Sunday, December 7, 2025
Sunday, December 7, 2025

Adichunchanagiri Education Trust Shivamogga ಮಲೆನಾಡಿನ ಭಾಗದಲ್ಲಿ ಶ್ರೀಪ್ರಸನ್ನನಾಥಶ್ರೀಗಳು ಕ್ರೀಡಾಸ್ಫೂರ್ತಿ ತುಂಬುವ ಕಾರ್ಯಮಾಡುತ್ತಿದ್ದಾರೆ- ಸಂಸದ ರಾಘವೇಂದ್ರ

Date:

Adichunchanagiri Education Trust Shivamogga ಮಲೆನಾಡ ಭಾಗದಲ್ಲಿ ಕ್ರೀಡಾ ಸ್ಪೂರ್ತಿಯನ್ನು ತುಂಬಿದ ಶ್ರೀಗಳೆಂದರೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಎಂದರೆ ತಪ್ಪಾಗಲಿಕ್ಕಿಲ್ಲ, ಅವರು ಇಲ್ಲಿಯವರೆಗೆ ಓದಿನ ಜೊತೆ ಜೊತೆಗೆ ಕ್ರೀಡೆಗೂ ಅಷ್ಟೇ ಆದ್ಯತೆ ನೀಡಿ ರಾಜ್ಯ,ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವನ್ನು ರೂಪಿಸುವಂತಹ ಕೀರ್ತಿ ಹೊಂದಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ನೆಹರು ಕ್ರೀಡಾಂಗಣದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ,ಶಿವಮೊಗ್ಗ. ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಹೊನಲು ಬೆಳಕಿನ ವಾಲಿಬಾಲ್ ಚುಂಚಾದ್ರಿ ಕಪ್ ಪಂದ್ಯಾವಳಿಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ರೂಪಿಸಲು ಕ್ರೀಡೆ ಸಹಕಾರಿ, ಇಂತಹ ಕ್ರೀಡಾಸ್ಪೂರ್ತಿ ಚುಂಚಾದ್ರಿ ಕಪ್ ನಂತಹ ಕ್ರೀಡಾಕೂಟಗಳಲ್ಲಿ ಕ್ರೀಡಾ ಪ್ರತಿಭಾನ್ವಿತರನ್ನು ಹೊರಹೊಮ್ಮಿಸಲು ಸಾಧ್ಯ ಎಂದು ಹೇಳಿದರು.

ವಿದ್ಯೆಗಷ್ಟೇ ಸೀಮಿತವಾಗದೆ ಕ್ರೀಡೆ ಮುಖಾಂತರ ಯುವಶಕ್ತಿಯನ್ನು ಬೆಳೆಸುವಂತಹ ಒಂದು ಕಾರ್ಯ ಸುಮಾರಿ 22 ವರ್ಷಗಳಿಂದ ಚುಂಚಾದ್ರಿ ಕಪ್ ಮುಖಾಂತರ ಈ ಒಂದು ಪವಿತ್ರವಾದ ಕ್ರೀಡೆಗೆ ಆದ್ಯತೆಯನ್ನು ಕೊಡುವಂತಹ ಕಾರ್ಯ ಶ್ರೀಮಠದಿಂದ ಆಗುತ್ತ ಇರುವುದು ಹೆಮ್ಮೆಯ ಸಂಗತಿ.

ಶಿವಮೊಗ್ಗದಲ್ಲಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರೀಡೆಗೆ ಹೆಚ್ಚು ಒತ್ತು ನೀಡಿ,ಆದಿಚುಂನಗಿರಿ ಸಂಸ್ಥೆಯ ಕನಸಿನಂತೆ, ಸರ್ಕಾರವು ಕೆಲಸ ಮಾಡಿದೆ. ಅಂತಹ ಸಾಕಷ್ಟು ಯೋಜನೆಯ ಸದುಪಯೋಗ ಪಡೆಯುವಂತ ಅವಕಾಶ ಕ್ರೀಡಾಪಟುಗಳಿಗೆ ದೊರಕುತ್ತಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಆಶೀರ್ವಚನವನ್ನು ನೀಡುತ್ತಾ ಕ್ರೀಡಾಪಟುಗಳಲ್ಲಿ ಗೆದ್ದೇಗೆಲ್ಲುತ್ತೇವೆ ಎಂಬ ಸಂಕಲ್ಪ ಇರಬೇಕು. ಸತತ ಪ್ರಯತ್ನದಿಂದ ಜೀವನವನ್ನು ಹಾಗೂ ಕ್ರೀಡೆಯನ್ನು ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು.

