Amarashilpi Jakanachari ಅಮರಶಿಲ್ಪಿ ಜಕಣಾಚಾರಿಯವರ ಕೆಲಸಗಳು, ಶಿಲ್ಪಕಲಾಕೃತಿಗಳು ಕಾಲವನ್ನು ಹಿಮ್ಮೆಟ್ಟಿಸುಂತಿವೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಯಂತಿ ಆಚರಣೆ ಸರಳವಾಗಿರಲಿ ಅಥವಾ ವಿಜೃಂಭಣೆಯಿಂದ ನಡೆಯಲಿ ಜಕಣಾಚಾರಿಯಂತಹ ಮಹಾನ್ ಶಿಲ್ಪಿಯ ಕೆಲಸಗಳು, ಅವರ ಮಹತ್ವ ಅರಿಯಲು ತೊಂದರೆಯಾಗುವುದಿಲ್ಲ. ಅತ್ಯಂತ ಶ್ರದ್ದೆ ಮತ್ತು ನೈಪುಣ್ಯತೆಯಿಂದ ಅವರು ರಚಿಸಿರುವ ಶಿಲ್ಪಾಕೃತಿಗಳು, ದೇವಸ್ಥಾನಗಳು ಕಾಲವನ್ನು ಹಿಮ್ಮೆಟ್ಟಿಸುತ್ತವೆ ಎಂದು ಸ್ಮರಿಸಿದ ಅವರು ಉತ್ತಮ ರಾಷ್ಟ್ರ ಕಟ್ಟಲು ಇಂತಹ ಸಾವಿರಾರು ಜಕಣಾಚಾರಿಗಳು ನಮಗೆ ಬೇಕು. ಜಕಣಾಚಾರಿಯವರು ನಮಗೆ ಎಂದಿಗೂ ಸ್ಪೂರ್ತಿಯಾಗಿದ್ದಾರೆ ಎಂದರು.
Amarashilpi Jakanachari ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಆಗರದಹಳ್ಳಿ ನಿರಂಜನಮೂರ್ತಿ ಮಾತನಾಡಿ, ಮಾಜಿ ಪ್ರಧಾನ ಮಂತ್ರಿ, ನಿಪುಣ ಅರ್ಥಶಾಸ್ತçಜ್ಞರಾದ ಡಾ.ಮನಮೋಹನ್ ಸಿಂಗ್ ರವರ ನಿಧನದ ಶೋಕಾಚರಣೆ ಪ್ರಯುಕ್ತ ಈ ಬಾರಿ ಅಮರಶಿಲ್ಪಿ ಜಕಣಾಚಾರಿಯವರ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಜಕಣಾಚಾರಿಯವರನ್ನು ದೇವಶಿಲ್ಪಿ ಎಂದು ಕರೆಯಲಾಗುತ್ತದೆ. ಅವರು ಕಟ್ಟಿರುವ ದೇವಸ್ಥಾಗಳು, ಅವರ ಕೆಲಸಗಳು ಅವಿಸ್ಮರಣೀಯವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವಕರ್ಮ ಮಹಾಸಭಾ ಗೌರವ ಅಧ್ಯಕ್ಷ ಟಿ.ಆರ್.ಸತ್ಯನಾರಾಯಣ, ಜಿಲ್ಲಾ ವಿಶ್ವಕರ್ಮ ಬ್ರಾಹ್ಮಣ ಸಂಘದ ಅಧ್ಯಕ್ಷೆ ಅನ್ನಪೂರ್ಣ ಕಾಳಾಚಾರ್, ಹರಕೆರೆ ಕಾಳಿಕಾಂಬ ಸೇವಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ಕಾಳಿಕಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಎಸ್.ರಾಮು, ಸೋಮಾಚಾರಿ ಟಿ.ಎಸ್, ಸತ್ಯನಾರಾಯಣ, ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಸ್ವಾಗತಿಸಿದರು.
Amarashilpi Jakanachari ಉತ್ತಮ ರಾಷ್ಟ್ರ ಕಟ್ಟಲು ಸಾವಿರಾರು ಜಕಣಾಚಾರಿಗಳು ನಮಗೆ ಬೇಕು- ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
Date: