Monday, May 4, 2026
Monday, May 4, 2026

Shivamogga Institute of Medical Sciences ವಾಕ್ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಕುಸಿದು ಸಾವು

Date:

Shivamogga Institute of Medical Sciences ಶರಾವತಿ ನಗರದ ನಿವಾಸಿ, ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿ ಪೃಥ್ವಿರಾಜ್ (20) ಬುಧವಾರ ನಿಧನ ಹೊಂದಿದರು.

ಪ್ರವಾಸಿ ಮಂದಿರದ ಬಳಿ ಸಂಜೆ ವೇಳೆ ವಾಕ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದು, ಗಮನಿಸಿದ ಮೋಹನ್ ಎಂಬುವವರು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲಿ ಪೃಥ್ವಿರಾಜ್ ನಿಧನರಾಗಿದ್ದಾರೆ.

ಪೃಥ್ವಿರಾಜ್ ಸಿಮ್ಸ್ ಕಾಲೇಜಿನಲ್ಲಿ ಎರಡನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಪ್ರತಿ ದಿನ ಪ್ರವಾಸಿ ಮಂದಿರದ ಬಳಿ ವಾಕ್ ಮಾಡುತ್ತಿದ್ದರು. ಇವರು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸದಸ್ಯ, ಕಾಮಧೇನು ಔಷಧ ಸಗಟು ವ್ಯಾಪಾರಿ ಮುತ್ತಣ್ಣ ಅವರ ಪುತ್ರ. ಪೃಥ್ವಿ ಅವರ ಸಹೋದರ ಪಾರ್ಥ ದೆಹಲಿಯಲ್ಲಿದ್ದಾರೆ.

ಪೃಥ್ವಿರಾಜ್ ಅವರ ನಿಧನಕ್ಕೆ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸಂತಾಪ ಸೂಚಿಸಿದೆ. ಮೃತರ ತಂದೆ ಮುತ್ತಣ್ಣ ಅವರು ಔಷಧಿ ವ್ಯಾಪಾರಿಗಳ ಸಂಘದ ಸದಸ್ಯ, ರೋಟರಿ ಸೆಂಟ್ರಲ್ ಕ್ಲಬ್ ಸದಸ್ಯರಾಗಿ ಹಲವಾರು ಸಂಘಟನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ನ್ಯಾಮತಿಯವರಾಗಿದ್ದು, ಶಿವಮೊಗ್ಗದ ಶರಾವತಿ ನಗರದ ಎಂಟನೇ ಕ್ರಾಸ್‌ನಲ್ಲಿ ವಾಸ ಮಾಡುತ್ತಿದ್ದಾರೆ.

Shivamogga Institute of Medical Sciences ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣ್ ಕುಮಾರ್, ಕಾರ್ಯದರ್ಶಿ ಈಶ್ವರ್, ರೋಟರಿ ವಲಯ 11ರ ಸಹಾಯಕ ಗವರ್ನರ್ ಸುರೇಶ್, ರೋಟರಿ ವಿಜಯಕುಮಾರ್, ಜಿಲ್ಲಾ ಗವರ್ನರ್ ದೇವಾನಂದ್, ಪ್ರಕಾಶ್, ರವಿ ಕೋಟೋಜಿ, ಚುಡಾಮಣಿ ಪವಾರ್, ಬಸವರಾಜ್, ಜಯಶೀಲ ಶೆಟ್ಟಿ, ಸಂತೋಷ್, ಗಣೇಶ್ ಎಂ.ಅಂಗಡಿ, ರಮೇಶ್, ಗೀತಾ ಜಗದೀಶ್ ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸದಸ್ಯರು ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...