Wednesday, November 6, 2024
Wednesday, November 6, 2024

Shivamogga Dasara ಶಿವಮೊಗ್ಗ ದಸರಾ ಅಧಿಕಾರಿಗಳಿಗೆ ಬಿಸ್ಲೇರಿ ನೀರು ಜನಕ್ಕೆ ಕೊಳಕು ನೀರು ಸರಬರಾಜು ಪಾಲಿಕೆ ವೈಚಿತ್ರ್ಯ- ಶಿ.ಜು.ಪಾಶಾ

Date:

Shivamogga Dasara ಹಿಂದೂಗಳ ವಿಶೇಷ ಹಬ್ಬ ದಸರೆಗೆ ಹಿಂದೂ ನಾಯಕರೆಂದೇ ಕರೆಸಿಕೊಳ್ಳುವ ಶಾಸಕ ಚನ್ನಬಸಪ್ಪ @ ಚನ್ನಿ ಕೊಳಕು ಕುಡಿಯುವ ನೀರು ಸರಬರಾಜಾಗುತ್ತಿದ್ದರೂ ಮೌನವಾಗಿರುವುದೇಕೆ?

ಸಂತೋಷದಿಂದಲೇ ನವರಾತ್ರಿ ಹಬ್ಬ ಆಚರಿಸಲು ಸಿದ್ಧರಾದ ಶಿವಮೊಗ್ಗದ ಜನತೆಗೆ ಕೊಳಕು ನೀರನ್ನು ಸರಬರಾಜು ಮಾಡುತ್ತಿದೆ. ಈ ನೀರು ಎಷ್ಟು ಕೊಳಕಿದೆ ಎಂದರೆ, ಸ್ನಾನ ಕೂಡ ಮಾಡಲು ಸಾಧ್ಯವಿಲ್ಲದಷ್ಟು- ಇನ್ನು ಈ ನೀರು ಕುಡಿದುಬಿಟ್ಟರೆ ದೇವರೇಗತಿ; ಆ ನವದುರ್ಗೆಯರೇ ಕಾಪಾಡಬೇಕು!

ಶಿವಮೊಗ್ಗ ನಗರ ನೀರು ಸರಬರಾಜು ವ್ಯವಸ್ಥೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಅ.8ರಂದು ಬಂದ ಮಳೆಯಿಂದಾಗಿ ಗಾಜನೂರು ಡ್ಯಾಂ ಮತ್ತು ತುಂಗಾ ನದಿಯ ನೀರಿನಲ್ಲಿ ಕೆಂಪು ಬಣ್ಣವು (ಟರ್ಬಿಡಿಟಿ) ಹೆಚ್ಚಾಗಿದ್ದು, ನೀರನ್ನು ಸಾರ್ವಜನಿಕರು ಕುದಿಸಿ, ಆರಿಸಿ ಕುಡಿಯುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿ ಅದೇ ನೀರಲ್ಲಿ ಕೈತೊಳೆದುಕೊಂಡು ಕಾಣೆಯಾಗಿದ್ದಾರೆ.

ಈ ಕೊಳಕು ನೀರು ಇಡೀ ಶಿವಮೊಗ್ಗಕ್ಕೆ ವಿತರಣೆಯಾಗುತ್ತಿದೆ. ಶಾಸಕ ಚನ್ನಿ, ಆಯುಕ್ತೆ ಕವಿತಾ ಯೋಗಪ್ಪನವರ್, ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಮನೆಗೂ ಇದೇ ಕೊಳಕು ನೀರು ಸರಬರಾಜಾಗುತ್ತಿದೆಯಾ? ಹಾಗೆ ಆಗುತ್ತಿದ್ದರೆ, ಹಿಂದೂಗಳ ವಿಶೇಷ ಹಬ್ಬ ದಸರಾ ಕೊಳಕು ನೀರಲ್ಲೇ ನಡೆಯುತ್ತಿರುವುದೇಕೆ? ಶಾಸಕ ಚನ್ನಿಯವರು ದಸರಾ ಕಾರ್ಯಕ್ರಮಗಳಲ್ಲಿ ಮುಳುಗಿ ಹೋಗಿದ್ದಾರೆ. ಅವರು ಕುಂತಲ್ಲಿ, ನಿಂತಲ್ಲಿ ಬಿಸ್ಲರಿ ವಾಟರ್ ಸಿಗುತ್ತಿದೆ. ಅವರ ಜೊತೆ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ತಮ್ಮ ವ್ಯಾಪ್ತಿಗೇ ಈ ಸಮಸ್ಯೆ ಬರುವುದಿಲ್ಲ ಎಂದು ಅದೇ ಬಿಸ್ಲರಿ ವಾಟರ್ ಕುಡಿಯುತ್ತಾ ದಸರಾದಲ್ಲಿ ಮಗ್ನರಾಗಿದ್ದಾರೆ.

