Saturday, December 6, 2025
Saturday, December 6, 2025

Nityotsava Seva Trust ದಂಪತಿಗಳು ಪರಸ್ಪರ ಕಷ್ಟ ಹಂಚಿಕೊಳ್ಳಬೇಕು-ಉಳ್ಳಿ ದರ್ಶನ್

Date:

Nityotsava Seva Trust ಜೀವನದಲ್ಲಿ ಎದುರಾಗುವ ಕಷ್ಟ ಸುಖ ಸಮಾನವಾಗಿ ಸ್ವೀಕರಿಸಿದಾಗ ದಂಪತಿ ಅರ್ಥಪೂರ್ಣ ಜೀವನ ನಡೆಸಬಹುದು ಎಂದು ಪುರಸಭೆ ಸದಸ್ಯ ಉಳ್ಳಿ ದರ್ಶನ್ ಹೇಳಿದರು.

ಶಿಕಾರಿಪುರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಅಂಬೇಡ್ಕರ್, ಬಸವೇಶ್ವರ ಜಯಂತಿ ಪ್ರಯುಕ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ, ನಿತ್ಯೋತ್ಸವ ಸೇವಾ ಟ್ರಸ್ಟ್, ಆಶ್ರಿತ ಪೌಂಡೇಶನ್ ಆಶ್ರಯದಲ್ಲಿ ನಡೆದ 6ನೇ ವರ್ಷದ ಸರಳ ಸಾಮೂಹಿಕ ವಿವಾಹ ಕಾರ್‍ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕ ಕಾಲಘಟ್ಟದಲ್ಲಿ ವಿವಾಹ ಬಂಧನ ಗಟ್ಟಿಯಾಗಿ ನಿಲ್ಲುತ್ತಿಲ್ಲ ಅದಕ್ಕೆ ಗಂಡ ಹೆಂಡತಿಯಲ್ಲಿ ಪರಸ್ಪರ ಅರಿವಿನ ಕೊರತೆ ಸಿಟ್ಟಿಗೆ ಬುದ್ಧಿಕೊಡುವುದು ಕಾರಣವಾಗಿದೆ. ದಾಂಪತ್ಯ ಜೀವನದಲ್ಲಿ ಏನೇ ಕಷ್ಟ ಸುಖ ಬಂದರೂ ಸಮಾನವಾಗಿ ನೋಡುವ ಅರಿವು ಇಬ್ಬರಿಗೂ ಬರಬೇಕಿದೆ ಅದಕ್ಕಾಗಿ ಕೂತು ಮಾತನಾಡುವ ಕಷ್ಟ ಹಂಚಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಬಾಪೂಜಿ ವಿದ್ಯಾಸಂಸ್ಥೆ ಸಂಸ್ಥಾಪಕ ಬಿ.ಪಾಪಯ್ಯ ಮಾತನಾಡಿ, ವಿವಾಹ ಕಾರ್‍ಯ ಇಂದು ಪರಸ್ಪರ ಎರಡು ಕುಟುಂಬ ಕೂಡಿಸುವ ಕಾರ್‍ಯಕ್ರಮ ಆಗಬೇಕು ಬದಲಿಗೆ ಅದು ಈವೆಂಟ್ ಮ್ಯಾನೇಜ್‌ಮೆಂಟ್‌ಗೆ ಸೀಮಿತವಾಗುತ್ತಿದೆ ಅದಕ್ಕಾಗಿ ದುಂದುವೆಚ್ಚ ಮಾಡಲಾಗುತ್ತಿದೆ. ಪ್ರೀತಿಸಿದ ಯುವ ಮನಸ್ಸುಗಳೆ ಇಂದು ಹೆಚ್ಚು ದೂರವಾಗುತ್ತಿರುವುದು ಕಳವಳಕಾರಿ. ಸರಳ ಸಾಮೂಹಿಕ ವಿವಾಹ ಮಾದರಿಯಾಗಬೇಕಿದೆ ವಿವಾಹ ಕಾರ್‍ಯದಲ್ಲಿ ಮನಸ್ಸು ಬೆಸೆಯುವ, ಕುಟುಂಬ ಅಥೈಸುವ ಕಾರ್‍ಯ ನಡೆಯಬೇಕಿದೆ ಅದಕ್ಕೆ ಈ ಕಾರ್‍ಯಕ್ರಮ ನಾದಿಯಾಗಲಿ ಎಂದು ಹೇಳಿದರು.

Nityotsava Seva Trust ನಿತ್ಯೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಚುರ್ಚಿಗುಂಡಿ ಜಗದೀಶ್ ಮಾತನಾಡಿ, ಆಧುನಿಕ ವಿವಾಹ ಕಾರ್‍ಯಕ್ರಮ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ಸಾಲ ಮಾಡಿ ತುಪ್ಪು ತಿನ್ನುವುದು ಹೆಚ್ಚುತ್ತಿದೆ ಅದನ್ನು ತಪ್ಪಿಸಿ ದಲಿತ, ಹಿಂದುಳಿದ ಕುಟುಂಬಕ್ಕೆ ಆರ್ಥಿಕ ಹೊರೆ ತಪ್ಪಿಸುವುದಕ್ಕಾಗಿ ಸರಳ ಸಾಮೂಹಿಕ ವಿವಾಹ ನಡೆಸುತ್ತಿದ್ದು ವರ್ಷದಿಂದ ವರ್ಷಕ್ಕೆ ಅದು ಹೆಚ್ಚಾಗಬೇಕು ಅದಕ್ಕಾಗಿ ಎಲ್ಲರೂ ಕೈಜೋಡಿಸಿ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ನಂಜುಂಡಿ, ಜನಜಾಗೃತಿ ವೇದಿಕೆ ಸದಸ್ಯ ಸುನಿತಾ, ಕಟ್ಟಡ ಕಾರ್ಮಿಕ ಸಂಘಟನೆ ಅಧ್ಯಕ್ಷ ಸಂಜಯ್‌ಕುಮಾರ್, ಹನುಮಂತಪ್ಪ, ಲಕ್ಷ್ಮಣ್, ಪರಮೇಶ್, ತಿಮ್ಮಪ್ಪ, ಹಾಲಪ್ಪ ಹಾಬೆ ಇತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...