Saturday, November 16, 2024
Saturday, November 16, 2024

Karnataka Rajyotsava ಕೊರಿಯರ್ ಮುಂತಾಗಿ ಅಂಚೆಗೆ ಪರ್ಯಾಯ ಬಂದರೂ ಅಂಚೆ ಸೇವೆ ಕುಂದಿಲ್ಲ- ಡಾ.ಎಚ್.ಬಿ.ಮಂಜುನಾಥ್

Date:

Karnataka Rajyotsava ದೇಶದಲ್ಲಿ ಸುಮಾರು 1,65,000 ಅಂಚೆ ಕಚೇರಿಗಳ ನಾಲ್ಕು ಲಕ್ಷದ ಮೂವತ್ತು ಸಾವಿರ ಸಿಬ್ಬಂದಿಗಳು ಪ್ರತಿನಿತ್ಯ ಸುಮಾರು 13 ಕೋಟಿ ಮಂದಿಗೆ ಅಂಚೆ ಸೇವೆಯನ್ನು ಒದಗಿಸುತ್ತಿದ್ದು ವಿಶ್ವದ ಅತಿ ದೊಡ್ಡ ಸೇವಾ ಜಾಲಗಳ ಪೈಕಿ ಒಂದಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಪ್ರಶಂಸೆ ವ್ಯಕ್ತಪಡಿಸಿದರು.

ದಾವಣಗೆರೆ ಪ್ರಧಾನ ಅಂಚೆ ಕಛೇರಿಯ ಮನರಂಜನಾ ಕೂಟ ಹಾಗೂ ವಿಭಾಗೀಯ ಕಚೇರಿ ವತಿಯಿಂದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಏರ್ಪಾಡಾಗಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಾ ಕುರಿಯರ್ ಮುಂತಾಗಿ ಅಂಚೆಗೆ ಏನೇ ಪರ್ಯಾಯ ವ್ಯವಸ್ಥೆಗಳು ಬಂದರೂ ಭಾರತೀಯ ಅಂಚೆ ಇಲಾಖೆಯ ಪ್ರಾಮುಖ್ಯತೆಗೆ ಕುಂದು ಬಂದಿಲ್ಲ, ಕೇವಲ ಅಂಚೆ ಸೇವೆ ಒಂದೇ ಅಲ್ಲದೆ ಸಮಾಜಮುಖಿಯಾದ ಜನಪರವಾದ ಅನೇಕ ಸೇವಾ ಸೌಲಭ್ಯಗಳಿಂದಾಗಿ ಭಾರತೀಯ ಅಂಚೆಯು ಅನಿವಾರ್ಯ ಅವಶ್ಯವೂ ಆಗಿ ತನ್ನ ಜನಪ್ರಿಯತೆ ಹಾಗೂ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದರು.

ಭಾಷೆ ಕೇವಲ ಅಭಿವ್ಯಕ್ತಿ ಮಾಧ್ಯಮ, ಸಂವಹನ ಸಾಧನ ಅಷ್ಟೇ ಅಲ್ಲ, ಆ ಭಾಷಿಗರ ಸಂಸ್ಕೃತಿಯೂ ಅದರಲ್ಲಿ ಬಿಂಬಿತವಾಗುತ್ತದೆ. ಭಾಷೆ ಉಳಿದರೆ ಸಂಸ್ಕೃತಿಯೂ ಉಳಿದಂತೆ, ಆದರೆ ಈಗೀಗ ಹಳ್ಳಿ ಪಟ್ಟಣ ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ತಿನ್ನುವ ಅನ್ನಕ್ಕೆ ಅನ್ನ ಎನ್ನದೆ ರೈಸ್ ಎನ್ನುತ್ತಿರುವುದು ವಿಪರ್ಯಾಸವಾಗಿದೆ. ದಿನನಿತ್ಯದ ನಮ್ಮ ಭಾಷಾ ಬಳಕೆಯಲ್ಲಿ ಅನವಶ್ಯಕವಾದ ಅನ್ಯ ಭಾಷಾ ಪದಗಳನ್ನು ನಾವೆಷ್ಟು ಬಳಸುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬರು ತಾವಾಗಿಯೇ ವಿಮರ್ಶಿಸಿಕೊಂಡು ಸರಿಪಡಿಸಿಕೊಂಡಲ್ಲಿ ನಮ್ಮ ಭಾಷೆ ಖಂಡಿತ ಉಳಿಯುತ್ತದೆ ಎಂದರು.

