Sunday, October 6, 2024
Sunday, October 6, 2024

D Satya Prakash ಯಾವುದೇ ಸಿನಿಮಾ ಭಾವನೆಗಳ ಮೇಲಿ‌ನ ಆಟವಾಗಬಾರದು- ಡಿ.ಸತ್ಯಪ್ರಕಾಶ್

Date:

D. Satya Prakash ಸಿನಿಮಾ ಎನ್ನುವುದು ಭಾವನಾತ್ಮಕ ಜೊತೆಗೆ ವಿಚಿತ್ರವೂ ಹೌದು
ಖ್ಯಾತ ಚಲನ ಚಿತ್ರ ನಿರ್ದೇಶಕ ಡಿ. ಸತ್ಯಪ್ರಕಾಶ್ ಪ್ರತಿಪಾದನೆ
ಶಿವಮೊಗ್ಗಃ
ಸಿನಿಮಾ ಎನ್ನುವುದು ಮನರಂಜನೆಯ ಮೂಲಕ ಭಾವನೆಗಳ ಜೊತೆಗೆ ಆಟವಾಡುತ್ತಿದೆಯಾದರೂ, ಅದರಲ್ಲಿರುವ ವಿಚಿತ್ರವನ್ನು ಮರೆಯುವಂತಿಲ್ಲ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಡಿ. ಸತ್ಯಪ್ರಕಾಶ್ ಹೇಳಿದರು.
ಶಿವಮೊಗ್ಗ ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜಗಳ ವತಿಯಿಂದ ಆಯೋಜಿಸಲಾದ ದಸರಾ ಚಲನಚಿತ್ರೋತ್ಸವದ ಭಾಗವಾಗಿ ಆಯೋಜಿಸಲಾದ ಚಲನಚಿತ್ರ ರಸ ಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತೀ ಚಲನಚಿತ್ರದಲ್ಲಿ ವೈe್ಞÁನಿಕ ಅಂಶಗಳು ಇರುವುದರಿಂದಲೇ ಅದು ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಿದೆ ಎಂದರು.
ಯಾವುದೇ ಸಿನಿಮಾ ಆಗಲಿ, ಅದು ಕೇವಲ ಭಾವನೆಗಳ ಮೇಲೆ ಆಟವಾಗಬಾರದು. ಅದರಲ್ಲಿ ವಿe್ಞÁನದ ಅಂಶಗಳ ಮೂಲಕ ಕಥೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ಸಾಧ್ಯ. ಹೀಗಾಗಿ ಪ್ರೇಕ್ಷಕರು ಕೂಡಾ ಈ ಮೂಲಕವೇ ಚಿತ್ರಗಳನ್ನು ಗ್ರಹಿಸಲು ಮುಂದಾಗಬೇಕು ಎಂದು ಆಶಿಸಿದ ಅವರು, ಈ ರೀತಿಯ ರಸಗ್ರಹಣ ಕಾರ್ಯಾಗಾರಗಳ ಮೂಲಕ ಚಲನಚಿತ್ರದ ವಿe್ಞÁನ ಅಂಶಗಳನ್ನು ಗುರುತಿಸಲು ಸಾಧ್ಯ ಎಂದರು.
ಇಂದು ಓದುವ ಸಂಸ್ಕೃತಿ ಮರೆಯಾಗುತ್ತಿದೆ. ಕಾದಂಬರಿಗಳನ್ನು ಓದುವ, ಆ ಮೂಲಕ ಕಾದಂಬರಿಕಾರರನ್ನು ಆರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸಬೇಕು. ಪ್ರತಿಯೊಂದು ಓದು ಕೂಡಾ, ವ್ಯಕ್ತಿಯ ಮನಸನ್ನು ವಿಕಸಿತಗೊಳಿಸುತ್ತದೆ. ಆ ಕಾದಂಬರಿ ಚಿತ್ರವಾಗಿ ತೆರೆಯ ಮೇಲೆ ಬಂದಾಗ, ಅದು ಇನ್ನಷ್ಟು ಆಪ್ತವಾಗುತ್ತದೆ ಎಂದ ಅವರು, ಇಂದು ಸಿನಿಮಾ ಕೇವಲ ಮನರಂಜನೆ ಮಾತ್ರವಲ್ಲ, ಅದೊಂದು ಅಧ್ಯಯನದ ವಸ್ತು ಎಂದರು.
D. Satya Prakash ಒಂದು ಸಿನಿಮಾ ತೆರೆಯ ಮೇಲೆ ಬರಬೇಕಾದರೆ, ಸಾಕಷ್ಟು ತಂತ್ರಜ್ಞರು, ಕಲಾವಿದರ ಶ್ರಮ ಅಡಗಿರುತ್ತದೆ. ಸಿನಿಮಾ ಕೇವಲ ನಿರ್ದೇಶಕನ ಸೊತ್ತಲ್ಲ. ಆತ ಅದನ್ನು ತೆರೆಯ ಮೇಲೆ ತರುವ ಸಾಧಕ ಮಾತ್ರ. ಹೀಗಾಗಿ ಕಥೆಗೆ ಧಕ್ಕೆಯಾಗದಂತೆ ಚಿತ್ರವನ್ನು ನಿರೂಪಿಸುವ ಗುರುತರವಾದ ಜವಾಬ್ದಾರಿಯನ್ನು ಹೊಂದಿರುವ ನಿರ್ದೇಶಕನಿಗೆ ತಂತ್ರಜ್ಞರ ಪರಿಣಾಮಕಾರಿಯಾದ ಸಾಥ್ ಸಿಕ್ಕಿದರೆ, ಅತ್ಯುತ್ತಮ ಚಿತ್ರ ಮೂಡಿಬರಲು ಸಾಧ್ಯ ಎಂದರು.
ಇAದು ಚಲನಚಿತ್ರ ಎನ್ನುವುದು ಉದ್ಯಮವಾಗಿದೆ. ಹೀಗಾಗಿ ಪ್ರತೀ ಸೆಕೆಂಡು ಕೂಡಾ ಹಣದ ಮೇಲೆ ಅವಲಂಬಿತವಾಗಿದೆ ಎಂದ ಅವರು, ನಿರ್ಮಾಪಕನಾದವನಿಗೆ ತಾನು ಹಾಕಿದ ಬಂಡವಾಳ ಲಾಭದೊಂದಿಗೆ ಹಿಂದಿರುಗಬೇಕು ಎಂಬ ಆಶಯ ಸಹಜ. ಆದರೆ, ಇದರಿಂದ ಸೃಜನಶೀಲತೆಗೆ ಧಕ್ಕೆಯಾಗುತ್ತಿದೆ. ಎಲ್ಲ ಕಾರಣಕ್ಕೂ ವ್ಯಾಪಾರೀಕರಣವೇ ಮುಖ್ಯವಾಗಬಾರದು ಎಂದರು.
ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎಂಬ ಆರೋಪ ಇದೆ. ಆದರೆ, ಇದು ಸರಿಯಲ್ಲ. ಈಗಲೂ ಕನ್ನಡದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಉತ್ತಮವಾದ ಚಿತ್ರಗಳು ಬರುತ್ತಿವೆ ಎಂದು ಹಲವು ಉದಾಹರಣೆಗಳನ್ನು ನೀಡಿದ ಅವರು, ಈ ಚಿತ್ರಗಳನ್ನು ತಮ್ಮದೆಂದು ಸ್ವೀಕರಿಸುವ ಮನಸ್ಥಿತಿ ಪ್ರತೀ ಪ್ರೇಕ್ಷಕನಿಗೆ ಬೇಕು ಎಂದರು.
ಬದಲಾವಣೆ ಜಗದ ನಿಯಮ. ಹೀಗಾಗಿ ಒಂದು ಪರದೆಯ ಚಿತ್ರಮಂದಿರಗಳ ಸ್ಥಾನದಲ್ಲಿ ಈಗ ಮಲ್ಟಿಪ್ಲೆಕ್ಸ್ಗಳು ಬಂದಿವೆ. ಈ ಬದಲಾವಣೆಗೆ ಪ್ರೇಕ್ಷಕ ಒಗ್ಗಿಕೊಳ್ಳಬೇಕು ಎಂದ ಅವರು, ಸಿನಿಮಾವನ್ನು ಸಿನಿಮಾ ಮಂದಿರಗಳಲ್ಲಿಯೇ ನೋಡುವ ಮಾನಸಿಕತೆ ಮುಖ್ಯ ಎಂದರು.
ಕಾರ್ಯಾಗಾರದಲ್ಲಿ ಚಲನಚಿತ್ರದ ಛಾಯಾಗ್ರಹಣ ಒಂದು ಅನುಸಂಧಾನ ಕುರಿತು ಪ್ರಸಿದ್ಧ ಚಲನಚಿತ್ರ ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ, ಚಲನಚಿತ್ರ ಛಾಯಾಗ್ರಹಣ ಪರಂಪರೆ ಕುರಿತು ಗುರುಪ್ರಸಾದ ಕಾಶಿಯವರು ಮಾಹಿತಿ ಮಾರ್ಗದರ್ಶನ ನೀಡಿದರು.
ಕಾರ್ಯಾಗಾರವನ್ನು ಶಾಸಕ ಎಸ್. ಎನ್. ಚನ್ನಬಸಪ್ಪ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಡಿ. ಸತ್ಯಪ್ರಕಾಶ್, ಶ್ರೀಶ ಕೂದುವಳ್ಳಿ, ಗುರುಪ್ರಸಾದ ಕಾಶಿ ಹಾಗೂ ನಗರದ ಛಾಯಾಗ್ರಾಹಕರಾದ ಶಿವಮೊಗ್ಗ ನಾಗರಾಜ್, ಪ್ರದೀಪ್ ಕುಮಾರ್, ವಾಸುಕಿ ಕುಮಾರ್‌ರವರನ್ನು ಸನ್ಮಾನಿಸಲಾಯಿತು.
ಡಾ. ಹೆಚ್. ಎಸ್. ನಾಗಭೂಷಣರವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಹೆಚ್. ಯು. ವೈದ್ಯನಾಥ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Press Distributors ಪತ್ರಿಕಾ ವಿತರಕರಿಗೆ ಸಂಕಷ್ಟದ ಸಮಯದಲ್ಲಿ ಸರ್ಕಾರದ ಸಹಕಾರ ಅಗತ್ಯ- ಜಿ.ಕೆ.ಹೆಬ್ಬಾರ್

Press Distributors ಶಿಕಾರಿಪುರ ನಿನ್ನೆ ಮಧ್ಯಾಹ್ನ ಹಠ ತ್ ಲಘು ಹೃದಯಘಾತವಾಗಿ...

SN Channabasappa ವಿದ್ಯಾರ್ಥಿಗಳು ಓದಿನ ಜೊತೆ ದೇಶದ ರಾಜಕೀಯ ವ್ಯವಸ್ಥೆಯ ಅರಿವನ್ನು ಹೊಂದಿರಬೇಕು- ಶಾಸಕ ‘ಚೆನ್ನಿ’

SN Channabasappa ಶಿವಮೊಗ್ಗ, ಅಕ್ಟೋಬರ್‌05 ಇಂದಿನ ಯುವ ಜನತೆ ಕೈಯಲ್ಲಿ ದೇಶದ...