Friday, January 24, 2025
Friday, January 24, 2025

Indian Medical Association Shivamogga ಪರೀಕ್ಷೆ ಹತ್ತಿರ ಬರುವಾಗ ರಾತ್ರಿ ಇಡೀ ನಿದ್ದೆ ಬಿಟ್ಟು ಓದಬೇಡಿ- ಪಾಸಿಟಿವ್ ಮೈಂಡ್ಡಾ. ಎಸ್.ಟಿ.ಅರವಿಂದ

Date:

Indian Medical Association Shivamogga ಪ್ರೌಢ ಶಾಲಾ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ಹದಿಹರೆಯದ ವಿದ್ಯಾರ್ಥಿ/ನಿಯರಲ್ಲಿ ಅವರ ವಯೋಮಾನಕ್ಕನುಗುಣವಾಗಿ ಏಕಾಗ್ರತೆಯ ಕೊರತೆಯಿಂದ, ಒಂದೇ ವಿಷಯದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯ ಕಡಿಮೆಯಿದ್ದು, ಅದನ್ನು ನಿವಾರಿಸಿಕೊಂಡು ವಿವಿಧ ವಿಷಯಗಳನ್ನು ಅಭ್ಯಾಸ ಮಾಡಲು ತಯಾರಿಸಿಕೊಂಡ ವೇಳಾಪಟ್ಟಿಗನುಗುಣವಾಗಿ ವರ್ಷದ ಪ್ರಾರಂಭದಿಂದಲೂ ನಿರಂತರವಾಗಿ ಪರಿಶ್ರಮ ಪಟ್ಟು ಓದಿ ವಿವಿಧ ಪರಿಕಲ್ಪನೆಗಳನ್ನು ಮೈಗೂಡಿಸಿಕೊಂಡಲ್ಲಿ ಎಂತಹ ಪರೀಕ್ಷೆಯನ್ನಾದರೂ ಎದುರಿಸಿ, ಅದರಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಶಿವಮೊಗ್ಗ ನಗರದ ಖ್ಯಾತ ಮನೋವೈದ್ಯ ಹಾಗೂ ಪಾಸಿಟಿವ್ ಮೈಂಡ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ|| ಅರವಿಂದ್ ಅವರು ಅಭಿಪ್ರಾಯ ಪಟ್ಟರು.
ಅವರು ರೋಟರಿ ಆಂಗ್ಲ ಪ್ರೌಢ ಶಾಲೆ ಹಾಗೂ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಮೃತ ಮಹೋತ್ಸವದ ಅಂಗವಾಗಿ ಪ್ರೌಢ ಶಾಲಾ ಮಕ್ಕಳಿಗೆ ಏರ್ಪಡಿಸಿದ ಪರೀಕ್ಷೆಯನ್ನು ನಿರ್ಭಯದಿಂದ ಎದುರಿಸುವುದು ಹೇಗೆೆ ಎಂಬ ವಿಷಯದ ಮೇಲೆ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ಮಾಡುತ್ತಿದ್ದರು. ತಮ್ಮ ಮಾತನ್ನು ಮುಂದುವರೆಸಿದ ಶ್ರೀಯುತರು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೆಚ್ಚುತ್ತಿದ್ದು, ಆತಂಕಗೊಳಗಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ವಿದ್ಯಾರ್ಥಿಗಳು ಮೊಬೈಲ್‌ನ ಗೀಳಿಗೆ ಅಂಟಿಕೊAಡು ಪರೀಕ್ಷಾ ವಿಷಯಗಳನ್ನು ಸತತವಾಗಿ ಅಭ್ಯಾಸ ಮಾಡದೆ ಪರೀಕ್ಷೆ ಹತ್ತಿರ ಬರುವಾಗ ರಾತ್ರಿ ಇಡೀ ನಿದ್ದೆ ಬಿಟ್ಟು ಓದುವುದರಿಂದ ಈ ಸಮಸ್ಯೆ ಉದ್ಭವಿಸುತ್ತದೆ. ಹಾಗಾಗಿ, ಮಕ್ಕಳು ಪೌಷ್ಠಿಕವಾದ ಆಹಾರವನ್ನು ಸೇವಿಸುವುದರ ಜೊತೆಗೆ ಓದಿನಲ್ಲಿ ಸಮಯ ಪಾಲನೆ ಮಾಡಿಕೊಂಡು ವಿಶ್ರಾಂತಿಯ ಜೊತೆಗೆ ನಿರ್ದಿಷ್ಟ ಸಮಯದಲ್ಲಿ ನಿದ್ದೆ ಮಾಡಿ ತಮ್ಮ ಮನಸ್ಸನ್ನು ಉಲ್ಲಾಸಕರವಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ ಎಂದರು.
