Thursday, November 21, 2024
Thursday, November 21, 2024

Klive Special Article “ಕಾಡುವ ಹುಡುಗನ ಹಾಡು”ಪ್ರೇಮಿಯ ಪ್ರಾಮಾಣಿಕ ಕನವರಿಕೆಗಳು- ಸಂತೋಷ್ ಕುಮಾರ್”

Date:

Klive Special Article ಪುಸ್ತಕ ಪರಿಚಯ: ಕಾಡುವ ಹುಡುಗನ ಹಾಡು

“ಇದು ನಿಚ್ಚಂ ಪೊಸತು ಅರ್ಣವಂಬೋಲ್ ಅತಿಗಂಭೀರಂ ಕವಿತ್ವಂ” ಎಂಬುದು ಮಹಾಕವಿ ಪಂಪನ ಕಾವ್ಯೋಕ್ತಿ. ಪಂಪನು ಕಾವ್ಯವನ್ನು ಕುರಿತು ಈ ಮಾತು ಹೇಳಿದ್ದಾದರೂ,ವಿಶೇಷವಾಗಿ “ಪ್ರೇಮಕಾವ್ಯ”ಕ್ಕೇ ಈ ಮಾತನ್ನು ಅನ್ವಯಿಸಿದಾಗ ಆ ಮಾತಿನ ಸಾರ್ಥಕತೆ ಹೆಚ್ಚು ಎಂದು ನನಗನ್ನಿಸುತ್ತದೆ. ಏಕೆಂದರೆ ಪ್ರೇಮವೂ ಕೂಡ ಸಮುದ್ರದಂತೆ ಅತೀ ಗಂಭೀರವೂ,ನಿತ್ಯ ಹೊಸತನದಿಂದ ಕೂಡಿರುವುದು ಆಗಿದೆ.ಪ್ರೇಮಸಾಗರ, ಪ್ರೇಮಸಮುದ್ರ ಎಂದು ಮುಂತಾಗಿ ನಾವು ಆಗಾಗ ಬಳಸುತ್ತಲೇ ಇರುತ್ತೇವೆ.ಇಂತಹ ಸಮುದ್ರದಂತಹ ಪ್ರೇಮವನ್ನು, ಅವ್ಯಕ್ತವಾಗಿಯೂ, ಅಮೂರ್ತವಾಗಿಯೂ ಇರುವಂತಹ ಪ್ರೇಮವನ್ನು,ಇದನ್ನು ಹೀಗೆ ವ್ಯಕ್ತಪಡಿಸಬೇಕು ಎಂದು ಯಾರೂ ತಿಳಿಸಲಾರದಂತಹ, ಹೇಳಿಕೊಡಲಾಗದಂತಹ ಪ್ರೇಮವನ್ನು,ಅಕ್ಷರಗಳಲ್ಲಿ ಪದಪುಂಜಗಳಲ್ಲಿ ಕಟ್ಟಿಕೊಡುವುದು ಅತೀ ಕಷ್ಟದ ಕೆಲಸವೇ ಸರಿ. ಜೊತೆಗೆ ಪ್ರೇಮವನ್ನು ಕುರಿತೇ ಅಸಂಖ್ಯ ಕತೆ, ಕಾದಂಬರಿ,ಭಾವಗೀತೆಗಳು, ನಾಟಕಗಳು ಈಗಾಗಲೇ ನಮ್ಮ ಮುಂದಿರುವಾಗ ಅದೇ ವಿಷಯವನ್ನು ಕುರಿತು ಹೊಸದನ್ನು ಹೇಳುವುದು ಹೇಗೆ ಎಂಬುದು ಮತ್ತೊಂದು ಸವಾಲಿನ ಕೆಲಸ. ಏಕೆಂದರೆ ನಾನು ಮೊದಲೇ ಹೇಳಿದಂತೆ ಸಮುದ್ರದಂತೆ ನಿತ್ಯವೂ ಹೊಸತನದಿಂದ ಕೂಡಿರುವ ಪ್ರೇಮವನ್ನು ಹೊಸತಾಗಿ ಕಂಡರಿಸುವ ಈ ಸೃಜನಶೀಲ ಪ್ರಕ್ರಿಯೆಯೇ ಕ್ಲಿಷ್ಟಕರವಾದ್ದು. ಈ ಹಿನ್ನೆಲೆ ಇಟ್ಟುಕೊಂಡು ಕು.ಅಂಜುಮ್ ಅವರ ಹನಿಗವನಗಳನ್ನು ಅವಲೋಕಿಸಿದಾಗ ನನಗನ್ನಿಸಿದ ಮೊದಲ ಸಂಗತಿ,ಅವರು ತಾವೇನೋ ಹೊಸದನ್ನು ಹೇಳುವ ಭ್ರಮೆಗೆ ಬೀಳದೆ ಅಥವಾ ಇದುವರೆಗೂ ಯಾರೂ ಕಂಡರಿಸದ ಪ್ರೇಮದ ಭಿನ್ನ ಮುಖಗಳನ್ನು ಪರಿಚಯಿಸುತ್ತಿದ್ದೇನೆಂಬ ಹಠಕ್ಕೆ ಬೀಳದೆ, ತಮಗೆ ಅನ್ನಿಸಿದ ಮನೋಸಹಜ ಭಾವನೆಗಳನ್ನು ತಮ್ಮ ಓದಿನ ಅಥವಾ ಅನುಭವದ ವ್ಯಾಪ್ತಿಯಲ್ಲಿ ಎರಕಹೊಯ್ದು ನಮ್ಮ ಮುಂದೆ ಇಟ್ಟಿದ್ದಾರೆ.ಇಲ್ಲಿರುವ ಪದ್ಯಗಳು ಒಮ್ಮೊಮ್ಮೆ ಭಾವಗೀತೆಗಳಂತೆ,ಒಮ್ಮೊಮ್ಮೆ ಗಜಲ್ ಗಳಂತೆ,ಮತ್ತೊಮ್ಮೆ ಹನಿಗವಿತೆಯಂತೆ ಮನಸ್ಸಿಗೆ ಭಾಸವಾಗಿ ಕಡೆಗೆ ಕಾವ್ಯದ ಯಾವ ಬಂಧವೋ ಅನ್ನುವ ವಿಷಯವನ್ನೇ ಮರೆಸುವಷ್ಟು ಅವುಗಳಲ್ಲಿನ “ಪ್ರೇಮ ಭಾವ” ನಮ್ಮನ್ನು ಆವರಿಸುತ್ತದೆ.

