Guarantee scheme ಶಿವಮೊಗ್ಗ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಛೇರಿಯ ಉದ್ಘಾಟನೆಯನ್ನು ತಾಲ್ಲೂಕು ಕಚೇರಿ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಭಾನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಬಡವರಿಗೆ ಮತ್ತು ಎಲ್ಲಾ ವರ್ಗದ ಜನರಿಗೆ ಕಲ್ಪಿಸಲು ಬದ್ಧವಾಗಿದೆ. ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಬಗ್ಗೆ ಮೇಲ್ವೀಚಾರಣೆಗಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವನ್ನು ಸರ್ಕಾರ ರಚನೆ ಮಾಡಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕಚೇರಿಯನ್ನು ಕೂಡ ತೆರೆಯಲಾಗಿದೆ. ಶಿವಮೊಗ್ಗ ತಾಲ್ಲೂಕಿನ ಕಛೇರಿಯನ್ನು ಇಂದು ಉದ್ಘಾಟಿಸಿದ್ದು, ಗ್ಯಾರಂಟಿ ಯೋಜನೆಯ ಯಾವುದೇ ಗೊಂದಲವಿದ್ದರೂ ಇಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
Guarantee scheme ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಹೆಚ್.ಸಿ.ಯೋಗೀಶ್, ರವಿಕುಮಾರ್, ತಾಲ್ಲೂಕು ಅಧ್ಯಕ್ಷ ಮಧು ಹೆಚ್.ಎಂ., ಹಾಗೂ ಸದಸ್ಯರುಗಳಾದ ದೇವಿಕುಮಾರ್, ನಿಖಿಲ್‍ಮೂರ್ತಿ, ಕುಮರೇಶ್, ಮಹೇಶ್ವರಪ್ಪ, ಭಾರತಿ ನಾಗರಾಜ್, ಶೇಷಾದ್ರಿ, ಮಲ್ಲಿಕಾರ್ಜುನ್, ಮೋಹನ್ ಕೆ.ಎಸ್., ಎಲಿಜೆಬೆತ್ ಗ್ಲ್ಯಾಡಿಸ್, ಅಜೀಜ್ ಉಲ್ಲಾಖಾನ್, ವಾಗೀಶ್ ಬಿ.ಆರ್. ಜಗದೀಶ್ವರ್, ಬಸವರಾಜ್, ಇರ್ಫಾನ್, ಚಾಂದ್‍ಪಾಶ, ಸ್ಟೆಲ್ಲಾ ಮಾರ್ಟಿನ್, ಅರ್ಚನಾ,ಖಲೀಂ ಪಾಶಾ, ಬಸವರಾಜ್, ಜಗದೀಶ್ ಮತ್ತಿತರರಿದ್ದರು.
Guarantee scheme ಗ್ಯಾರಂಟಿ ಯೋಜನೆಗಳ ಬಗ್ಗೆ ಯಾವುದೇ ಗೊಂದಲಗಳಿದ್ದರೂ ಕಚೇರಿಯಲ್ಲಿ ಪರಿಹಾರ- ಶಾಸಕಿ ಬಲ್ಕೀಷ್ ಬಾನು
Date: