Dabbe Falls ಶಿವಮೊಗ್ಗ ನಗರದ ದಿಕ್ಸೂಚಿ ಅಡ್ವೆಂಚರ್ಸ್ ವತಿಯಿಂದ ಡಿಸೆಂಬರ್29 ರಂದು ಕಾರ್ಗಲ್ ಬಳಿ ಇರುವ ಮುಪ್ಪಾನೆ ಹತ್ತಿರ ದಬ್ಬೆ ಜಲಪಾತ ಕ್ಕೆ ಚಾರಣ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗದಿಂದ ಡಿಸೆಂಬರ್ 29 ಭಾನುವಾರ ರಂದು ಬೆಳಗ್ಗೆ 5 ಕ್ಕೆ ಚಾರಣ ಪ್ರವಾಸ ಆರಂಭಗೊಳ್ಳಲಿದ್ದು, ಬೆಳಗ್ಗೆ7 ಗಂಟೆ ಗೆ ಟ್ರೆಕ್ ಆರಂಭಿಕ ಸ್ಥಳ ತಲುಪಲಾಗುವುದು. ಬೆಳಗಿನ ಉಪಾಹಾರ ಸೇವಿಸಿದ ನಂತರ ನಿಂದ 3 ಕಿ.ಮೀ.ಜಲಪಾತ ಕ್ಕೆ ಚಾರಣ ಆರಂಭಗೊಳ್ಳಲಿದೆ. ನಂತರ ವಾಪಸ್ ಆರಂಭಿಕ ಸ್ಥಳಕ್ಕೆ ತಲುಪಿ ಊಟ ಇರಲಿದೆ. ಸಂಜೆ 4ರ ವೇಳೆಗೆ ದಬ್ಬೆ ಜಲಪಾತ ದಿಂದ ಹೊರಟು ರಾತ್ರಿ ಶಿವಮೊಗ್ಗಕ್ಕೆ ಹಿಂದಿರುಗಲಾಗುತ್ತದೆ.
Dabbe Falls ಚಾರಣದಲ್ಲಿ ಉಪಾಹಾರ, ಊಟ, ಬಸ್ ಸೌಲಭ್ಯ, ಅರಣ್ಯ ಪ್ರವೇಶದ ಅನುಮತಿ ವ್ಯವಸ್ಥೆ ಮಾಡಲಾಗುತ್ತದೆ. ಚಾರಣದಲ್ಲಿ ಭಾಗಿಯಾಗಲು ಆಸಕ್ತ ಇರುವವರು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 8277314779 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Dabbe Falls “ದಬ್ಬೆ ಜಲಪಾತಕ್ಕೆ” ಚಾರಣ ಹೋಗಬೇಕೆ? ಆಸಕ್ತರಿಗೆ ಮಾಹಿತಿ ಇಲ್ಲಿದೆ.
Date: