Rotary Club Shimoga ಆಧುನಿಕ ಯುಗದಲ್ಲಿ ಸಂಘಗಳ ಪರಿಕಲ್ಪನೆ ಪ್ರಾಮುಖ್ಯತೆ ಪಡೆದಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣ್ ಕುಮಾರ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಎಫ್‌ಪಿಎಐ ಆಶಯದಲ್ಲಿ ಸಂಘ ಸಂಸ್ಥೆಗಳ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿಗತವಾಗಿ ಸಾಧಿಸಲಾಗದ ಬೇಡಿಕೆಗಳನ್ನು ಸಂಘದ ಮೂಲಕ ಸಾಧಿಸುವುದು ಸಾಧ್ಯ. ಎಲ್ಲ ಸಂಘ-ಸಂಸ್ಥೆಗಳ ಉದ್ದೇಶ ಒಂದೇ ಆದರೆ ದಾರಿ ಬೇರೆ ಬೇರೆ ಇರುತ್ತದೆ. ರೋಟರಿ ಸಂಸ್ಥೆಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಎಲ್ಲರ ಸಹಾಕರದಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಫ್‌ಪಿಎಐ ಉಪಾಧ್ಯಕ್ಷ ಭಾರತಿ ಚಂದ್ರಶೇಖರ್ ಮಾತನಾಡಿ, ಈ ರೀತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಸಂಘ ಸಂಸ್ಥೆಗಳು ಒಗ್ಗೂಡುವುದರಿಂದ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅನುಕೂಲವಾಗುವುದು ಎಂದು ತಿಳಿಸಿದರು.
Rotary Club Shimoga ಸಂಪನ್ಮೂಲ ವ್ಯಕ್ತಿಯಾಗಿ ವಿಶಾಲಾಕ್ಷಿ ಅವರು ಲಿಂಗಧಾರಿತ ದೌರ್ಜನ್ಯದ ಬಗ್ಗೆ ಸಭೆಗೆ ಸವಿಸ್ತಾರವಾಗಿ ವಿವರಣೆ ನೀಡಿದರು. ಸಂಪನ್ಮೂಲ ವ್ಯಕ್ತಿ ಸಂತು ಬಾಯಿ ಅವರು ಆರೋಗ್ಯದ ಆರಿವು ಮೂಡಿಸಿದರು. ಸಂಪನ್ಮೂಲ ವ್ಯಕ್ತಿ ವಿಲಿಯಮ್ಸ್ ಅವರು ವ್ಯಕ್ತಿತ್ವ ವಿಕಸನದ ಬಗ್ಗೆ ಮಾಹಿತಿ ನೀಡಿದರು.
ಈಶ್ವರ್, ಜಯಶೀಲ ಶೆಟ್ಟಿ, ಗೀತಾ ಜಗದೀಶ್ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನ ರವಿ ಕೋಟೊಜಿ, ಜಿ.ಪಿ.ಚಂದ್ರು, ನಟರಾಜ್, ಬಸವರಾಜ್, ಶುಭಾ, ಚಿದಾನಂದ್, ಎಫ್‌ಪಿಎಐನ ಸತೀಶ್, ತೇಜಸ್ವಿನಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದರು.