Monday, February 2, 2026
Monday, February 2, 2026

Consumer Disputes Redressal Commission ವಾಹನ ವಿಮೆ ಪರಿಹಾರ ಗ್ರಾಹಕರಿಗೆ ನೀಡಲು ಆಯೋಗದ ಆದೇಶ

Date:

Consumer Disputes Redressal Commission ವಿಠಲ ಶೆಟ್ಟಿ ಎಂಬುವವರು ಪ್ರಾಂಕ್ಲಿನ್ ಇ.ವಿ.ಎಸ್.ವಿ ಎಲೆಕ್ಟ್ರಿಕ್ ವೆಹಿಕಲ್, ಹೈದರಾಬಾದ್ ಮತ್ತು ಜಿ.ಆರ್.ಪಿ. ಎಲೆಕ್ಟ್ರಿಕ್ ಎಂಟರ್‌ಪ್ರೈಸಸ್ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ಪರಿಹಾರ ಒದಗಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಅರ್ಜಿದಾರ ವಿಠಲ ಶೆಟ್ಟಿಯವರು ಜಿ.ಆರ್.ಪಿ ಎಲೆಕ್ಟ್ರಿಕ್ ಎಂಟರ್‌ಪ್ರೈಸಸ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಖರೀದಿಸಿದ್ದು, ಕೆಲವೇ ದಿನಗಳಲ್ಲಿ ಸ್ಕೂಟರ್ ಬ್ಯಾಟರಿ ಸರಿಯಾಗಿ ಕಾರ್ಯನಿರ್ವಸುತ್ತಿಲ್ಲವೆಂದು ತಿಳಿಸಿದಾಗ, ಎದುರುದಾರರು ಬ್ಯಾಟರಿಯನ್ನು ಕೊಂಡ್ಯೋದು ರಿಪೇರಿ ಮಾಡಿ ಅಳವಡಿಸಿದ್ದಾಗಿ ತಿಳಿಸಿ ವಾಪಾಸ್ಸು ತಂದರೂ ಮತ್ತೆ ಅದೇ ಸಮಸ್ಯೆ ಉಂಟಾಗಿರುತ್ತೆದೆ. ಆದ್ದರಿಂದ ಹೊಸ ಬ್ಯಾಟರಿ ಅಳವಡಿಸಿ ವಾಹನ ಚಾಲು ಮಾಡಿಕೊಡಲು ಹಲವಾರು ಬಾರಿ ವಿನಂತಿಸಿದ್ದಾರೆ. ಆದರೆ ಕಂಪನಿಯವರು ಬದಲಿ ಹೊಸ ಬ್ಯಾಟರಿ ಅಳವಡಿಸಿಕೊಡಲು ನಿರಾಕರಿಸಿದ್ದಾರೆ.
Consumer Disputes Redressal Commission ಆಯೋಗವು ಎದುರುದಾರರಿಗೆ ನೋಟಿಸ್ ನೀಡಿದ್ದು ೧ ಮತ್ತು ೨ ನೇ ಎದುರುದಾರರು ನೋಟಿಸ್ ಪಡೆಯಲು ತಿರಸ್ಕರಿಸಿದ್ದು ಆಯೋಗದ ಮುಂದೆ ಹಾಜರಾಗಿರುವುದಿಲ್ಲ ಕಾರಣ ೧ ಮತ್ತು ೨ ನೇ ಎದುರುದಾರರನ್ನು ಏಕ ಪಕ್ಷೀಯವೆಂದು ತೀರ್ಮಾನಿಸಲಾಗಿರುತ್ತದೆ.
ಆಯೋಗವು ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ, ಅರ್ಜಿದಾರರ ಸಾಕ್ಷ್ಯ ವಿಚಾರಣೆಯ ವಿವರ ಮತ್ತು ಹಾಜರುಪಡಿಸಲಾದ ದಾಖಲೆಗಳ ಆಧಾರದ ಮೇಲೆ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ. ಎದುರುದಾರು ಅರ್ಜಿದಾರರಿಗೆ 45 ದಿನಗಳೊಳಗಾಗಿ ದೂರುದಾರರ ಸ್ಕೂಟರ್‌ಗೆ ಹೊಸ ಬ್ಯಾಟರಿಯನ್ನು ಅಳವಡಿಸಿಕೊಡಬೇಕಾಗಿ ತಪ್ಪಿದಲ್ಲಿ ದಿನಕ್ಕೆ ೧೫೦ ರೂ. ನಂತೆ ಓಡಾಟದ ಖರ್ಚಾಗಿ ಹೊಸ ಬ್ಯಾಟರಿಯನ್ನು ಅಳವಡಿಸಿ ಸ್ಕೂಟರ್‌ನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿಕೊಡುವವರೆಗೂ ನೀಡಬೇಕೆಂದು ಹಾಗೂ ರೂ.೧೫೦೦೦ ಗಳನ್ನು ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರವಾಗಿ ಪಾವತಿಸಬೇಕೆಂದು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ರೂ. ೧೦,೦೦೦/-ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಆದೇಶಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...