Karnataka Rajyotsava ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂಚೆ ಅಧೀಕ್ಷಕರಾದ ಚಂದ್ರಶೇಖರ ಹೊಳ್ಳರವರು ವೈವಿಧ್ಯಮಯ ಪ್ರಯೋಗ ನಮ್ಮ ಕನ್ನಡ ಭಾಷೆಗೆ ಇದೆ, ಕನ್ನಡ ಧ್ವಜವು ಹಳದಿ ಮತ್ತು ಕೆಂಪು ವರ್ಣಗಳ ಅರ್ಥವತ್ತಾದ ಸಂಕೇತ ಹೊಂದಿದೆ ಎಂದರು. ಪ್ರಧಾನ ಅಂಚೆಪಾಲಕರಾದ ಎಂ. ಓಂಕಾರ ಮೂರ್ತಿ ಯವರ ಅಧ್ಯಕ್ಷತೆಯಲ್ಲಿ ಸಹಾಯಕ ಅಂಚೆ ಅಧೀಕ್ಷಕರುಗಳಾದ ಜೆ.ಎಸ್. ಗುರುಪ್ರಸಾದ್ ಹಾಗೂ ಕೆ. ಎಮ್. ನರೇಂದ್ರ ನಾಯ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ದಿನೇಶ್ ಆಚಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಂಚೆ ಕಚೇರಿಯ ಮಹಿಳಾ ಸಿಬ್ಬಂದಿ ನಾಡಗೀತೆ ಹಾಡಿದರು.

ಜೆ. ಎಸ್. ಗುರುಪ್ರಸಾದ್ ಪ್ರಾರ್ಥನೆ ನೆರವೇರಿಸಿದರೆ ಯಾಸ್ಮಿನ್ ಬಾನು ಸ್ವಾಗತ ಕೋರಿದರು. ಅತಿಥಿಗಳ ಪರಿಚಯವನ್ನು ಕೆ.ಪಿ.ಮಮತಾ ಮಾಡಿದರು. ಸಾರ್ವಜನಿಕ ಸಂಪರ್ಕ ಅಂಚೆ ನಿರೀಕ್ಷಕ ಅರಳು ಮಲ್ಲಿಗೆ ನಾಗರಾಜರಾವ್ ವೆಂಕಟರಾಮಯ್ಯ ಬಹುಮಾನ ವಿತರಣೆ ನಿರ್ವಹಿಸಿದರು.ಲೋಕೇಶ್ ನಾಯ್ಕ ವಂದನೆ ಸಲ್ಲಿಸಿದರು. ಹಿರಿಯೂರಿನ ದಿವೂಶಂಕರ್ ಅಣಕು ಪ್ರದರ್ಶನ ನೀಡಿದರೆ ಶ್ರೀನಿವಾಸ್ ಮಾಯಕೊಂಡ ಮುಂತಾದವರು ಸಾಂಸ್ಕೃತಿಕ ಪ್ರಸ್ತುತಿ ನೆರವೇರಿಸಿದರು. ಸೋಮಣ್ಣ ಮಾಯಾಚಾರ್ ಮುಂತಾದವರು ಸಹಕರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bharatiya Janata Party ಬಿಜೆಪಿ ಬಡವರ ಉದ್ಧಾರ ಮಾಡವ ಪಕ್ಷವಲ್ಲ.- ವೈ.ಬಿ.ಚಂದ್ರಕಾಂತ್

Bharatiya Janata Party ಭಾರತೀಯ ಜನತಾಪಕ್ಷದ ನಾಯಕರೇನಾದರೂ ಈ ಬಾರಿ...

Youth Hostel Association of India ಒತ್ತಡದ ಬದುಕಿನಿಂದ ವಿಶ್ರಾಂತಿ ಪಡೆಯಲು ಚಾರಣ-ಸುದರ್ಶನ್ ಪೈ

Youth Hostel Association of India ಚಾರಣದಲ್ಲಿ ಭಾಗವಹಿಸುವುದರಿಂದ ಮಾನಸಿಕ ಸಾಮಾರ್ಥ್ಯ...

MESCOM ನವೆಂಬರ್ 20. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗೀಯ ಕಚೇರಿಯಲ್ಲಿ ಜನಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ದಿನಾಂಕ 20.11.2024...

ಶಿಕಾರಿಪುರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಆದ ಬೆಳೆ ನಷ್ಟ ಪರಿಹಾರಕ್ಕೆ ಪ್ರಸ್ತಾವನೆ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಅಕ್ಟೋಬರ್ ತಿಂಗಳಿನ ಅಕಾಲಿಕ ಮಳೆಯಿಂದಾಗಿ ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿ, ತಡಸನಹಳ್ಳಿ, ಮದಗಹಾರನಹಳ್ಳಿ,...