Indian Medical Association Shivamogga ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆಯ ಅಧ್ಯಕ್ಷರು ಹಾಗೂ ಸಿಮ್ಸ್ನ ಇ.ಎನ್.ಟಿ. ವಿಭಾಗದ ಮುಖ್ಯಸ್ಥರಾದ ಡಾ|| ಶ್ರೀಧರ್ ಹಾಗೂ ಐ.ಎಂ.ಎ. ಶಿವಮೊಗ್ಗ ಘಟಕದ ಕಾರ್ಯದರ್ಶಿ & ಸುಬ್ಬಯ್ಯ ಆಸ್ಪತ್ರೆ ಡೈರೆಕ್ಟರ್ ಆದ ಡಾ|| ವಿನಯ ಶ್ರೀನಿವಾಸ್ ಇವರು ಈ ವಿಷಯದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಮಗ್ರ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಈ ಶಾಲೆಯ ವಿದ್ಯಾರ್ಥಿಗಳ ರಕ್ತದ ಗುಂಪನ್ನು ಗುರುತಿಸುವ ಕಾರ್ಯವನ್ನು ಸುಬ್ಬಯ್ಯ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂಧಿ ವರ್ಗದವರಿಂದ ಮಾಡಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಟ್ರಸ್ಟ್ನ ಅಧ್ಯಕ್ಷರು ಹಾಗೂ ನಿವೃತ್ತ ಡಿ.ಪಿ.ಐ. ರೊ. ಚಂದ್ರಶೇಖರಯ್ಯ ಎಂ., ಇವರು ಮಾತನಾಡುತ್ತಾ, ಪರೀಕ್ಷೆಯಲ್ಲಿ ಶೇ.೫೦ ಪ್ರಶ್ನೆಗಳು ಸಾಧಾರಣ ಬುದ್ಧಿಮತ್ತೆ ಮಕ್ಕಳಿಗೂ, ಶೇ.೨೫ ಪ್ರಶ್ನೆಗಳು ಕಡಿಮೆ ಬುದ್ಧಿಮತ್ತೆ ಮಕ್ಕಳಿಗೂ ಹಾಗೂ ಶೇ.೨೫ ಪ್ರಶ್ನೆಗಳು ಮಾತ್ರ ಹೆಚ್ಚು ಬುದ್ಧಿಮತ್ತೆ ಮಕ್ಕಳಿಗಾಗಿ (ಂveಡಿಚಿge ಟeಚಿಡಿಟಿeಡಿs, sಟoತಿ ಟeಚಿಡಿಟಿeಡಿs, ಉiಜಿಣeಜ ಟeಚಿಡಿಟಿeಡಿs) ರೂಪಿಸುವುದರಿಂದ ಯಾರೂ ಪರೀಕ್ಷಾ ಭಯವನ್ನು ಹೊಂದದೆ, ಲೀಲಾಜಾಲವಾಗಿ ಎದುರಿಸಬಹುದು ಎಂದು ತಿಳಿಸಿದರು.
ಪ್ರಾರಂಭದಲ್ಲಿ ಈ ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದ ಟ್ರಸ್ಟ್ನ ಉಪಾಧ್ಯಕ್ಷ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್ ಇವರು ಪರೀಕ್ಷೆಯನ್ನು ಎದುರಿಸುವಲ್ಲಿ ಮಕ್ಕಳಲ್ಲಿ ಆತಂಕ ಹೆಚ್ಚಾಗುತ್ತಿದ್ದು, ಅದಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಂರ‍್ಯಾಕ್ಟ್ ಕ್ಲಬ್‌ನ ಸಂಚಾಲಕರಾದ ಶಿಕ್ಷಕಿ ಶ್ರೀಮತಿ ಹರ್ಷಿತಾ ಕೆ.ಎಂ., ಇವರು ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಶಾಲೆಉ ಪ್ರಾಂಶುಪಾಲರಾದ ಸೂರ್ಯನಾರಾಯಣ್, ಇಂರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಕುಮಾರ್ ಎನ್., ಕಾರ್ಯದರ್ಶಿ ಗೌತಮಿ ಎಂ. ಇವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Siddaramaiah ನೇತಾಜಿ ಪ್ರತಿಮೆಗೆ ಸಿದ್ಧರಾಮಯ್ಯ ಅವರಿಂದ ಪುಷ್ಪ ಮಾಲಾರ್ಪಣೆ

Siddaramaiah ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ಜನ್ಮದಿನದ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ...

B.Y Vijayendra ಸ್ವಾಮಿ ವಿವೇಕಾನಂದರಂತಹ ಸಂತರು ನಮ್ಮ ದೇಶದ ಹಿರಿಮೆ ಸಾರಿದ್ದಾರೆ- ಬಿ.ವೈ.ವಿಜಯೇಂದ್ರ

B.Y Vijayendra ಸಂತರು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಸಮಾಜಕ್ಕೆ ನೀಡುತ್ತ ಬರುತ್ತಿರುವುದರಿಂದ ಇತರೆ...

M. B. Patil ಉದ್ಯಮ ದಿಗ್ಗಜರ ಸಂಗಡ ಸಚಿವ ಎಂ.ಬಿ.ಪಾಟೀಲ್ ಸಮಾಲೋಚನೆ

• ರಾಜ್ಯದಲ್ಲಿ ಹೂಡಿಕೆ ಹೆಚ್ಚಳ, ವಹಿವಾಟು ವಿಸ್ತರಣೆಗೆ ಐಟಿಸಿ, ರಿನ್ಯೂ ಪವರ್‌,...