Linganamakki Reservoir ವ್ಯಾಪಕ ಮಳೆಯಿಂದಾಗಿ ಶಿವಮೊಗ್ಗದಲ್ಲಿ ಜಲಾಶಯಗಳು ಬಹುತೇಕ ಮುಕ್ಕಾಲು ಭಾಗ ಭರ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿ ಇವತ್ತು ಗಂಗಾ ಪೂಜೆಯ ನಿಮಿತ್ತ ನದಿಗೆ ಡ್ಯಾಂನಿಂದ ಗೇಟು ತೆಗೆದು ನೀರು ಹರಿಯಬಿಡಲಾಗಿದೆ.
ಪ್ರತಿವರ್ಷ ಶರಾವತಿ ಕಣಿವೆ ಪ್ರದೇಶದಲ್ಲಿರುವ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ 1800 ಅಡಿ ದಾಟಿದ ಬಳಿಕ ಗಂಗಾ ಪೂಜೆಯನ್ನ ಕೈಗೊಳ್ಳಲಾಗುತ್ತದೆ. ಅದೆ ರೀತಿಯಲ್ಲಿ ಈ ಸಲವೂ ಕೈಗೊಳ್ಳಲಾಗಿದೆ.
Linganamakki Reservoir ಪ್ರತೀತಿಯಂತೆ ಗಂಗಾಪೂಜೆ ಮುಗಿದ ಬಳಿಕ ಜಲಾಶಯದಿಂದ ಸ್ವಲ್ಪ ಪ್ರಮಾಣದ ನೀರನ್ನು ನದಿಗೆ ಹರಿಸಲಾಗಿದೆ.
ಗಂಗಾಪೂಜೆ ನಿಮಿತ್ತ ಕರ್ನಾಟಕ ವಿದ್ಯುತ್ ನಿಗಮ ಈಗಾಗಲೇ ಸುತ್ತೊಲೆ ಸಹ ಹೊರಡಿಸಿತ್ತು. ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯದ ನೀರಿನ ಮಟ್ಟವು 1802.70 ಅಡಿಗಳಷ್ಟು ತಲುಪಿದೆ.