Kamala Nehru College ಮಹಿಳೆಯರ ಸಂರಕ್ಷಣೆಗೆ ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ. ಇವೆಲ್ಲವೂ ಮಹಿಳೆ ಮತ್ತು ಹೆಣ್ಣುಮಕ್ಕಳ ಸುರಕ್ಷತೆಗಾಗಿ ರಚಿಸಲ್ಪಟ್ಟವುಗಳು. ಭ್ರೂಣದಿಂದ ಹಿಡಿದು, ಸಾವಿನವರೆಗೂ ಕಾನೂನುಗಳಿದ್ದರೂ ಸಹ ಅವುಗಳ ಅರಿವು ಮತ್ತು ಪ್ರಾಮಾಣಿಕ ಅನುಷ್ಠ್ಠಾನದಿಂದ ಮಾತ್ರ ಅದರ ಫಲ ಅನುಭವಿಸಲು ಸಾಧ್ಯ ಎಂದು ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ ಹೇಳಿದರು.
ಕರ್ನಾಟಕ ಸಂಘ ಮತ್ತು ಕಮಲಾ ನೆಹರೂ ಕಾಲೇಜು ಜಂಟಿಯಾಗಿ ಮಂಗಳವಾರ ಏರ್ಪಡಿಸಿದ್ದ ” ಮಹಿಳೆ ಮತ್ತು ಕಾನೂನು” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನುಗಳ ದುರ್ಬಳಿಕೆಯಿಂದ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಅದನ್ನು ತಡೆಗಟ್ಟಬೇಕಾದರೆ, ಇರುವ ಒಂದೇ ಸಾಧನವೆಂದರೆ ಕಾನೂನಿನ ಅರಿವು ಮೂಡಿಸುವುದು. ಸರ್ಕಾರ ರಚಿಸಿರುವ ಕಾನೂನು ಸೇವಾ ಪ್ರಾಧಿಕಾರದ ನೆರವನ್ನು ಉಚಿತವಾಗಿ ಪಡೆದು ಕಾನೂನು ನೆರವನ್ನು ಪಡೆಯಬಹುದಾಗಿದೆ ಮತ್ತು ಪೊಕ್ಸೋ ಕಾಯಿದೆಯ ಬಗ್ಗೆಯೂ ಸಹ ತಿಳಿಯಬೇಕು ಎಂದು ಕಿವಿಮಾತು ಹೇಳಿದರು. ಅಲ್ಲದೆ ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಲದಲ್ಲಿಯಾಗಲೀ, ಅಪರಿಚಿತರೊಂದಿಗಾಗಲೀ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳಬಾರದು ಎಂದು ತಿಳಿಸಿದರು.
Kamala Nehru College ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರರಾಜ್ ಮಾತನಾಡಿ, ಹೆಣ್ಣುಮಕ್ಕಳ ಸುರಕ್ಷತೆಗೆ ಇಷ್ಟ್ಟೆಲ್ಲ ಕಾನೂನುಗಳಿದ್ದರೂ ಸಹ ವಷದಿಂದ ವಷಕ್ಕೆ ಅಪರಾಧಗಳ ಸಂಖ್ಯೆ ಏರುಮುಖವಾಗುತ್ತಿರುವುದು ಕಳವಳಕಾರಿ. ರಾಷ್ಟ್ರೀಯ ಅಪರಾಧ ಸಂಶೋಧನಾ ಸಂಸ್ಥೆಯ ಒಂದು ವರದಿಯಂತೆ ೨೦೨೧ರಲ್ಲಿ ೪,೨೮,೬೫೦ ಮಹಿಳಾ ದೌರ್ಜನ್ಯ ವರದಿಯಾಗಿದೆ. ಅಂದರೆ ಹಿಂದಿನ ವಷಕ್ಕಿಂತ ಶೇ.೮೭ ಹೆಚ್ಚು, ಇದನ್ನು ತಡೆಯಬೇಕಾದರೆ ಯುವಕರಿಗೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ಹೆಚ್ಚು ಕಾನೂನು ಅರಿವು ಇರುವುದು ಅವಶ್ಯ ಎಂದು ಅಭಿಪ್ರಾಯಪಟ್ಟರು.
ಕಮಲಾ ನೆಹರೂ ಕಾಲೇಜು ಪ್ರಾಚಾರ್ಯ ಎಂ.ಆರ್.ಜಗದೀಶ್, ಪ್ರೊ. .ಓಂಕಾರಪ್ಪ ಮತ್ತು . ಎಂ. ಆಶಾಲತಾ ಉಪಸ್ಥಿತರಿದ್ದರು.
ದಿವ್ಯಾ ಸ್ವಾಗತಿಸಿದರು. ಕಾವ್ಯಾ ವಂದಿಸಿದರು. ಸುಚಿತ್ರಾ ನಿರೂಪಿಸಿದರು.
Kamala Nehru College ವಿದ್ಯಾರ್ಥಿನಿಯರು ಜಾಲತಾಣದಲ್ಲಿ ಖಾಸಗಿ ಮಾಹಿತಿ ಹಂಚಿಕೊಳ್ಳಬೇಡಿ – ಅನಿಲ್ ಕುಮಾರ್ ಭೂಮರೆಡ್ಡಿ
Date: