N.J. Rajashekhar ಶಿವಮೊಗ್ಗ ನಗರಸಭಾ ಮಾಜಿ ಅಧ್ಯಕ್ಷ N J ರಾಜಶೇಖರ್ (ಸುಭಾಷ್) (72)ಭಾನುವಾರ ತಡರಾತ್ರಿ ವಿಧಿವಶರಾಗಿದ್ದಾರೆ.
ವೀರಶೈವ ಸಮಾಜದ ಮುಖಂಡರಾಗಿ, ಬಸವೇಶ್ವರ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
N.J. Rajashekhar ನಾಲ್ಕು ಬಾರಿ ನಗರಸಭೆ ಸದಸ್ಯರಾಗಿ, ಒಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಲಿವರ್ ಕ್ಯಾನ್ಸರ್ ನಿಂದ ಬಳಲುತಿದ್ದ ರಾಜಶೇಖರ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಕಳೆದ ವಾರ ಮತ್ತೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಂಜಪ್ಪ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾದವರು ಇಂದು ಕೊನೆ ಉಸಿರೆಳೆದಿದ್ದಾರೆ.
ಅಗಲಿದ ಶ್ರೀ ಎನ್ ಜೆ ಸುಭಾಷ್ ರವರಿಗೆ ಶ್ರೀ ಶಿವಗಂಗಾ ಯೋಗ ಕೇಂದ್ರದಿಂದ ಶ್ರದ್ಧಾಂಜಲಿ.
ನೋವಿನಲ್ಲೂ ನಲಿವನ್ನು ಕಾಣುತ್ತಿದ್ದವರು ಇವರು. ಯೋಗ ಕೇಂದ್ರದ ಕಾರ್ಯ ನಿಮಿತ್ತ ಅನೇಕ ಸಾರಿ ಚರ್ಚೆಗೆ ಅವರ ಮನೆಯಲ್ಲಿ ಸೇರಿದಾಗ ಅನಾರೋಗ್ಯದ ಬಳಲಿಕೆಯಲ್ಲೂ ಕೂಡ ತಮ್ಮ ಎಂದಿನಂತೆ ಹಾಸ್ಯ ಚಟಾಕಿಯೊಂದಿಗೆ ಎಲ್ಲರನ್ನು ನಗುವಿನ ಹೊಳೆಯಲ್ಲಿ ಹರಿಸುತ್ತಿದ್ದರು. ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುತ್ತಿದ್ದರು. ಶ್ರೀ ಶಿವಗಂಗಾ ಯೋಗ ಕೇಂದ್ರದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು. ಪೋಷಕರು ಹಿತೈಷಿಗಳು ಮಾರ್ಗದರ್ಶಕರು ಆಗಿದ್ದರು.
ಯೋಗ ಕೇಂದ್ರದಲ್ಲಿ ಮೌನಚರಣೆ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯೋಗ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಶ್ರೀ ಸಿ.ವಿ. ರುದ್ರಾರಾಧ್ಯರು ಕೇಂದ್ರಕ್ಕೆ ಅವರ ಸಹಕಾರ ಸೇವೆಯನ್ನು ಸ್ಮರಿಸಿದರು. ಅಧ್ಯಕ್ಷರಾದ ಶ್ರೀ ಬಿ.ಸಿ.ನಂಜುಂಡ ಶೆಟ್ಟಿ, ಕಾರ್ಯದರ್ಶಿ ಎಸ್.ಎಸ್. ಜ್ಯೋತಿ ಪ್ರಕಾಶ್, ಖಜಾಂಚಿಗಳಾದ ರಾಮಮೋಹನ್, ಸದಸ್ಯರಾದ ಎಸ್ ಎಸ್ ರುದ್ರೇಗೌಡರು, ಎಸ್ ವೈ ಅರುಣದೇವಿ , ಕಲಗೋಡು ರತ್ನಾಕರ್, ಹೊಸ ತೋಟ ಸೂರ್ಯನಾರಾಯಣ. ಯೋಗ ಶಿಕ್ಷಕರಗಳಾದ ಜಿಎಸ್ ಓಂಕಾರ್. ವಿಜಯ ಕೃಷ್ಣ. ಹರೀಶ್. ಯೋಗ ಕೇಂದ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ.ಜಿ ವಿಜಯಕುಮಾರ್. ಹಾಗೂ ಯುವ ಕೇಂದ್ರದ ಎಲ್ಲಾ ಶಿಕ್ಷಕರು ಹಾಗೂ ಯೋಗ ಬಂಧುಗಳು ತೀರ್ವ ಸಂತಾಪ ವ್ಯಕ್ತಪಡಿಸಿದ್ದಾರೆ .
ಶಿವಮೊಗ್ಗ ಬಿಜೆಪಿ ಘಟಕದಿಂದ ಶ್ರದ್ಧಾಂಜಲಿ
ನ್.ಜೆ ರಾಜಶೇಖರ್(ಸುಭಾಷ್) ಇವರು ಉತ್ತಮ ಸಂಸ್ಕಾರ ಕುಟುಂಬದಿಂದ ಬಂದಿದ್ದು, ರಾಷ್ಟ್ರೀಯ ಸ್ವಯಂಸೇವಕರಾಗಿ, ವೀರಶೈವ ಸಮಾಜದ ಅಧ್ಯಕ್ಷರಾಗಿ, ವೀರಶೈವ ಕಲ್ಯಾಣ ಮಂದಿರದ ಕಾರ್ಯದರ್ಶಿಯಾಗಿ ಹಾಹು ಭಾರತಿಯ ಜನತ ಪಾರ್ಟಿಯ ಅನನ್ಯ ಬಿಜೆಪಿಯ ಪಕ್ಷದ ಜವಬ್ದಾರಿಗಳನ್ನು ಹೋತ್ತು ಶಿವಮೊಗ್ಗ ನಗರದಲ್ಲಿ ಪಕ್ಷಕ್ಕೆ ದೋಡ್ಡಶಕ್ತಿಯಾಗಿದ್ದರು.ಶಿವಮೋಗ್ಗ ನಗರಸಭಾ ಅದ್ಯಕ್ಷಾರಗಿ ಉತ್ತಮವಾಗಿ ಕಾರ್ಯನಿರ್ವಹಿಸಿ ಸಮಾಜದ ಹಾಲವಾರು ಉಚಿತ ಸಾಮಜಿಕ ಕಾರ್ಯ ಮಾಡಿದ ಹೇಮೈಯ ದಿಮಂತ ನಾಯಕ ಎನ್.ಜೆ ರಾಜಶೇಖರ್(ಸುಭಾಷ್) ನಿನ್ನೆ ದಿನಾಂಕ 27-10-2024 ಭಾನುವಾರ ರಾತ್ರಿ ನಿದನರಾಗಿರುತ್ತಾರೆ.ಅವರ ನಿಧನರಾಗಿದ್ದಾರೆ. ಅವರಿಗೆ ದಿವ್ಯ ಅತ್ಯಕ್ಕೆ ಭಗವಂತನು ಚಿರ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತವೆ.ಅವರ ಕುಟುಂಬಕ್ಕೆ ಅವರ ಅಭಿಮಾನಿವರ್ಗಕ್ಕೆ ದುಂಖ ಸಹಿಸುವ ಶಕ್ತಿ ಭಗವಂತ ಕರುಣಿಸಲಿ. ಸಂತಾಪ ಸುಚಿಸುವರು ಶಾಸಕರು ಎಸ್ ಎನ್ ಚನ್ನಬಸಪ್ಪ(ಚೆನ್ನಿ) ಶಿವಮೊಗ್ಗ ನಗರ ,
ಡಿ ಮೋಹನ್ ರೆಡ್ಡಿ ಅಧ್ಯಕ್ಷರು ಬಿಜೆಪಿ ಶಿವಮೊಗ್ಗ ನಗರ, ಎಸ್. ಜ್ಞಾನೇಶ್ವರ ಎನ್ ಜೆ ನಾಗರಾಜ್, ಎನ್.ಕೆ ಜಗದೀಶ್,
ಹೆಚ್ ಕೆ ದೀನದಯಾಳು , ನವುಲೆ ಮಂಜುನಾಥ್, ಬಿಜೆಪಿ ಶಿವಮೊಗ್ಗ ನಗರ ಸಮಿತಿ