ಜಿಲ್ಲೆಯಲ್ಲಿ ಇವತ್ತು ವಾಲಿಬಾಲ್ ಆಟ ರಾಜ ರಾಷ್ಟ್ರ ಮಟ್ಟದಲ್ಲಿ ಪ್ರಮುಖವಾಗಿ ಆಡುತ್ತಾ ಇದ್ದಾರೆ. ಒಲಂಪಿಕ್ಸ್ ನಲ್ಲಿ ಇವತ್ತು ಚಿನ್ನದ ಪದಕ ಮಾತ್ರ ಇಲ್ಲದೇ, ಬೆಳ್ಳಿ ಮತ್ತು ಕಂಚಿನ ಪದಕ್ಕೆ ಮಾತ್ರ ಸೀಮಿತವಾಗಿದ್ದೇವೆ.ಇಷ್ಟೊಂದು ಜನಸಂಖ್ಯೆ ಇರುವ ಭಾರತದಲ್ಲಿ 5 ಕಂಚು ಮತ್ತು ಒಂದು ಬೆಳ್ಳಿ ಬಂತು ಎಂದರೆ ಇದಕ್ಕೆ ಕಾರಣವನ್ನು ಹುಡುಕುವ ಕೆಲಸವಾಗಬೇಕಾಗಿದೆ. ಆಗಿದ್ದಾಗ ಮಾತ್ರ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು, ಯುವಕರು ಮುಂದಿನ ದಿನಗಳಲ್ಲಿ ಚಿನ್ನದ ಪದಕ ಪಡೆಯಲು ದಾಪುಗಾಲು ಹಾಕುತ್ತಾರೆ ಎಂಬುದಂತೂ ಸತ್ಯ, ಎಲ್ಲಾ ಕಡೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕಾಗಿದೆ,ಆಗಿದ್ದಾಗ ಮಾತ್ರ ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ವಾಗುತ್ತದೆ ಎಂದು ಕ್ರೀಡಾಪಟುಗಳಿಗೆ ತಿಳಿಸಿದರು.

ಮುಂದೆ ನೀವು ಸಹ ಆಟವನ್ನು ಆಡಿ ಒಲಂಪಿಕ್ನಲ್ಲಿ ದೇಶದ ಧ್ವಜ ಹಾರಿಸುವಂತರಾಗಿ ಎಂದು ಆಶೀರ್ವದಿಸಿದರು.

Adichunchanagiri Education Trust Shivamogga ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ಶ್ರೀ ಸಾಯಿನಾಥ ಸ್ವಾಮೀಜಿಯವರು, ಚಿತ್ರದುರ್ಗ ಮಾದರ ಚೆನ್ನಯ್ಯ ಗುರುಪೀಠದ ಪೂಜ್ಯ ಶ್ರೀ ಶ್ರೀ ಮಾದರ ಚೆನ್ನಯ್ಯ ಬಸವಮೂರ್ತಿ ಸ್ವಾಮೀಜಿಯವರು, ಶಿವಮೊಗ್ಗ ಕ್ಷೇತ್ರದ ಶಾಸಕರಾದ ಚನ್ನಬಸಪ್ಪ ಅವರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಅವರು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ , ಶಿವಮೊಗ್ಗ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ್ ಜಿ.ಕಾಮತ್, ಕಾರ್ಯದರ್ಶಿ ಶಶಿ ಕೆ. ಎಸ್., ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ನಿರ್ದೇಶಕರುಗಳು, ಆಡಳಿತಾಧಿಕಾರಿಗಳು, ಸಿಬ್ಬಂದಿ ವರ್ಗವದವರು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...