Friday, September 27, 2024
Friday, September 27, 2024

Sahana Chethan Sahachetana ಆಗಸ್ಟ್ 30 ರಿಂದ ಸಹಚೇತನ ನಾಟ್ಯಾಲಯದಿಂದ 13 ನೇ ನಾಟ್ಯಾರಾಧನ

Date:

Sahana Chethan Sahachetana ಭಾರತದ ವೈವಿಧ್ಯಮಯ ನೃತ್ಯ ಶೈಲಿಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶವನ್ನು ಸಹಚೇತನ ನಾಟ್ಯಾಲಯ ನಗರದ ನಾಗರಿಕೆ ಒದಗಿಸಿದೆ.

ನಾಟ್ಯಾರಾಧನವನ್ನು 13 ನೇ ವರ್ಷ ಏರ್ಪಡಿಸಿದೆ. ಆ.30,32 ಹಾಗೂ ಸೆಪ್ಟೆಂಬರ್ 01 ರಂದು ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಪ್ರತೀ ದಿನ ಸಂಜೆ 6 ರಿಂದ ಜರುಗಲಿದೆ ಎಂದು ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್ ತಿಳಿಸಿದರು.

ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಆಗಸ್ಟ್ 30 ರ ಶುಕ್ರವಾರ ನಾಟ್ಯಾಲಯದ ಎಲ್ಲಾ 175 ಮಕ್ಕಳು ರುದ್ರಾಭಿಸಾರ – ನಟರಾಜನವಿಶೇಷ ಕೀರ್ತನೆಗಳ ಸರಮಾಲೆಯನ್ನು ಪ್ರಸ್ತುತಪಡಿಸಲಿದ್ದಾರೆ. ಮೂರು ವರ್ಷದಿಂದ ನಲವತ್ತು ವಯಸ್ಸಿನ ವಿದ್ಯಾರ್ಥಿಗಳು ಇದರಲ್ಲಿ ಭಗವಹಿಸುವರು ಎಂದರು.

Sahana Chethan Sahachetana ಆಗಸ್ಟ್ 31ರ ಶನಿವಾರ ನೃತ್ಯಗುರು ಸಹನಾ ಚೇತನ್ ಲಲಿತಾರ್ಣವ – ಆದಿಶಂಕರಾಚಾರ್ಯರು ರಚಿಸಿರುವ ಲಲಿತಾ ಪಂಚಕಮ್ ಜೊತೆಗೆ ಕಾಮಾಕ್ಷಿ ಸುಪ್ರಭಾತಮ್ ಹಾಗೂ ದೇವಿ ಲಲಿತೆಯ ಕೀರ್ತನೆಗಳನ್ನು ತಮ್ಮ ಏಕವ್ಯಕ್ತಿ ನೃತ್ಯರೂಪಕದಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ತದನಂತರ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳು ಹರಿದಾಸಕೂಟ ನೃತ್ಯರೂಪಕವನ್ನು ಪ್ರಸ್ತುತಪಡಿಸುವರು ಎಂದರು.
ಸೆಪ್ಟೆಂಬರ್ 1 ರ ಭಾನುವಾರ ಅಂತರಾಷ್ಟ್ರೀಯ ಖ್ಯಾತನಾಮರಾದ 2 ತಂಡಗಳು ಶಿವಮೊಗ್ಗೆಗೆ ಆಗಮಿಸಲಿವೆ.

ದೇಶವಿದೇಶಗಳಲ್ಲಿ, ಯೂಟ್ಯೂಬ್‌ನಲ್ಲಿ ಹೆಚ್ಚಿನ ವೀಕ್ಷಣೆ ಹಾಗೂ ಹಿಂಬಾಲಕರನ್ನು ಹೊಂದಿರುವ ಚೆನ್ನೈನ ಶ್ರೀದೇವಿ ನೃತ್ಯಾಲಯ ಭರತನಾಟ್ಯವನ್ನು ವಿಭಿನ್ನ ರೀತಿಯಲ್ಲಿ ನರ್ತಿಸಲಿದ್ದಾರೆ. ಮತ್ತೊಂದು ತಂಡವೆಂದರೆ, ಮಹಾರಾಷ್ಟ್ರದ ಪುರಸ್ಕಾರ್ ಡಾನ್ಸ್ ಅಕಾಡೆಮಿ ಲಾವಣಿ, ಕೋಳಿ ನೃತ್ಯ, ಗೋಂಡಾಲ್, ಗಾವಾಲನ್ ಇತ್ಯಾದಿ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Hassan Manikya Prakashana ಶಿವಮೊಗ್ಗದ ಕವಿ ಶಿ.ಜು.ಪಾಶಾ ಅವರಿಗೆ “ಜನ್ನ ಕಾವ್ಯ ಪ್ರಶಸ್ತಿ”

Hassan Manikya Prakashana ಹಾಸನದ ಮಾಣಿಕ್ಯ ಪ್ರಕಾಶನ(ರಿ) ರಾಜ್ಯಮಟ್ಟದ ಜನ್ನ ಕಾವ್ಯ...

Vajreshwari Co Operative Society ಶ್ರೀವಜ್ರೇಶ್ವರಿ ಸಹಕಾರ ಸಂಘದಿಂದ ಪ್ರತಿಭಾ ಪುರಸ್ಕಾರ

Vajreshwari Co Operative Society ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಶ್ರೀ...

Inner Wheel Shivamogga ದುರ್ಬಲರಿಗೆ ನೆರವು ನೀಡಿದಾಗ ಸೇವೆ ಸಾರ್ಥಕ- ಶಿಲ್ಪ ಗೋಪಿನಾಥ್

Inner Wheel Shivamogga ನಾವು ಮಾಡುವ ಸೇವೆ ಸಾರ್ಥಕಗೊಳ್ಳಬೇಕಾದರೆ...

National Education Committee ಬೆಳಗುತ್ತಿ & ಮಲ್ಲಿಗೇನಹಳ್ಳಿಯಲ್ಲಿ ಗಮನ ಸೆಳೆದ ಎನ್.ಎಸ್.ಎಸ್. ವಾರ್ಷಿಕ ಶಿಬಿರ

National Education Committee ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿರಂಗಪ್ರಯೋಗದ...