Srinidhi Education Society ಸಹ್ಯಾದ್ರಿ ಕನ್ನಡ ಮತ್ತು ಆಂಗ್ಲ ಪ್ರೌಢಶಾಲೆ, ರಾಜೇಂದ್ರ ನಗರ, ಶಿವಮೊಗ್ಗ ವಿದ್ಯಾರ್ಥಿಗಳಿಗೆ ಶ್ರೀನಿಧಿ ಎಜುಕೇಷನ್ ಸೊಸೈಟಿ ವತಿಯಿಂದ ಅರಣ್ಯ ವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿವಮೊಗ್ಗದಿಂದ ಹೊರಟು ತೀರ್ಥಹಳ್ಳಿ ಮಾರ್ಗದ 15 ನೇ ಮೈಲಿಗಲ್ಲು ತಳಲೆ ಇಲ್ಲಿ ಅರಣ್ಯ ವೀಕ್ಷಣೆ ಮಾಡಿ ವಿದ್ಯಾರ್ಥಿಗಳಿಗೆ ಗಿಡ ಮರ ಬಳ್ಳಿಗಳು ಹಾಗೂ ಪ್ರಾಣಿ ಪಕ್ಷಿಗಳ ಬಗ್ಗೆ ಪರಿಚಯಿಸಲಾಯಿತು.
Srinidhi Education Society ಈ ಸಂದರ್ಭದಲ್ಲಿ ಮಂಗಳೂರಿನ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀಯುತ ಡಿ ಎಸ್ ರಾಜೇಂದ್ರರವರು ಭಾಗವಹಿಸಿ ಮಕ್ಕಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿದರು. ಐ ಪಿ ಎಸ್ ಅಧಿಕಾರಿಯಾದ ಕುಮಾರಿ ಮನೀಷ ಇವರು ವಿದ್ಯಾರ್ಥಿಗಳಿಗೆ ಯೋಜನೆ, ಗುರಿ ಮತ್ತು ಸಮಯ ನಿರ್ವಹಣೆ ಕುರಿತು ಮಾಹಿತಿ ನೀಡಿ ಮುಂದೆ ವಿದ್ಯಾರ್ಥಿಗಳು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಬೇಕೆಂದು ತಿಳಿಸಿದರು.