B.Y. Raghavendra ಶ್ರೀ ಬಿ.ವೈ. ರಾಘವೇಂದ್ರರವರಿಂದ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳ ಅನುಷ್ಠಾನಗೊಳಿಸುವ ಕುರಿತು ಆಗಿರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರರವರು ಕೇಂದ್ರ ಭೂ ಸಾರಿಗೆ ಮಂತ್ರಾಲಯದಿಂದ ಶಿವಮೊಗ್ಗ ಜಿಲ್ಲೆಗೆ ಮಂಜೂರಾದ ವಿವಿಧ ೧೩ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನದಲ್ಲಾಗುತ್ತಿರುವ ವಿಳಂಬ, ಭೂ ಸ್ವಾದೀನ ಮತ್ತು ಅರಣ್ಯ ಭೂಮಿ ಬಿಡುಗಡೆಯ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಂಬಂದಪಟ್ಟ ಅಧಿಕಾರಿಗಳ ಸಭೆ ನಡೆಸಲಾಗಿದ್ದು ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಭೂಸ್ವಾದೀನದಲ್ಲಾಗುತ್ತಿರುವ ಸಮಸ್ಯೆಗಳ ಹಾಗೂ ಅರಣ್ಯ ಭೂಮಿ ಬಿಡುಗಡೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದ್ದು ಮಾನ್ಯ ಸಂಸದರು ಶೀಘ್ರ ಭೂಸ್ವಾದೀನ ಪ್ರಕ್ರಿಯೆ ಪೂರ್ಣಗೊಳಿಸಲು ಹಾಗೂ ಅರಣ್ಯ ಬಿಡುಗಡೆ ಪ್ರಕ್ರಿಯೆಯನ್ನು ಸಹ ಶೀಘ್ರ ಪೂರ್ಣ ಗೊಳಿಸಲು ಸೂಚಿಸಿರುವ ಮೇರೆಗೆ ಅಧಿಕಾರಿಗಳು ಕಾಮಗಾರಿಗಳ ಭೂ ಸ್ವಾದೀನ ಪ್ರಕ್ರಿಯೆ ಹಾಗೂ ಅರಣ್ಯ ಬಿಡುಗಡೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಸಭೆಗೆ ಭರವಸೆ ನೀಡಿದರು.
ಕಾಮಗಾರಿಗಳಿಗೆ ಸಂಬಂಧಿಸಿದ ಅರಣ್ಯ ಬಿಡುಗಡೆಗೆ ಅಗತ್ಯವಿರುವ ಸಿ.ಎ ಭೂಮಿ ಬಿಡುಗಡೆಯ ಬಗ್ಗೆ ಎನ್.ಓ.ಸಿ ಪತ್ರವನ್ನು 07 ದಿನದೊಳಗೆ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
B.Y. Raghavendra ಕಾಮಗಾರಿಗೆ ಅಗತ್ಯವಿರುವ ಹೈ ಟೆನ್‌ಷನ್ ಟವರ್ ಮತ್ತು ವಿದ್ಯುತ್ ಕಂಬಗಳನ್ನು 15 ದಿನದೊಳಗೆ ಸ್ಥಳಾಂತರಿಸಲು ಅಗತ್ಯ ಕ್ರಮ ವಹಿಸಲು ಸಭೆಯಲ್ಲಿದ್ದ ಹಾಜರಿದ್ದ ಕೆ.ಪಿ.ಟಿ.ಸಿ.ಎಲ್ ಕಾರ್ಯಪಾಲಕ ಇಂಜಿನಿಯರ್‌ರವರಿಗೆ ಸೂಚಿಸಲಾಯಿತು.
ಸಭೆಯಲ್ಲಿ ಹಾಜರಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮ್ಯಾನೇಜರ್ ಮತ್ತು ಇಂಜಿನಿಯರ್ ರವರಿಗೆ ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಕೈಬಿಡಲಾಗಿದ್ದ 5.38 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಸೂಕ್ತ ಪಥ ನಕ್ಷೆಯನ್ನು 15 ದಿನದೊಳಗೆ ತಯಾರಿಸಿ ಮಂಜೂರಾತಿ ಪಡೆದು ಕಾಮಗಾರಿ ಪ್ರಾರಂಭಿಸಲು ಕ್ರಮವಹಿಸಲು ಹಾಗು ಶಿವಮೊಗ್ಗ ವಿಶೇಷ ಭೂಸ್ವಾದೀನಾಧಿಕಾರಿಗಳು ಸಲ್ಲಿಸಿರುವ 20 ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸೂಚಿಸಲಾಯಿತು.
ಶಿವಮೊಗ್ಗ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಬಾಕಿ ಇರುವ 15 ಪ್ರಕರಣಗಳನ್ನು 15 ದಿನದೊಳಗೆ ಪೂರ್ಣಗೊಳಿಸಲು ಸಹ ಸೂಚಿಸಲಾಯಿತು. ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರವರಿಗೆ ಚಿತ್ರದುರ್ಗ – ಶಿವಮೊಗ್ಗ ರಸ್ತೆಯ ಬಾಕಿ ಉಳಿದ ರಸ್ತೆ ಹಾಗು ರೈಲ್ವೇ ಮೇಲ್ಸೇತುವೆ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಲು ಸೂಚಿಸಲಾಯಿತು .
ಸಭೆಯಲ್ಲಿ ಮಾನ್ಯ ಸಂಸದರೊಂದಿಗೆ ಜಿಲ್ಲಾಧಿಕಾರಿಗಳಾದ ಶ್ರೀ ಗುರುದತ್ತ ಹೆಗ್ಗಡೆ, ಪೋಲೀಸ್ ಅದೀಕ್ಷಕರಾದ ಶ್ರೀ ಮಿಥುನ್‌ಕುಮಾರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳದ ಶ್ರೀ ಹನುಮಂತಪ್ಪ, ಸಾಗರ ಮತ್ತು ಶಿವಮೊಗ್ಗ ಉಪ ವಿಭಾಗಾಧಿಕಾರಿಗಳು, ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪೀರ್‌ಪಾಷ ಕೆ.ಪಿ.ಟಿ.ಸಿ.ಎಲ್ ಕಾರ್ಯಪಾಲಕ ಇಂಜಿನಿಯರ್ ಹಾಗೂ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಮೇಲ್ಕಂಡ ಸಭೆಯಲ್ಲಿ ಹಾಜರಿದ್ದರು .