Achiever Coaching Center Shivamogga ಕೇಂದ್ರ ಸರ್ಕಾರಿ ಬ್ಯಾಂಕುಗಳಲ್ಲಿನ 2024ನೇ ಸಾಲಿನ 22,026ಹುದ್ದೆಗಳಿಗೆ ಹಾಗೂ ಸ್ಟಾಫ್ ಸೆಲೆಕ್ಷನ್ ಕಮಿಟಿ ಯ ಹುದ್ದೆಗಳಿಗೆ, ರೈಲ್ವೇಸ್ ಮತ್ತು ಇನ್ಸೂರೆನ್ಸ್ ಹಾಗೂ ಇನ್ನಿತರ ಕೇಂದ್ರ ಸಂಸ್ಥೆಗಳ ಸಾವಿರಾರು ಹುದ್ದೆಗಳಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ .
ಇದಕ್ಕೆ ಅಚೀವರ್ ಟ್ರಸ್ಟ್, ಅಚೀವರ್ ಕೋಚಿಂಗ್ ಸೆಂಟರ್ ಶಿವಮೊಗ್ಗ ಇವರ ಆಶ್ರಯದಲ್ಲಿ ಒಂದು ದಿನದ ಉಚಿತ ಕಾರ್ಯಾಗಾರವನ್ನು ಜುಲೈ 14ರಂದು ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮುಖ್ಯಸ್ಥ ವರುಣ್ ಟಿ. ನಾಯ್ಕ್,
ಈ ಎಲ್ಲ ಪರೀಕ್ಷೆಗಳಿಗೆ ಆಫ್ ಲೈನ್ ಮತ್ತು ಆನ್ ಲೈನ್ ಕೋಚಿಂಗ್ ಕ್ಲಾಸ್ ಜುಲೈ 15 ರಿಂದ ಪ್ರಾರಂಭವಾಗುತ್ತದೆ. ತರಬೇತಿಯಲ್ಲಿ ವಿಷಯವಾರು ನುರಿತ ತಜ್ಞರಿಂದ ಬೋಧನೆ, ಸ್ಟಡಿ ಮಟೀರಿಯಲ್, ವಿಷಯವಾರು ಪ್ರಾಕ್ಟಿಸ್ ಬುಕ್, ನೀಡಲಾಗುತ್ತದೆ ಎಂದರು.
ವಿಷಯವಾರು ಟೆಸ್ಟಗಳು, ಪೂರ್ಣ ಪ್ರಮಾಣದ ಪರೀಕ್ಷೆ, ಮಾಕ್ ಟೆಸ್ಟ್, ಒಂದು ಲಕ್ಷಕ್ಕೂ ಹೆಚ್ಚು ಪ್ರಶ್ನೆಗಳಿರುವ ಆನ್ ಲೈನ್ ಐಡಿ ನೀಡಲಾಗುವುದು.
9 ವರ್ಗಗಳಿಂದ ಈ ರೀತಿ ಕೋಚಿಂಗ ನೀಡುತ್ತಿದ್ದು, ಅಪಾರ ವಿದ್ಯಾರ್ಥಿಗಳು ಕೆಲಸ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಜುಲೈ 14 ರಂದು ಬ್ಯಾಂಕಿಂಗ್ ಜಾಬ್‌ಗಳಿಗೆ ಉಚಿತ ತರಬೇತಿ ಕಾರ್ಯಾಗಾರವನ್ನು ಆಚಿವ ಕೋಚಿಂಗ್ ಸೆಂಟರ್ ತಿಲಕ್ ನಗರ 1ನೇ ಕ್ರಾಸ್, ವಿಜೇಶ್ವರ ಕಾಂಪ್ಲೆಕ್ಸ್ ಇಲ್ಲಿ ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.
Achiever Coaching Center Shivamogga ಈ ಕಾರ್ಯಕ್ರಮದಲ್ಲಿ ಬ್ಯಾಂಕಿಂಗ್ ತಜ್ಞರು ಮತ್ತು ವಿಷಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದು ಆಸಕ್ತ ಸ್ಪರ್ಧಾರ್ಥಿಗಳು ಭಾಗವಹಿಸಲು ಕೋರಿದರು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ರ್ಸಂಖಯೆ 7812926702 ಅಥವಾ7337683668 ಇಲ್ಲಿಗೆ ಸಂಪರ್ಕಿಸಬಹುದು. ಅಥವಾ ಕಚೇರಿಗೆ ಬಂದು ಮಾಹಿತಿ ಪಡೆಯಬಹುದು ಎಂದರು.