Klive Special Article ತನ್ಮೂಲಕ ಅಂಜುಮ್ ಅವರ ಈ ಮನದ ಮಾತುಗಳು ನಮ್ಮ ಮನ ಸೆಳೆಯುವಲ್ಲಿ ಸಾರ್ಥಕವಾಗಿವೆ ಎನ್ನಬಹುದು.
ಉದಾಹರಣೆಗೆ ಗಮನಿಸುವುದಾದರೆ,”ಕೆಲವೊಮ್ಮೆ ಅರ್ಥವಾಗದೆ ಹೋದರೂ ಮನಸ್ಸಿಗೆ ಇಷ್ಟವಾಗುವ ಸಂಗೀತದಂತೆ ನೀನು” ಎಂಬಂತಹ ಸಾಲು..ಇಲ್ಲಿ ಪ್ರೇಮದ ಅಮೂರ್ತತೆಯನ್ನು ಸರಳವಾಗಿ ಹೇಳುವ ಪ್ರಯತ್ನ ಕಾಣಬಹುದು..”ನೀ ಜೊತೆಗಿದ್ದರೆ ಮಳೆ ಇನ್ನೇನೋ,ನೀ ಇಲ್ಲದಿದ್ದರೆ ಮಳೆ ಕೇವಲ ನೀರಷ್ಟೆ”…”ನೀ ಜೊತೆಗಿದ್ದರೆ ಆಟೋನೂ ಮರ್ಸಿಡಿಸ್ ಅನಿಸುವಷ್ಟು” ಎಂಬಂತಹ ಮಾತುಗಳಲ್ಲಿ ಹೊಸತನವನ್ನು ಕಾಣಬಹುದು..
ಒಟ್ಟಾರೆಯಾಗಿ ಅಂಜುಮ್ ಅವರ “ಕಾಡುವ ಹುಡುಗನ ಹಾಡು” ನಮ್ಮನ್ನು ಕಾಡುವಂತಹ,ಹೆಣ್ಣೊಬ್ಬಳು ತನ್ನ ಪ್ರಿಯತಮನ ನೆನಹಿನಲ್ಲಿ, ಹೃತ್ಪೂರ್ವಕವಾಗಿ,ಪ್ರಾಮಾಣಿಕವಾಗಿ ಕನವರಿಸಿದಂತಹ ಭಾವನೆಗಳ ಹೂಗೊಂಚಲು ಎನ್ನಬಹುದು..ನಿಮ್ಮಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಾ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶುಭವಾಗಲಿ ಎಂದು ಹಾರೈಸುತ್ತೇನೆ.

ಈ ಪುಸ್ತಕವು ಶಿವಮೊಗ್ಗದ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ಲಭ್ಯವಿದ್ದು, ಪುಸ್ತಕ ಪ್ರಿಯರು ಕೊಂಡು ಓದಿ.

ಪುಸ್ತಕ: ಕಾಡುವ ಹುಡುಗನ ಹಾಡು
ಲೇಖಕರು: ಅಂಜುಮ್.ಬಿ.ಎಸ್.
ಮುಖಬೆಲೆ:110 ರೂ.
ಪುಟ: 106

ಬರಹ:

ಸಂತೋಷ್ ಕುಮಾರ್ ಎಸ್.ಜಿ.
ಮುಖ್ಯಸ್ಥರು,ಕನ್ನಡ ವಿಭಾಗ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು.ಶಿವಮೊಗ್ಗ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...