Newspaper Distributors ಪತ್ರಿಕೋದ್ಯಮದ ಬೆಳವಣಿಗೆಗೆ ಸಂಪಾದಕರು ಮುದ್ರಕರು ಪ್ರತಿಯೊಂದು ಕೆಲಸ ಮಾಡುವವರು ಹೇಗೆ ಮುಖ್ಯವೋ. ಅದಕ್ಕಿಂತ ಮಿಗಿಲಾದವರು ಪತ್ರಿಕಾ ವಿತರಕರು.
ಒಂದು ಪತ್ರಿಕೆ ಬೆಳೆಯಲು ಅಭಿವೃದ್ಧಿ ಹೊಂದಲು ಸಮಾಜದಲ್ಲಿ ಹೆಸರು ಮಾಡಲು ಮನೆ ಮನೆ ತಲುಪಿಸಲು ಪತ್ರಿಕ ವಿತರಕರೇ ಪ್ರಮುಖವಾದವರು.
ಅಂತಹ ಪತ್ರಿಕಾ ವಿತರಕರನ್ನು ರಾಜ್ಯ ಪತ್ರಿಕೆಗಳ ಸಂಪಾದಕರು ನಿರ್ಲಕ್ಷ ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ರಾಧಾ ಎನ್, ಮಾಲತೇಶ್ ರವರು ಸ್ನೇಹಿತ ವರದಿಗಾರರೊಂದಿಗೆ ತಮ್ಮ ನೋವಿನ ಆಕ್ರೋಶವನ್ನು ವಿತರಕರು ಅನುಭವಿಸುತ್ತಿರುವ ನೋವಿನ ಜಂಜಾಟದ ಮಾಹಿತಿಯನ್ನ ನೀಡಿದರು.
ಆರ್ಥಿಕ ಭದ್ರತೆ. ಸಾಮಾಜಿಕ ಭದ್ರತೆ ಇಲ್ಲದೆ ಮಳೆ ಗಾಳಿ ಚಳಿ ಎನ್ನದೇ ವರ್ಷದ 361. ದಿನಗಳು ಓದುಗರನ್ನ ತೃಪ್ತಿಪಡಿಸಲು ಮನೆಮನೆಗೂ ಹೋಗಿ ಪತ್ರಿಕೆಗಳನ್ನು ವಿತರಿಸುತ್ತಿರುವುದು ಸತ್ಯದ ಸಂಗತಿ. ಸಂಪಾದಕರುಗಳು ಪತ್ರಿಕೆ ಮನೆ ಮಾತಾಗಿ ಪ್ರಜ್ವಲ್ ಸಲೂ ಈ ಪತ್ರಿಕ ವಿತರಕರೇ ಕಾರಣ ಎಂಬುದನ್ನ ರಾಜ್ಯ ಪತ್ರಿಕೆಯ ಸಂಪಾದಕರು ಮರೆತಂತಿದೆ .
ಕನಿಷ್ಠ ಓಡಾಡಲು ಸೈಕಲ್. ಮಳೆಗಾಲದಲ್ಲಿ ನೂರಾರು ಜ್ವರಗಳನ್ನ ಎದುರಿಸುವ ಸಂದರ್ಭ ಬಂದರು ಆಶ್ಚರ್ಯವಿಲ್ಲ ಅದಕ್ಕಾಗಿ ಪತ್ರಿಕಾ ವಿತರಿಕರಿಗೆ ಕನಿಷ್ಠ ರೈನ್ ಕೋಟ್ ವಿ ತರಿಸಬೇಕೆಂದು ತಮ್ಮ ಆಕ್ರೋಶದ ನುಡಿಗಳನ್ನು ಹೊರ ಹಾಕಿದರು.
Newspaper Distributors ಈ ಕೂಡಲೇ ಸಂಪಾದಕ ಮಂಡಳಿಯವರು ಪತ್ರಿಕ ವಿತರಕರ ನೋವುಗಳಿಗೆ ಸ್ಪಂದಿಸಿ ಈ ಕೂಡಲೇ ರೈನ್ ಕೋರ್ಟ್ ಅನ್ನು ವಿತರಿಸಲು ಮುಂದಾಗ ಬೇಕೆಂದು ಪತ್ರಿಕಾ ವಿತರಕರ ಒಕ್ಕೊರಲ ಧ್ವನಿಯಾಗಿ ಈ ಬೇಡಿಕೆಯನ್ನ ಮುಂದಿಟ್ಟಿದ್ದಾರೆ ಒಂದು ಪತ್ರಿಕೆಯ ಭವಿಷ್ಯ ಪತ್ರಿಕಾ ವಿತರಕರ ಸೇವೆಯ ಮೇಲೆ ಅವಲಂಬನೆಯಾಗಿದೆ ಸುದ್ದಿಗಳನ್ನು ಲೇಖನಗಳನ್ನು ಓದುಗರ ಮನೆಗೂ ತಲುಪಿಸಿ ವಿಷಯ ಹಂಚುವುದರ ಜೊತೆಗೆ ಪತ್ರಿಕೆಯು ಉನ್ನತ ಮಟ್ಟಕ್ಕೆ ಹೋಗಲು ಕಾರಣಿ ಭೂತರೆ ಈ ಪತ್ರಿಕಾ ವಿತರಕರು.
ಪತ್ರಿಕೆ ಹಂಚುವವರಿಲ್ಲದಿದ್ದರೆ ಪತ್ರಿಕಾ ರಂಗವೇ ಕ್ಷೀಣಿಸುತ್ತದೆ. ಅದರಲ್ಲೂ ಪೈಪೋಟಿಗಾಗಿ ದೃಶ್ಯ ಮಾಧ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಪತ್ರಿಕೆಯ ರಕ್ಷಣೆ ಆಗಬೇಕಾದರೆ ಸಂಪಾದಕರು ಪತ್ರಕರ್ತರು ಪತ್ರಿಕ ವಿತರಕರ ಒಂದುಗೂಡಿ ಶ್ರಮಿಸಿದರೆ ಮಾತ್ರ ಸಾಧ್ಯ ಈ ಕೂಡಲೇ ವಿತರಕರ ನೋವುಗಳಿಗೆ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಪತ್ರಿಕಾ ವಿತರಕರ ಒಕ್ಕೂಟನೆ ಈ ಮೂಲಕ ಒತ್ತಾಯಿಸುತ್ತಿದೆ ಪತ್ರಿಕಾ ದಿನಾಚರಣೆಯ ಈ ಸುಸಂದರ್ಭದಲ್ಲಿ ವಿತರಕರ ನೋವನ್ನು ಆಲಿಸಿ ಅವರೊಂದಿಗೆ ಸ್ಪಂದಿಸಬೇಕೆಂಬುದು ಪತ್ರಿಕಾ ದಿನಾಚರಣೆಯ ವಿಶೇಷ ಆಗಬೇಕೆಂಬುದು ಹಗಲಿರುಳು ಮಳೆ ಬಿಸಿಲು ಚಳಿ ಎನ್ನದೆ ಮನೆ ಮನೆ ತಿರುಗಿ ಮನೆಯಲ್ಲಿರುವ ಓದುಗರ ಮನಸ್ಸನ್ನ ಪತ್ರಿಕೆಯ ಕಡೆಗೆ ಒಲಿಸಿಕೊಳ್ಳುವ ಪತ್ರಿಕಾ ವಿತರಕರಶ್ರಮ ಅನನ್ಯ ಅವರಿಗೆ ಸಹಕರಿಸುವುದು ಸಂಪಾದಕ ಮಂಡಳಿಯ ಕರ್ತವ್ಯವೆಂದು ಈ ಸಂದರ್ಭದಲ್ಲಿ ತಿಳಿಸಿದರು