾ ತಂಡದ ನೋಂದಣಿ ನವೀಕರಣ/ಆಡಿಟ್ ರಿಪೋರ್ಟ್ ವರದಿ ಮತ್ತು ಕಲಾ ತಂಡದ ಮುಖ್ಯಸ್ಥರ ಅಧಿಕೃತ ವಿಳಾಸವನ್ನು ಅರ್ಜಿಯೊಂದಿಗೆ ಲಗತ್ತಿಸುವುದು. ಕಲಾ ತಂಡವು 8 ಜನ ಕಲಾವಿದರನ್ನೊಳಗೊಂಡಿರಬೇಕು ಮತ್ತು ಕಲಾವಿದರು 60 ವರ್ಷದ ಒಳಗಿರಬೇಕು.
Department of Health ಕಲಾ ಪ್ರಕಾರಕ್ಕೆ ತಕ್ಕಂತೆ ತಮ್ಮದೇ ಆದ ಪ್ರಸಾದನ/ಉಡುಪುಗಳೊಂದಿಗೆ ಕಲಾ ಪ್ರದರ್ಶನ ನೀಡಬೇಕು. ಮಹಿಳಾ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ಕಲಾವಿದರನ್ನೊಳಗೊಂಡಿರಬೇಕು.
ಈ ಕಚೇರಿಯಿಂದ ತಿಳಿಸಿದ ದಿನಾಂಕದಂದು ಆಯ್ಕೆ ಸಮಿತಿ ಮುಂದೆ ಕಲಾ ಪ್ರದರ್ಶನ ನೀಡಬೇಕು ಎಂದು ನಿಯಮಗಳು ಒಳಗೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣಾಧಿಕಾರಿಗಳ ಕಚೇರಿಯ ಐಇಸಿ ವಿಭಾಗವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.