Saturday, January 25, 2025
Saturday, January 25, 2025

Madhu Bangarappa ಶಿಕಾರಿಪುರ ಸ.ಬಾಲಕಿಯರ ಪ್ರೌಢಶಾಲೆ & ಸರ್ಕಾರಿ ಸಹ ಶಿಕ್ಷಣ ಪ್ರೌಢಶಾಲೆಗಳಿಗೆ ಕೆಪಿಎಸ್ ಶಾಲೆಗಳಾಗಿ ಉನ್ನತೀಕರಣ- ಮಧುಬಂಗಾರಪ್ಪ

Date:

Madhu Bangarappa ಶಿಕಾರಿಪುರಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ‌ ಸರ್ಕಾರಿ ಸಹ ಶಿಕ್ಷಣ ಪ್ರೌಢಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನ ತೀಕರಿಸಲಾಗುವುದು‌ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.
ಶಿಕಾರಿಪುರ ಸರ್ಕಾರಿ ಬಾಲಿಕಿಯರ ಪ್ರೌಢಶಾಲೆಯ ಮಕ್ಕಳ ಶಾಲೆಗೆ ಭೇಟಿ ನೀಡಿ, ಪಾರಂಪರಿಕ ಕಟ್ಟಡ ವೀಕ್ಷಿಸಿ, ಬಾಲಕಿಯರ ಶಾಲೆ ಮತ್ತು‌ಪಕ್ಕದಲ್ಲಿರು ಪ್ರೌಢಶಾಲೆಯನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸುವ ಬಗ್ಗೆ ಡಿಡಿಪಿಐ, ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿ, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಈ ಕುರಿತು ಮಾತನಾಡಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ ಅವರು, ಕೆಪಿಎಸ್ ಶಾಲೆಗಳಗಾಗಿ‌ ಉನ್ನತೀಕರಣ ಮಾಡಿದಾಗ ಉತ್ತಮ‌ ಮೂಲಭೂತ ಸೌಕರ್ಯಗಳು, ಸೌಲಭ್ಯಗಳು‌ಲಭಿಸಲಿವೆ. ಇನ್ನು‌೨ ವರ್ಷದಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದರು.
Madhu Bangarappa ಈ ಶಾಲೆ ೧೮೬೮ ರಲ್ಲಿ ಆರಂಭವಾಗಿದ್ದು ಪ್ರಸ್ತುತ
೧೩೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಂದಿನ‌ ದಿನಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ನೀಡಲಾಗುವುದು.
ಶಾಲೆಯಲ್ಲಿ ಸೌಲಭ್ಯಗಳು ಸಕಾಲದಲ್ಲಿ‌ದೊರಕುತಿತ್ತಿದೆಯೇ ಎಂದು‌ ವಿದ್ಯಾರ್ಥಿಗಳಲ್ಲಿ ವಿಚಾರಿಸಿದ ಅವರು, ಸರ್ಕಾರ ವಿದ್ಯಾರ್ಥಿಗಳು ಚೆನ್ನಾಗಿ ಓದಲೆಂದು ಉಚಿತ ಶಿಕ್ಷಣ, ಸಮವಸ್ತ್ರ, ಶೂ, ಸಾಕ್ಸ್, ಪುಸ್ತಕ, ಬಿಸಿಯೂಟ, ಹಾಲು , ರಾಗಿ ಮಾಲ್ಟ್, ಮೊಟ್ಟೆ ಇತರೆ ಸೌಲಭ್ಯ‌ನೀಡುತ್ತಿದೆ.
ಸರ್ಕಾರಿ‌ ಶಾಲೆಯಲ್ಲಿ‌ ಅತ್ಯುತ್ತಮ ಶಿಕ್ಷಕರಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು . ಶಾಲೆ ವತಿಯಿಂದ ಶೌಚಾಲಯ ಸೇರಿದಂತೆ ಇತರೆ ಬೇಡಿಕೆಗಳಿದ್ದು ಈಡೇರಿಸಲಾಗುವುದು ಎಂದರು.
ಯಾರೂ ಅನುತ್ತೀರ್ಣರಾಗಬಾರದೆಂಬ ಉದ್ದೇಶದಿಂದ ಮೂರು ಪರೀಕ್ಷಾ ಮಾದರಿ ಜಾರಿಗೆ ತರಲಾಗಿದೆ. ಬೆಳಗಾವಿಗೆ ಮಹಾತ್ಮಾ ಗಾಂಧಿ ಭೇಟಿ ನೀಡಿ ೧೦೦ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಪ್ರಯುಕ್ತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಉತ್ತಮ ಕಾರ್ಯಕ್ರಮ ಮಾಡಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ತಾಲ್ಲೂಕು ಸಮಿತಿ ಅಧ್ಯಕ್ಷ ರಾದ ನಾಗರಾಜ ಗೌಡ ಮಾತನಾಡಿ, ಈ ಶಾಲೆ ಹಿಂದೆ ಬಾಲಕರ ಶಾಲೆ ಆಗಿತ್ತು. ಸಚಿವರು ಇಂದು‌ ಈ ಶಾಲೆಗೆ ಭೇಟಿ ನೀಡಿ ಕೆಪಿಎಸ್ ಶಾಲೆಯಾಗಿ ಮೇಲ್ದರ್ಜೆಗೇರಿಸುತ್ತಿರುವುದು ಸಂತಸದ ವಿಷಯ ಎಂದರು.
ಎಸ್ ಡಿಎಂಸಿ ಅಧ್ಯಕ್ಷೆ ಗೀತಾ ಮಾತನಾಡಿ, ಶಾಲೆಯ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದರು. ಡಿಡಿಪಿಐ ಮಂಜುನಾಥ್, ಶಿಕ್ಷಣಾಧಿಕಾರಿ‌ ಲೋಕೇಶಪ್ಪ ಮುಖ್ಯ ಶಿಕ್ಷಕರಾದ ನಾಗಾನಾಯ್ಕ್, ಎಸ್ ಡಿಎಂಸಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Idagunji Ganapathi Temple  ಇಡಗುಂಜಿ ಮೇಳಕ್ಕೆ”ಯುನೆಸ್ಕೊ” ಗೌರವ, ಕೆರೆಮನೆ ಶಿವಾನಂದ ಹೆಗಡೆಗೆ ಗೌರವಾರ್ಪಣೆ

Idagunji ganapathi temple  ಇಡಗುಂಜಿ ಅಂದರೆ ತಕ್ಷಣ ನಮಗೆ ನೆನಪಿಗೆ ನಿಂತ...

Kichcha Sudeep “ಉತ್ತಮ ನಟ” ಪ್ರಶಸ್ತಿಯನ್ನ ನಯವಾಗಿ ತಿರಸ್ಕರಿದ ಕಿಚ್ಚ ಸುದೀಪ್

Kichcha Sudeep ಕಿಚ್ಚ ಸುದೀಪ್‌ ಅವರ " ಪೈಲ್ವಾನ್" ಸಿನಿಮಾದಲ್ಲಿನ ಅಭಿನಯಕ್ಕಾಗಿ...

CM Siddharamaiah ಬಿಜೆಪಿ‌ ನೇತೃತ್ವದ ಕೇಂದ್ರ ಸರ್ಕಾರವು ಭದ್ರಾ ಯೋಜನೆಗೆ ₹5,300 ಕೋಟಿ ಬಿಡುಗಡೆ ಮಾಡಲಿ- ಸಿದ್ಧರಾಮಯ್ಯ

CM Siddharamaiah ನೀರಾವರಿಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, 1,274...