Tuesday, February 3, 2026
Tuesday, February 3, 2026

Murder In Mysore ರೀಲ್ಸ್ ಮೂಲಕ ಲವ್ ನಂತರ ಮದುವೆ ಕೊಲೆಯಲ್ಲಿ ಯುವತಿ ಕೊನೆ

Date:

Murder In Mysore ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಾ, ಯುವಕನ ಜೊತೆ ಲವ್ ನಲ್ಲಿ ಬಿದ್ದು ಮದುವೆಯಾಗಿದ್ದ ಮೈಸೂರು ಮೂಲದ ಯುವತಿ ಇದೀಗ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೈಸೂರಿನ ಕುಂಬಾರಕೊಪ್ಪಲು ನಿವಾಸಿ 23 ವರ್ಷದ ಮಂಜುಳ ಅಲಿಯಾಸ್ ನಯನ ಮೃತಪಟ್ಟ ಯುವತಿ. ಈಕೆಗೆ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವ ಹುಚ್ಚಿತ್ತು. ಈ ನಡುವೆ ಇನ್ಸ್ಟಾಗ್ರಾಮ್ ನಲ್ಲಿ ಬೆಳಗಾವಿ ಜಿಲ್ಲೆ ಮಚ್ಚೆ ಗ್ರಾಮದ ಬೀರೇಶ್ ಎಂಬುವವನ ಪರಿಚಯವಾಗಿ ಪ್ರೇಮಾಂಕುರವಾಗಿದೆ. ಈ ಹಿನ್ನೆಲೆಯಲ್ಲಿ ಮಂಜುಳ ಬೆಳಗಾವಿಗೆ ತೆರಳಿ ಒಂದು ವರ್ಷದ ಹಿಂದೆ ಬೀರೇಶ್ ನನ್ನು ವಿವಾಹವಾಗಿದ್ದಳು.

ಮೈಸೂರಿನಿಂದ ಬೆಳಗಾವಿಗೆ ಆಗಮಿಸಿದ್ದ ಮಂಜುಳಾಳನ್ನ ಪುಸಲಾಯಿಸಿ ಬೀರೇಶ್ ಮದುವೆಯಾಗಿದ್ದ. ಈ ಮಧ್ಯೆ ಮಂಜುಳ 3 ತಿಂಗಳ ಗರ್ಭಿಣಿಯಾಗಿದ್ದು, ಇದೀಗ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ.

Murder In Mysore ಪತಿ ಬೀರೇಶ್ ಮತ್ತು ಕುಟುಂಬದವರೇ ಮಂಜುಳಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಮಂಜುಳ ಪೋಷಕರು ಆರೋಪಿಸಿದ್ದಾರೆ. 3 ತಿಂಗಳ ಗರ್ಭೀಣಿಯಾಗಿದ್ದ ಮಂಜುಳಾಗೆ ಗರ್ಭಫಾತ ಮಾಡಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ .

ಒಪ್ಪದ ಹಿನ್ನೆಲೆಯಲ್ಲಿ ಹತ್ಯೆಗೈದಿದ್ದಾರೆ. ಕೊಲೆ ಮಾಡಿ ಪತಿ ಬೀರೇಶ್ ಕುಟುಂಬ ಪರಾರಿಯಾಗಿದ್ದಾರೆ ಎಂದು ಮಂಜುಳಾ ಪೋಷಕರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...