Awake Institute ಅವೇಕ್ ಸಂಸ್ಥೆಯು ಕಳೆದ 41 ವರ್ಷಗಳಿಂದಲೂ ಆರ್ಥಿಕ ಅಭಿವೃದ್ಧಿಯ ಮೂಲಕ ಮಹಿಳೆಯರ ಸಶಕ್ತೀಕರಣಕ್ಕೆ ಮುಡಿಪಾಗಿರುವ ಭಾರತದ ಪ್ರಪ್ರಥಮ ಸಂಸ್ಥೆ ಹಾಗು ಸ್ವಾವಲಂಬನೆಯ ದಿಸೆಯಲ್ಲಿ ಸದಸ್ಯತ್ವವನ್ನು ಪಡೆದಿರುವ ಮಹಿಳಾ ಉದ್ಯಮಿಗಳು ನಡೆಸುವ ಸ್ವಯಂ ಸೇವಾ ಸಂಸ್ಥೆಯಾಗಿ ಶ್ರಮಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಅವೇಕ್ ಸಂಸ್ಥೆಯು ಸ್ವಂತ ಉದ್ಯಮ ಪ್ರಾರಂಭ ಮಾಡಲು ಬಯಸುವ ಆಸಕ್ತ ಮಹಿಳೆಯರಿಗೆ, 15 ದಿನಗಳ ಬ್ಯೂಟಿ ಪಾರ್ಲರ್ ಕೌಶಲ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ದಿನಾಂಕ: 06.01.2025 ರಿಂದ 25.01.2025 ರವರೆಗೆ ಏರ್ಪಡಿಸಿದ್ದು, ಈ ತರಬೇತಿಯಲ್ಲಿ ಪಾರ್ಲರ್‌ಗೆ ಸಂಬಂಧಿಸಿದ ತ್ರೆಡಿಂಗ್, ವ್ಯಕ್ಸಿಂಗ್, ಬ್ಲಿಚಿಂಗ್, ಮೇಕಪ್ ಕಿಟ್, ಡಿ-ಟಾನ್, ಕ್ಲೀನ್ ಆಪ್, ಫೇಶಿಯಲ್, ಹೆಡ್ ಮಾಷಾಜ್, ಮೆಹಂದಿ, ಹೇರ್ ಕಲರ್ಸ್, ಹೇರ್ ಕಟ್ಟಿಂಗ್, ಸ್ಕಿನ್ ಕೇರ್, ಇನ್ನೂ ಮುಂತಾದ ಬ್ಯೂಟಿ ಪಾರ್ಲರ್ ಉದ್ದಿಮೆಗೆ ಸಂಬಂಧಿಸಿದಂತೆ ಶಿಭಿರಾರ್ಥಿಗಳಿಗೆ ಕೌಶಲ್ಯ ಮತ್ತು ಬ್ಯಾಂಕಿಂಗ್ ಹಾಗೂ ಸಾಲ ಸೌಲಭ್ಯದ ನೀಡಲಾಗುವುದು.
Awake Institute ಹೆಚ್ಚಿನ ವಿವರಗಳಿಗಾಗಿ ಹಾಗು ಹೆಸರು ನೋಂದಾಣಿಗಾಗಿ ಸಂಪರ್ಕಿಸಿ ಎಸ್. ಸದಾಶಿವ – ಮುಖ್ಯ ತರಬೇತಿ ಸಂಯೋಜನಾಧಿಕಾರಿ ಅವೇಕ್, ಬಿ – 76, ಕೈಗಾರಿಕಾ ವಸಾಹತು, ರಾಜಾಜಿನಗರ, ಬೆಂಗಳೂರು – 560010, ದೂರವಾಣಿ ಸಂಖ್ಯೆ: 98800 41360 | 99012 40555 | 2338 5874 ಇಲ್ಲಿ ಸಂಪರ್ಕಿಸಬಹುದಾಗಿದೆ.