Shivamogga Dasara ಇನ್ನು ಈ ಸಮಸ್ಯೆ ಬಗೆಹರಿಸುವವರು ಯಾರು? ಕೊಳಕು ನೀರು ಕುದಿಸಿ, ಆರಿಸಿ ಕುಡಿಯಲು ಹೋದರೂ ನೀರಿನ ಕೊಳಕು ಬಣ್ಣ ನೋಡಿ ಜನ ಕಂಗಾಲಾಗುತ್ತಿದ್ದಾರೆ. ಕೊಳಕಾತಿ ಕೊಳಕು ನೀರಲ್ಲೇ ದಸರಾ ಮುಗಿಯುತ್ತಿದೆ. ಇನ್ನು, ರೋಗಗಳಿಗೆ ಬಲಿಯಾಗುವುದಷ್ಟೇ ಬಾಕಿ.

ಮಾಜಿ ಸಂಸದರೂ ಆಗಿರುವ ಕಾಂಗ್ರೆಸ್ಸಿನ ರಾಜ್ಯ ವಕ್ತಾರರಾದ ಆಯನೂರು ಮಂಜುನಾಥ್ ರವರು ಶಿವಮೊಗ್ಗ ಜನತೆಗೆ ವಿಶೇಷ ರೀತಿಯಲ್ಲೇ ಶುಭಾಶಯಗಳನ್ನು ಕೋರುತ್ತಾ ನೀರಿನ ಕುರಿತು ಗಮನ ಸೆಳೆದಿದ್ದಾರೆ. ಶಾಸಕರಿಗೂ ಆಯುಕ್ತರಿಗೂ ಮಾತಾಡಿದ್ದಾರೆ.

ಆದರೆ…ನೀರು ಹಾಗೇ ಕೊಳಕಾತಿ ಕೊಳಕಾಗಿಯೇ ಸರಬರಾಜಾಗುತ್ತಿರುವುದು ನಿಂತಿಲ್ಲ ಎಂದು ಶಿವಮೊಗ್ಗದ ಪತ್ರಕರ್ತ ಮತ್ತು ಕವಿ ಶಿ.ಜು.ಪಾಶಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddhramaiah ಮೂಡಾ ಬಗ್ಗೆ ಲೋಕಾಯುಕ್ತ ವಿಚಾರಣೆಯಲ್ಲಿ ಸೀಎಂ ಸಿದ್ಧರಾಮಯ್ಯ ಹೇಳಿದ್ದೇನು?

CM Siddhramaiah ಮುಡಾ ಪ್ರಕರಣ ಸಂಬಂಧ ಇಂದು( ಬುಧವಾರ) ಲೋಕಾಯುಕ್ತ...

Dnaneshwari Goshala ಗೋಪೂಜೆಯಿಂದ ಮನಸ್ಸಿಗೆ ಶಾಂತಿ & ನೆಮ್ಮದಿ- ಚಂದ್ರಹಾಸ.ಪಿ‌.ರಾಯ್ಕರ್

Dnaneshwari Goshala ಗೋವಿನ ಪೂಜೆ ಮಾಡುವುದರಿಂದ ಕೋಟ್ಯಾಂತರ ದೇವರ ಪೂಜಿಸಿದ ಪುಣ್ಯ...

Election Commission ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಮತದಾರರ ಪಟ್ಟಿ ಪ್ರಕಟಣೆ

Election Commission ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಕ್ಕೆ ಸಂಬAಧಿಸಿದAತೆ...